Site icon Vistara News

IPL 2024: ಲಕ್ನೋ ತಂಡದ ಡೇವಿಡ್ ವಿಲ್ಲಿ ಐಪಿಎಲ್​ ಆರಂಭಿಕ ಪಂದ್ಯಗಳಿಗೆ ಅಲಭ್ಯ

David Willey

ಲಂಡನ್​: ಇಂಗ್ಲೆಂಡ್​ ಆಟಗಾರರ ಐಪಿಎಲ್ ಗೈರು ಮತ್ತೆ ಮುಂದುವರಿದಿದೆ. ​ಲಕ್ನೋ ಸೂಪರ್​ಜೈಂಟ್ಸ್(Lucknow Super Giants)​ ತಂಡದ ಆಟಗಾರನಾಗಿರುವ ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲಿ(David Willey) ಅವರು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇವರ ಗೈರನ್ನು ಲಕ್ನೋ ತಂಡದ ಪ್ರಧಾನ ಕೋಚ್ ಜಸ್ಟಿನ್ ಲ್ಯಾಂಗರ್(Justin Langer) ಖಚಿತಪಡಿಸಿದ್ದಾರೆ.

ಇದೇ ತಂಡದ ಮಾರ್ಕ್​ ವುಡ್(Mark Wood)​ ಕೂಡ ಟೂರ್ನಿಯಿಂದ ಹಿಂದೆ ಸರಿದಿದ್ದರು. ಈ ಕಾರಣದಿಂದ ವಿಂಡೀಸ್​ನ ಯುವ ವೇಗಿ ಶಮರ್ ಜೋಸೆಫ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಇದೀಗ ವಿಲ್ಲಿ ಕೂಡ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದಾರೆ. ವಿಲ್ಲಿಯ ಅನುಪಸ್ಥಿತಿಗೆ ಅವರು ಯಾವುದೇ ಕಾರಣವನ್ನು ನೀಡಿಲ್ಲ. ಆದರೂ, ವೃತ್ತಿಪರ ಲೀಗ್ ಗಳಲ್ಲಿ ನಿರಂತರವಾಗಿ ಆಡಿದ ಬಳಿಕ ಕುಟುಂಬದೊಂದಿಗೆ ಕಳೆಯುವುದಕ್ಕಾಗಿ ಅವರು ಸಮಯ ತೆಗೆದುಕೊಳ್ಳಲಿದ್ದಾರೆ ಎಂಬುದಾಗಿ ಭಾವಿಸಲಾಗಿದೆ.

​ಡೇವಿಡ್ ವಿಲ್ಲಿ ಮತ್ತು ವುಡ್​ ಹಿಂದೆ ಸರಿದ ಮಾತ್ರಕ್ಕೆ ನಾವು ಯಾವುದೇ ಆಘಾತಕ್ಕೆ ಒಳಗಾಗುವುದಿಲ್ಲ. ನಮ್ಮ ತಂಡದಲ್ಲಿ ಅಗಾಧ ಪ್ರತಿಭೆಯಿದೆ ಎನ್ನುವುದನ್ನು ನಾನು ಕಳೆದ ಕೆಲವು ದಿನಗಳಲ್ಲಿ ಗಮನಿಸಿದ್ದೇನೆ’ ಎಂದು ಕೋಚ್​ ಲ್ಯಾಂಗರ್ ಹೇಳಿದರು.

ಇದನ್ನೂ ಓದಿ IPL 2024: ಮೊಹಮ್ಮದ್ ಶಮಿ ಬದಲಿಗೆ ಗುಜರಾತ್​ ಸೇರಿದ ಸಂದೀಪ್ ವಾರಿಯರ್

ಎಡಗೈ ವೇಗಿ ಡೇವಿಸ್ ವಿಲ್ಲಿ ಕಳೆದ ಎರಡು ಐಪಿಎಲ್ ಋತುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದರು. ಆದರೆ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಅಷ್ಟಾಗಿ ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಹರಾಜಿಗೆ ಕೈಬಿಡಲಾಗಿತ್ತು. ಕಳೆದ ಡಿಸೆಂಬರ್​ನಲ್ಲಿ ನಡೆದ ಹರಾಜಿನಲ್ಲಿ ಅವರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಲಕ್ನೋ ತಂಡ ಖರೀದಿಸಿತ್ತು.

ರಾಹುಲ್​-ಬಿಷ್ಟೋಯಿ​ ಹೊಗಳಿದ ಕೋಚ್​


ತಂಡದ ನಾಯಕ ಕೆ.ಎಲ್​ ರಾಹುಲ್​ ಮತ್ತು ಯುವ ಸ್ಪಿನ್​ ಬೌಲರ್​ ರವಿ ಬಿಷ್ಟೋಯಿ ಅವರನ್ನು ಕೋಚ್​ ಲ್ಯಾಂಗರ್​ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ‘ಒಂದೊಮ್ಮೆ ತಂಡವು ಉತ್ತಮವಾಗಿ ಆಡಿದರೆ ಎಲ್ಲರಿಗೂ ಪುರಸ್ಕಾರ ಲಭಿಸುತ್ತದೆ. ಆದರೆ ರಾಹುಲ್ ನಾಯಕತ್ವದಲ್ಲಿ ತಂಡ ಪ್ರಶಸ್ತಿ ಗೆದ್ದರೆ ಇದರ ಸಂಪೂರ್ಣ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ. ಜತೆಗೆ ರವಿ ಬಿಷ್ಣೋಯಿ ಕೂಡ ಚೆನ್ನಾಗಿ ಆಡಿದರೆ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆಯಬಹುದು. ಅವರು ಉತ್ತಮ ಬೌಲರ್ ಆಗಿದ್ದಾರೆ. ಅಭ್ಯಾಸ ಮಾಡುವ ರೀತಿಯನ್ನು ಗಮನಿಸಿದ್ದೇನೆ ಎಂದರು. ಲಕ್ನೋ(lucknow super giants) ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್​ 24ರಂದು ರಾಜಸ್ಥಾನ್​ ವಿರುದ್ಧ ಆಡಲಿದೆ.

ಲಕ್ನೋ ತಂಡ


ಕೆ.ಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್(ಉಪ ನಾಯಕ), ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ದೇವದತ್ತ್​ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುದ್ಧವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್​ ಜೋಸೆಫ್​, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ.ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ. ಸಿದ್ಧಾರ್ಥ್, ಆ್ಯಶ್ಟನ್​ ಟರ್ನರ್, ಡೇವಿಡ್ ವಿಲ್ಲಿ, ಮೊಹಮ್ಮದ್ ಅರ್ಷದ್ ಖಾನ್.

Exit mobile version