Site icon Vistara News

IPL 2024: ಮುಂಬೈ ನಾಯಕತ್ವ ಬದಲಾವಣೆ ಮಾಡಿದ್ದು ದೊಡ್ಡ ವಿವಾದ ಎಂದ ಎಬಿಡಿ

rohit sharma and hardik pandya

ಮುಂಬಯಿ: ಹಾರ್ದಿಕ್​ ಪಾಂಡ್ಯ(Hardik Pandya) ಅವರನ್ನು ಐಪಿಎಲ್(IPL 2024)​ ಟ್ರೇಡ್​ ಮೂಲಕ ಗುಜರಾತ್(Gujarat Titans)​ ತಂಡದಿಂದ ಮುಂಬೈ ಇಂಡಿಯನ್ಸ್(Mumbai Indians)​ ತನ್ನ ಬಳಗಕ್ಕೆ ಸೇರಿಸಿಕೊಂಡಿತ್ತು. ಅಲ್ಲದೆ ನಾಯಕತ್ವವನ್ನು ಕೂಡ ನೀಡಿತ್ತು. 5 ಬಾರಿ ತಂಡಕ್ಕೆ ಕಪ್​ ಗೆಲ್ಲಿಸಿಕೊಟ್ಟ ನಾಯಕ ರೋಹಿತ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಫ್ರಾಂಚೈಸಿಯ ಈ ನಡೆ ಬಗ್ಗೆ ಮಾಜಿ ಮತ್ತು ಹಾಲಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಪಟ್ಟಿಗೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್(AB de Villiers)​ ಕೂಡ ಸೇರ್ಪಡೆಗೊಂಡಿದ್ದಾರೆ.

ಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಬದಲಾವಣೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮುಂಬೈ ಮಾಡಿದ ದೊಡ್ಡ ವಿವಾದವೆಂದರೆ ನಾಯಕತ್ವ ಬದಲಾವಣೆ ಎಂದು ಹೇಳಿದ್ದಾರೆ.

“ಮುಂಬೈ ಇಂಡಿಯನ್ಸ್ ಐಪಿಎಲ್‌ನ ಶ್ರೇಷ್ಠ ತಂಡಗಳಲ್ಲಿ ಒಂದಾಗಿದೆ. ಇದು ನಂಬಲಾಗದಷ್ಟು ಯಶಸ್ವಿ ತಂಡ ಮತ್ತು ಐದು ಪ್ರಶಸ್ತಿಗಳನ್ನು ಗೆದ್ದ ತಂಡವಾಗಿದೆ. ಈ ತಂಡವನ್ನು ಮುನ್ನಡೆಸಿದ್ದ ರೋಹಿತ್​ ನಿಜಕ್ಕೂ ಚಾಂಪಿಯನ್​ ಆಟಗಾರ. ಕಳೆದ ಕೆಲವು ತಿಂಗಳುಗಳಿಂದ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಹೊಸ ನಾಯಕನಾಗಿ ಬರುತ್ತಿದ್ದಾರೆ ಎಂಬ ವಿಚಾರ ದೊಡ್ಡ ವಿವಾದವಾಗಿತ್ತು. ಆದರೂ ತಂಡವು ಸಂತೋಷವಾಗಿರುವಂತೆ ತೋರುತ್ತದೆ. ಎಲ್ಲ ಮುನಿಸನ್ನು ಮರೆತು ಈ ಬಾರಿಯೂ ತಂಡ ಉತ್ತಮ ಪ್ರದರ್ಶನ ತೋರಲಿ” ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್​ನ ಆರಂಭಿಕ 2 ಪಂದ್ಯಕ್ಕೆ ಸೂರ್ಯಕುಮಾರ್ ಅಲಭ್ಯ!

“ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ಮೂಲ ತಂಡವಾದ ಮುಂಬೈ ಇಂಡಿಯನ್ಸ್‌ನ ನೀಲಿ ಜೆರ್ಸಿಯಲ್ಲಿ ನೋಡುವುದು ಅದ್ಭುತವಾಗಿದೆ. ಅಚ್ಚರಿ ಎಂದರೆ ಪಾಂಡ್ಯ ತಮ್ಮ ಮಾಜಿ ತಂಡದವಾದ ಗುಜರಾತ್​ ವಿರುದ್ಧ ಆಡುವವ ಮೂಲಕ ಈ ಬಾರಿಯ ಐಪಿಎಲ್​ ಅಭಿಯಾನ ಆರಂಭಿಸಲಿರುವುದು ವಿಪರ್ಯಾಸ” ಎಂದು ವಿಲಿಯರ್ಸ್ ಅಭಿಪ್ರಾಯಪಟ್ಟರು.

ಪಾಂಡ್ಯಗೆ ನಾಯಕತ್ವ ನೀಡಿದ ಕುರಿತು ಫ್ರಾಂಚೈಸಿಯ ಜಾಗತಿಕ ಕ್ರಿಕೆಟ್ ಮುಖ್ಯಸ್ಥ ಮಹೇಲ ಜಯವರ್ಧನೆ(Mahela Jayawardene) ಸ್ಪಷ್ಟನೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್‌ನ(mumbai indians) ಭವಿಷ್ಯಕ್ಕಾಗಿ ಹಾರ್ದಿಕ್​ಗೆ ನಾಯಕತ್ವ ನೀಡುವುದು ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದರು.

ರೋಹಿತ್​ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ ವಿಚಾರದಲ್ಲಿ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ತಂಡದ ಸಹ ಆಟಗಾರರಾದ ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಫ್ರಾಂಚೈಸಿಗೆ ತಿವಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಗೂಢ ಅರ್ಥದ ಪೋಸ್ಟ್​ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದರು.

Exit mobile version