Site icon Vistara News

IPL 2024: ಐಪಿಎಲ್​ ಪ್ರಿಯರಿಗೆ ಇಂದು ಡಬಲ್​ ಧಮಾಕಾ

IPL 2024

ಬೆಂಗಳೂರು: ಇಂದು ನಡೆಯುವ ಐಪಿಎಲ್(IPL 2024)​ ಟೂರ್ನಿಯಲ್ಲಿ 2 ಪಂದ್ಯಗಳು ನಡೆಯಲಿದೆ. ದಿನದ ಮೊದಲ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​(Gujarat Titans) ಮತ್ತು ಸನ್​ರೈಸರ್ಸ್ ಹೈದರಾಬಾದ್(Sunrisers Hyderabad)​ ಸೆಣಸಾಡಲಿದೆ. ಈ ಪಂದ್ಯ ಹಗಲು ಪಂದ್ಯವಾಗಿದೆ. ರಾತ್ರಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಹಾಗೂ ಗೆಲುವೇ ಕಾಣದ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಮುಖಾಮುಖಿಯಾಗಲಿವೆ. ಹೀಗಾಗಿ ಕ್ರಿಕೆಟ್​ ಅಭಿಮಾನಿಗಳಿಗೆ ಇಂದು ಭರ್ಜರಿ ರಸದೌತಣ ಸಿಗಲಿದೆ.

ಸನ್​ರೈಸರ್ಸ್​ vs ಗುಜರಾತ್​– (ಪಂದ್ಯ ಆರಂಭ 3.30)


ಹೈದರಾಬಾದ್​ ತಂಡದಲ್ಲಿ ಅನುಭವಿ ಬೌಲರ್​ಗಳಿದ್ದರೂ ಕೂಡ ಕ್ಲಿಕ್​ ಆದದ್ದು ಬ್ಯಾಟಿಂಗ್​ ವಿಭಾಗ ಮಾತ್ರ. ಈಗಾಗಲೇ ತಂಡ ಆಡಿದ 2 ಪಂದ್ಯಗಳಲ್ಲಿಯೂ ಇದು ಸಾಬೀತಾಗಿದೆ. ಹೀಗಾಗಿ ಈ ಪಂದ್ಯಕ್ಕೂ ತಂಡ ಬ್ಯಾಟಿಂಗ್​ ಬಲವನ್ನೇ ನೆಚ್ಚಿಕೊಂಡಿದೆ. ಕನ್ನಡಿಗ ಮಯಾಂಕ್​ ಅಗರ್ವಾಲ್​ ಮತ್ತು ವಿಶ್ವಕಪ್ ಹೀರೊ ಆಸ್ಟ್ರೇಲಿಯಾದ ಟ್ರಾವಿಸ್​ ಹೆಡ್​ ಸ್ಫೋಟಕ ಬ್ಯಾಟಿಂಗ್​ ಮೂಲಕ ತಮಡಕ್ಕೆ ಉತ್ತಮ ಆರಂಭ ಒದಗಿಸಿದರೆ, ಆ ಬಳಿಕ ಅಭಿಷೇಕ್​ ಶರ್ಮ, ಮಾರ್ಕ್ರಮ್​ ಮತ್ತು ಹೆನ್ರಿಚ್​ ಕ್ಲಾಸೆನ್​ ಮಧ್ಯಮ ಕ್ರಮಾಂಕದಲ್ಲಿ ಜಿದ್ದಿಗೆ ಬಿದ್ದವರಂತೆ ಬ್ಯಾಟಿ ಬೇಸಿ ತಂಡದ ಬೃಹತ್​ ಮೊತ್ತಕ್ಕೆ ನೆರವಾಗುತ್ತಿದ್ದಾರೆ. ಹೀಗಾಗಿ ಬ್ಯಾಟಿಂಗ್​ ವಿಭಾಗದಲ್ಲಿ ಯಾವುದೇ ಕೊರತೆ ಇಲ್ಲ.

5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡಕ್ಕೆ ಮೊದಲ ಪಂದ್ಯದಲ್ಲಿ ಸೋಲಿಣಿಸಿದರೂ ಕೂಡ ಗುಜರಾತ್​ ಸಾಮಾನ್ಯ ತಂಡವಾಗಿದೆ. ಇಲ್ಲಿ ಸ್ಟಾರ್​ ಆಟಗಾರರು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಕಳೆದ ಆವೃತ್ತಿಯಲ್ಲಿ ಗರಿಷ್ಠ ಸ್ಕೋರರ್​​ ಆಗಿದ್ದ ಶುಭಮನ್​ ಗಿಲ್​ ತಂಡದ ನಾಯಕನಾದ ಬಳಿಕ ನಿರೀಕ್ಷಿತ ಪ್ರದರ್ಶನ ತೋರಿ ಬರುತ್ತಿಲ್ಲ. ಇದಕ್ಕೆ ನಾಯಕತ್ವದ ಒತ್ತಡವೂ ಕೂಡ ಕಾರಣವಾಗಿರಬಹುದು. ಬೌಲಿಂಗ್​ನಲ್ಲಿ ಮೋಹಿತ್​ ಶರ್ಮ ಹೊರತುಪಡಿಸಿ ಉಳಿದೆಲ್ಲರೂ ಸರಿಯಾಗಿ ದಂಡಿಸಿಕೊಳ್ಳುತ್ತಿದ್ದಾರೆ. ರಶೀದ್​ ಖಾನ್​ ಸ್ಪಿನ್​ ಮ್ಯಾಜಿಕ್​ ಕೂಡ ವರ್ಕ್ ಆಗುತ್ತಿಲ್ಲ. ಡೇವಿಡ್​ ಮಿಲ್ಲರ್​ ಒಂದೆರಡು ಬೌಂಡರಿಗಿ ಸೀಮಿತರಾಗಿದ್ದಾರೆ. ಹೀಗಾಗಿ ತಂಡದ ಮೇಲೆ ಹೆಚ್ಚಿನ ಭರವಸೆ ಇಡುವುದು ಕಷ್ಟ.

ಇದನ್ನೂ ಓದಿ IPL 2024 Points Table: ಕನ್ನಡಿಗ ರಾಹುಲ್​ ಸಾರಥ್ಯದ ಲಕ್ನೋಗೆ ಗೆಲುವು; ಅಂಕಪಟ್ಟಿಯಲ್ಲಿ ಭಾರೀ ಕುಸಿತ ಕಂಡ ಆರ್​ಸಿಬಿ

ಚೆನ್ನೈ vs ಡೆಲ್ಲಿ (ಪಂದ್ಯ ಆರಂಭ 7.30)


ಚೆನ್ನೈ ತಂಡ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ಎಲ್ಲ ವಿಭಾಗದಲ್ಲಿಯೂ ಅತ್ಯಂತ ಬಲಿಷ್ಠ ಮತ್ತು ಪರಿಪೂರ್ಣ ತಂಡವಾಗಿದೆ. ಅದರಲ್ಲೂ ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿಯುವ ಶಿವಂ ದುಬೆ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಶೈಲಿಯ ಮೂಲಕ ಪ್ರತಿ ಪಂದ್ಯದಲ್ಲಿಯೂ ಎದುರಾಳಿ ತಂಡಕ್ಕೆ ದೊಡ್ಡ ಇಂಪ್ಯಾಕ್ಟ್​ ಆಗಿ ಕಾಡುತ್ತಿದ್ದಾರೆ. ಚೊಚ್ಚಲ ಐಪಿಎಲ್​ ಟೂರ್ನಿಯನ್ನಾಡುತ್ತಿರುವ ನ್ಯೂಜಿಲ್ಯಾಂಡ್​ನ ರಚಿನ್​ ರವಿಂದ್ರ ಕೂಡ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ಪರ ಯಾರು ಕೂಡ ನಿಂತು ಆಡುವ ಆಟಗಾರರಿಲ್ಲ. ಇದು ತಂಡದ ಸೋಲಿಗೆ ಪ್ರಮುಖ ಕಾರಣ. ಮಿಚೆಲ್​ ಮಾರ್ಷ್​, ಡೇವಿಡ್​ ವಾರ್ನರ್​, ನಾಯಕ ರಿಷಭ್​ ಪಂತ್​ ಕ್ರೀಸ್​ಗೆ ಇಳಿದ ತಕ್ಷಣ ಬಡಬಡನೆ ಒಂದೆರಡು ಸಿಕ್ಸರ್​ ಬಾರಿಸಿ ಪೆವಿಲಿಯನ್​ ಸೇರುತ್ತಿದ್ದಾರೆ. ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಬಲ್ಲ ಆಟಗಾರರ ಕೊರತೆ ತಂಡದಲ್ಲಿ ಎದ್ದು ಕಾಣುತ್ತಿದೆ. ಇದಕ್ಕೆ ಕಳೆದ 2 ಪಂದ್ಯಗಳ ಫಲಿತಾಂಶವೇ ಉತ್ತಮ ನಿದರ್ಶನ. ಗೆಲುವಿನ ಅಂಚಿನವರೆಗೆ ಬಂದರೂ ಕೂಡ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

Exit mobile version