Site icon Vistara News

IPL 2024: ಸಂಜು ಕೆಣಕಿದ ಪಾಂಡ್ಯ; ಹ್ಯಾಟ್ರಿಕ್​​ ಸಿಕ್ಸರ್​ ಹೊಡೆಸಿಕೊಂಡ ರಶೀದ್​ ಖಾನ್​

sanju samson and hardik pandya

ಬೆಂಗಳೂರು: ಹೊಡಿ-ಬಡಿ ಶೈಲಿಯ ಐಪಿಎಲ್(IPL 2024)​ ಕ್ರಿಕೆಟ್​ ಟೂರ್ನಿ ಆರಂಭಕ್ಕೆ ಕೇವಲ 2 ದಿನ ಮಾತ್ರ ಬಾಕಿ ಉಳಿದಿದೆ. ಎಲ್ಲ ಫ್ರಾಂಚೈಸಿಗಳು ಕೂಡ ಕಪ್​ ಗೆಲ್ಲಲು ಬರದಿಂದ ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲೇ ಕಳೆದ ವರ್ಷದ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್(sanju samson)​ ಅವರು ಬಾರಿಸಿದ ಹ್ಯಾಟ್ರಿಕ್​ ಸಿಕ್ಸರ್​ನ ವಿಡಿಯೊವೊಂದು ಈಗ ವೈರಲ್​ ಆಗಿದೆ.

ಕೆಣಕಿದ ಪಾಂಡ್ಯಗೆ ಸಿಕ್ಸರ್​ ಮೂಲಕ ಉತ್ತರ ನೀಡಿದ ಸಂಜು


ಅದು ಗುಜರಾತ್​ ವಿರುದ್ಧದ ಪಂದ್ಯವಾಗಿತ್ತು. ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ರಾಜಸ್ಥಾನ್​ ತಂಡ 4 ರನ್​ಗಳಿಗೆ 2 ವಿಕೆಟ್​ ಕಳೆದುಕೊಳ್ಳುವ ಮೂಲಕ ನಿರಾಸೆ ಎದುರಿಸಿತು. ಯಶಸ್ವಿ ಜೈಸ್ವಾಲ್​ 1 ಹಾಗೂ ಜಾಸ್​ ಬಟ್ಲರ್​ ಶೂನ್ಯಕ್ಕೆ ಔಟಾದರು. ಬಳಿಕ ಬಂದ ದೇವದತ್ತ​ ಪಡಿಕ್ಕಲ್ ಕೂಡ​ 26 ರನ್ ಬಾರಿಸಿ ವಿಕೆಟ್​ ಕೈಚೆಲ್ಲಿದರು. ರಿಯಾನ್​ ಪರಾಗ್​ 5 ರನ್​ಗೆ ವಿಕೆಟ್​ ಒಪ್ಪಿಸಿದರು. ಇದರಿಂದಾಗಿ 10.3 ಓವರ್​​ಗಳಲ್ಲಿ ತಂಡ 55 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತು.

ಈ ವೇಳೆ ಕ್ರೀಸ್​ಗಿಳಿದ ನಾಯಕ ಸಂಜು ಸ್ಯಾಮ್ಸನ್ ತಾಳ್ಮೆಯಿಂದ ಬ್ಯಾಟಿಂಗ್​ ನಡೆಸುತ್ತಿದ್ದರು. ಈ ವೇಳೆ ಎದುರಾಳಿ ತಂಡದ ನಾಯಕನಾಗಿದ್ದ ಹಾರ್ದಿಕ್​ ಪಾಂಡ್ಯ(hardik pandya) ನೇರವಾಗಿ ಸಂಜು ಬಳಿ ಬಂದು ಏನೋ ಹೇಳಿ ಅವರನ್ನು ಕೆಣಕಿದರು. ಇದಕ್ಕೆ ತುಟಿ ಬಿಚ್ಚದ ಸಂಜು, ಬೌಲಿಂಗ್​ ನಡೆಸುತ್ತಿದ್ದ ರಶೀದ್​ ಖಾನ್(Rashid Khan)​ ಅವರಿಗೆ ಹ್ಯಾಟ್ರಿಕ್​​ ಸಿಕ್ಸರ್​ ಬಾರಿಸುವ ಮೂಲಕ ಪಾಂಡ್ಯ ಮೇಲೆ ಹಗೆ ತೀರಿಸಿಕೊಂಡರು. ಪಂದ್ಯದಲ್ಲಿ ಸಂಜು 32 ಎಸೆತದಲ್ಲಿ ಆರು ಭರ್ಜರಿ ಸಿಕ್ಸರ್ ಮೂಲಕ 60 ರನ್ ಚಚ್ಚಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ​ ಚೆನ್ನೈ, ಮುಂಬೈ ತಂಡಗಳೇ ಟ್ರೋಫಿ ಗೆಲ್ಲುವುದೇಕೆ?

2007 ಟಿ20 ವಿಶ್ವಕಪ್​ನಲ್ಲಿ ​ಆಂಡ್ರ್ಯೂ ಫ್ಲಿಂಟಾಫ್‌ ಅವರು ಯುವರಾಜ್​ ಸಿಂಗ್​ ಅವರನ್ನು ಕೆಣಕ್ಕಿ ಸುವರ್ಟ್​ ಬ್ರಾಡ್ ಅವರು ಸತತ 6 ಸಿಕ್ಸರ್​ ಹೊಡೆಸಿಕೊಂಡಿದ್ದರು. ಇದೇ ರೀತಿ ಪಾಂಡ್ಯ ಅವರು ಕೆಣಕಿದ ತಪ್ಪಿಗೆ ರಶೀದ್​ ಹ್ಯಾಟ್ರಿಕ್​ ಸಿಕ್ಸರ್​ ಚಚ್ಚಿಸಿಕೊಂಡರು. ಅಂದಿನ ಈ ಘಟನೆಯ ವಿಡಿಯೊವನ್ನು ಮತ್ತೆ ಕ್ರಿಕೆಟ್​ ಅಭಿಮಾನಿಗಳು 17ನೇ ಆವೃತ್ತಿಯ ಟೂರ್ನಿಗೆ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜತೆಗೆ ಈ ಬಾರಿ ಪಾಂಡ್ಯ ಅವರಿಗೆ ಹ್ಯಾಟ್ರಿಕ್​ ಸಿಕ್ಸರ್​ ಬಾರಿಸಿ ಎಂದು ಸಂಜು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.​

ರಾಜಸ್ಥಾನ್​ ರಾಯಲ್ಸ್​ ಈ ಬಾರಿಯ ಟೂರ್ನಿಯಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಪಂದ್ಯವನ್ನಾಡುವ ಮೂಲಕ ತನ್ನ ಐಪಿಎಲ್​ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಮಾರ್ಚ್ 24ರಂದು ಜೈಪುರದ ಸವಾಯ್​ ಮಾನ್​ ಸಿಂಗ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ಹಗಲು ಪಂದ್ಯವಾಗಿದೆ.

Exit mobile version