Site icon Vistara News

IPL 2024: ಐಪಿಎಲ್​ ಮಧ್ಯೆ ಫ್ರಾಂಚೈಸಿಗಳ ದಿಢೀರ್‌ ಸಭೆ ಕರೆದ ಬಿಸಿಸಿಐ​; ಕಾರಣವೇನು?

IPL 2024

ಮುಂಬಯಿ: 17ನೇ ಆವೃತ್ತಿಯ ಐಪಿಎಲ್(IPL 2024)​ ಪಂದ್ಯಾವಳಿಗಳು ನಡೆಯುತ್ತಿರುವ ಮಧ್ಯದಲ್ಲೇ ಬಿಸಿಸಿಐ(BCCI) ಎಲ್ಲ 10 ತಂಡಗಳ ಮಾಲಿಕರ(IPL owners) ಸಭೆ ಕರೆದಿದೆ. ಏಪ್ರಿಲ್ 16ರಂದು ಅಹಮದಾಬಾದ್‌ನಲ್ಲಿ ಈ ಸಭೆ ನಡೆಯಲಿದೆ. ಮೂಲಗಳ ಪ್ರಕಾರ ಮುಂದಿನ ವರ್ಷ ನಡೆಯುವ ಆಟಗಾರರ ಮೆಗಾ ಹರಾಜಿನ(ipl 2025 mega auction) ಬಗ್ಗೆ ಚರ್ಚೆ ನಡೆಸಲು ಈ ಸಭೆ ಕರೆಯಲಾಗಿದೆ ಎನ್ನಲಾಗಿದೆ.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ, ಆಟಗಾರರ ಉಳಿಸಿಕೊಳ್ಳುವಿಕೆ, ಆಟಗಾರರ ಖರೀದಿಗೆ ಬಜೆಟ್‌ ಹೆಚ್ಚಿಸುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಕಾರ್ಯದರ್ಶಿ ಜಯ್‌ ಶಾ, ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಲ್‌ ಪಾಲ್ಗೊಳ್ಳಲಿದ್ದಾರೆ. ಆದರೆ ಬಿಸಿಸಿಐ ಮೂಲಗಳು ಇದೊಂದು ಅನೌಪಚಾರಿಕ ಸಭೆಯಾಗಿದೆ ಎಂದು ಹೇಳಿದೆ.

ಕ್ರಿಕ್​ಇನ್ಫೊ ವರದಿಯ ಪ್ರಕಾರ ಈ ಸಭೆ ಮೆಗಾ ಹರಾಜು ಪ್ರಕ್ರಿಯೆಯ ಬಗ್ಗೆ ಚರ್ಚಿಸಲೆಂದೇ ಕರೆದ ಸಭೆ ಎಂದು ಹೇಳಿದೆ. ಜತೆಗೆ ಕೆಲವು ಫ್ರಾಂಚೈಸಿಗಳು ಆಟಗಾರರ ರೀಟೈನ್ ಅವಕಾಶವನ್ನು 8ಕ್ಕೆ ಹೆಚ್ಚಿಸುವಂತೆ ಬಿಸಿಸಿಐ ಬಳಿ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದು ಮಾತ್ರವಲ್ಲದೆ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM(ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ) ಕಾರ್ಡ್ ಬಳಸುವ ಬಗ್ಗೆಯೂ ಫ್ರಾಂಚೈಸಿ ಡಿಮ್ಯಾಂಡ್ ಮಾಡಲಿದೆ. 2018ರ ಮೆಗಾ ಹರಾಜಿನಲ್ಲಿ RTMಗೆ ಅವಕಾಶವಿತ್ತು. ಆದರೆ 2022ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಇದನ್ನು ಕೈಬಿಡಲಾಗಿತ್ತು, ಇದೀಗ ಮತ್ತೆ ಈ ನಿಯವನ್ನು ಜಾರಿಗೆ ತರಲು ಫ್ರಾಂಚೈಸಿಗಳು ಒಳವು ತೋರಿದೆ ಎನ್ನಲಾಗಿದೆ. ಐಪಿಎಲ್​ ಮೂಲಗಳ ಪ್ರಕಾರ ಪ್ರತಿ ತಂಡ ಮುಂಬರುವ 17ನೇ ಆವೃತ್ತಿಯ ನಂತರದಲ್ಲಿ 3-4 ಆಟಗಾರರನ್ನು ಮಾತ್ರ ರಿಟೇನ್​ ಮಾಡಿಕೊಳ್ಳಲು ಅವಕಾಶ ಲಭಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ  IPL 2024: ರಾಜಸ್ಥಾನ್​ vs ಕೆಕೆಆರ್​ ಪಂದ್ಯದ ದಿನಾಂಕ ಬದಲಾವಣೆ ಸಾಧ್ಯತೆ!

ಇಂದಿನ ಪಂದ್ಯ


ಮಂಗಳವಾರದ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ನಗರದಲ್ಲಿ ಮೋಡ ಕವಿ ವಾತಾವರಣ ಕಂಡು ಬಂದ ಕಾರಣ ಈ ಪಂದ್ಯಕ್ಕೆ ಮಳೆಯ ಭೀತಿ ಕೂಡ ಎದುರಾಗಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ಪಿಚ್ ವರದಿ


ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್​​ ಬ್ಯಾಟರ್​ಗಳಿಗೆ ಸ್ವರ್ಗವಾಗಿದೆ. ಕಡಿಮೆ ಅಂತರದ ಬೌಂಡರಿಗಳೊಂದಿಗೆ ಹೆಚ್ಚಿನ ಸ್ಕೋರಿಂಗ್ ಮುಖಾಮುಖಿ ಇಲ್ಲಿ ಮಾಮೂಲಿ. ಸ್ಪಿನ್ನರ್​ಗಳಿಗೆ ಅಲ್ಪ ಸಹಾಯ ಮಾಡುವ ಈ ಪಿಚ್​ ತಾಳ್ಮೆ ವಹಿಸಿದ ಬ್ಯಾಟರ್​ಗಳಿಗೆ ದೊಡ್ಡ ಮೊತ್ತ ಪೇರಿಸಲು ನೆರವಾಗುತ್ತದೆ. ಟಾಸ್ ಗೆದ್ದ ನಾಯಕ ಚೇಸಿಂಗ್ ಮಾಡಲು ಮುಂದಾಗುತ್ತಾರೆ.

Exit mobile version