Site icon Vistara News

IPL 2024: ಬಸ್‌ ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

IPL 2024

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ(Chennai Super Kings) ಇಲ್ಲಿನ ಮೆಟ್ರೋಪಾಲಿಟನ್‌ ಟ್ರಾನ್ಸ್‌ಪೋರ್ಟ್ ಕಾರ್ಪೋರೇಶನ್‌ ಲಿಮಿಟೆಡ್‌ (ಎಂಟಿಸಿ) ಬಸ್‌ ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಗುಣಮಟ್ಟದ 8 ಸಾವಿರ ಲೋಹದ ವಿಸಿಲ್‌ಗ‌ಳನ್ನು ಕಂಡಕ್ಟರ್‌ಗಳಿಗೆ ನೀಡಿದೆ. ಈ ವಿಚಾರವನ್ನು ಚೆನ್ನೈ ತಂಡ ತನ್ನ ಅಧಿಕೃತ ಟ್ವೀಟರ್​ ಎಕ್ಸ್​ ಪೋಸ್ಟ್​ ಮೂಲಕ ತಿಳಿಸಿದೆ. ಪ್ಲಾಸ್ಟಿಕ್‌ ವಿಸಿಲ್‌ಗ‌ಳ ಬಳಕೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್‌ ಹೇಳಿದ್ದಾರೆ.

ವಿಸಿಲ್‌ ಪೋಡ್​(ವಿಸಿಲ್‌ ಹಾಕು)(WhistlePodu) ಎನ್ನುವುದು ಚೆನ್ನೈ ತಂಡದ ಪ್ರಧಾನ ಸ್ಲೋಗನ್​ ಆಗಿದೆ. ಈ ಸ್ಲೋಗನ್​ಗೆ ತಕ್ಕಂತೆ ಇದೀಗ ಫ್ರಾಂಚೈಸಿ ಬಸ್‌ ಕಂಡಕ್ಟರ್‌ಗಳಿಗೆ ದೀರ್ಘ‌ ಬಾಳಿಕೆಯ ಮೆಟಲ್‌ ವಿಸಿಲ್‌ಗಳನ್ನು ನೀಡಿದೆ. ಚೆನ್ನೈ ತಂಡಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದು ತಂಡ ಅಭಿಮಾನಕೋಸ್ಕರವಾದರೂ ಕಂಡಕ್ಟರ್‌ಗಳು ಈ ಮೆಟಲ್‌ ವಿಸಿಲ್‌ಗಳನ್ನು ತಪ್ಪದೆ ಬಳಕೆ ಮಾಡಲಿದ್ದಾರೆ.

ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಈ ಬಾರಿ ಆಡಿರುವ 11 ಪಂದ್ಯಗಳಲ್ಲಿ 6 ಗೆಲುವು 5 ಸೋಲು ಕಂಡು 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡಕ್ಕೆ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು ಇದರಲ್ಲಿ 2 ಪಂದ್ಯ ಗೆದ್ದರೆ ಪ್ಲೇ ಆಫ್​ ಟಿಕೆಟ್​ ಸಿಗಲಿದೆ. ಮುಂದಿನ ಪಂದ್ಯವನ್ನು ಮೇ 12ರಂದು ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆಡಲಿದೆ.

ಇದನ್ನೂ ಓದಿ IPL 2024: ಶತಕ ಬಾರಿಸಿ ಟಿ20ಯಲ್ಲಿ ದಾಖಲೆ ಬರೆದ ಸೂರ್ಯಕುಮಾರ್ ಯಾದವ್​​

ತಂಡವನ್ನು 5 ಬಾರಿ ಚಾಂಪಿಯನ್​ ಮಾಡಿದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಈ ಬಾರಿಯ ಐಪಿಎಲ್(IPL 2024)​ ಟೂರ್ನಿ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಇದೇ ಕಾರಣದಿಂದ ಅವರು ನಾಯಕತ್ವವನ್ನು ಋತುರಾಜ್​ ಗಾಯಕ್ವಾಡ್​ಗೆ ನೀಡಿದ್ದರು. ಧೋನಿ ಅವರು ಐಪಿಎಲ್​ ನಿವೃತ್ತಿಯಾದರೂ ಕೂಡ ಚೆನ್ನೈ ತಂಡದೊಂದಿಗಿನ ಒಡನಾಟ ಮಾತ್ರ ಮುಂದುವರಿಯುವ ಸಾಧ್ಯತೆ ಅಧಿಕವಾಗಿದೆ. ತಂಡದ ಮೆಂಟರ್​ ಆಗಿ ಅವರು ಕಾರ್ಯ ನಿರ್ವಹಿಸಬಹುದು. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​118316 (+1.453)
ರಾಜಸ್ಥಾನ್​ ರಾಯಲ್ಸ್​​​108216 (+0.622)
ಚೆನ್ನೈ​​116514 (+0.700)
ಹೈದರಾಬಾದ್​116512 (-0.065)
ಲಕ್ನೋ​116512 (-0.371)
ಡೆಲ್ಲಿ115610 (-0.442)
ಆರ್​ಸಿಬಿ11478 (-0.049)
ಪಂಜಾಬ್​10468 (-0.062)
ಮುಂಬೈ12488 (-0.212)
ಗುಜರಾತ್​11478 (-1.320)
Exit mobile version