Site icon Vistara News

IPL 2024: ವಿಲ್ಲಿ ಸ್ಥಾನಕ್ಕೆ ಬದಲಿ ಆಟಗಾರನಾಗಿ ಲಕ್ನೋ ತಂಡ ಸೇರಿದ ಮ್ಯಾಟ್​ ಹೆನ್ರಿ

IPL 2024

ಲಕ್ನೋ: ವೈಯಕ್ತಿಕ ಕಾರಣ ನೀಡಿ ಐಪಿಎಲ್​ನಿಂದ(IPL 2024) ಹಿಂದೆ ಸರಿದಿದ್ದ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡದ ಇಂಗ್ಲೆಂಡ್​ ವೇಗಿ ಡೇವಿಡ್​ ವಿಲ್ಲಿ(David Willey) ಸ್ಥಾನಕ್ಕೆ ನ್ಯೂಜಿಲ್ಯಾಂಡ್​ನ ಬೌಲರ್​ ಮ್ಯಾಟ್​ ಹೆನ್ರಿ(Matt Henry) ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಇವರ ಆಯ್ಕೆಯನ್ನು ಫ್ರಾಂಚೈಸಿ ತನ್ನ ಅಧಿಕೃತ ಪ್ರಕಟನೆಯ ಮೂಲಕ ಪ್ರಕಟಿಸಿದೆ.


ವಿಲ್ಲಿ ಅವರು ಆರಂಭಿಕ 2 ಪಂದ್ಯಗಳಿಗೆ ಅಲಭ್ಯರಾಗುವುದಾಗಿ ಹೇಳಿ ತವರಿಗೆ ಮರಳಿದ್ದರು. ಆದರೆ ಸಂಪೂರ್ಣವಾಗಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಹೆನ್ರಿಯನ್ನು ಆಯ್ಕೆ ಮಾಡಲಾಗಿದೆ. ವಿಲ್ಲಿ ಅವರನ್ನು ಕಳೆದ ಡಿಸೆಂಬರ್​ನಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಲಕ್ನೋ ಫ್ರಾಂಚೈಸಿ 2 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಮ್ಯಾಟ್ ಹೆನ್ರಿಯನ್ನು ಮೂಲ ಬೆಲೆ ರೂ 1.25 ಕೋಟಿಗೆ ಖರೀದಿ ಮಾಡಲಾಗಿದೆ.

ಮ್ಯಾಟ್​ ಹೆನ್ರಿಯ ಮೂರನೇ ಐಪಿಎಲ್​ ಫ್ರಾ.ಚೈಸಿ ಇದಾಗಿದೆ. ಇದಕ್ಕೂ ಮುನ್ನ ಪಂಜಾಬ್​ ಕಿಂಗ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಭಾಗವಾಗಿದ್ದರು. ಹೆನ್ರಿ ಇದುವರೆಗೆ ಆಡಿದ್ದು ಕೇವಲ 2 ಐಪಿಎಲ್​ ಪಂದ್ಯಗಳನ್ನು ಮಾತ್ರ. 2017ರಲ್ಲಿ ಪಂಜಾಬ್​ ವಿರುದ್ಧ ಕಣಕ್ಕಿಳಿದಿದ್ದರು. 2 ಪಂದ್ಯಗಳಿಂದ 1 ವಿಕೆಟ್​ ಪಡೆದಿದ್ದಾರೆ.

32ರ ಹರೆಯದ ಅವರು ಇದುವರೆಗೆ ನ್ಯೂಜಿಲ್ಯಾಂಡ್​ ಪರ 25 ಟೆಸ್ಟ್‌, 82 ಏಕದಿನ ಮತ್ತು 17 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. 25 ಟೆಸ್ಟ್‌ಗಳಲ್ಲಿ 95 ವಿಕೆಟ್‌ಗಳು, 82 ಏಕದಿನಗಳಲ್ಲಿ 141 ವಿಕೆಟ್‌ಗಳು ಮತ್ತು 17 ಟಿ20 ಯಿಂದ 20 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ IPL 2024: ಮುಂಬೈ ತಂಡಕ್ಕೆ ಮತ್ತಷ್ಟು ಚಿಂತೆ ಹೆಚ್ಚಿಸಿದ ಸೂರ್ಯಕುಮಾರ್ ಫಿಟ್‌ನೆಸ್‌

ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ಸೆಣಸಾಟ ನಡೆಸಲಿದೆ. ಈ ಲಕ್ನೋಗೆ ಇದು ಮೊದಲ ತವರಿನ ಪಂದ್ಯದವಾಗಿದೆ. ಪಂಜಾಬ್​ ಈಗಾಗಲೇ ಆಡಿದ 2 ಪಂದ್ಯಗಳ ಪೈಕಿ ಒಂದನ್ನು ಗೆದ್ದು ಮತ್ತೊಂದರಲ್ಲಿ ಸೋಲು ಕಂಡಿದೆ. ಲಕ್ನೋ ಒಂದೇ ಪಂದ್ಯ ಆಡಿ ಇದರಲ್ಲಿ ಸೋಲು ಕಂಡಿದೆ. ಇದೀಗ ಗೆಲುವಿನ ಶುಭಾರಂಭಕ್ಕಾಗಿ ಇಂದು ಶಕ್ತಿ ಮೀರಿ ಪ್ರಯತ್ನಿಸುವ ಇರಾದೆಯಲ್ಲಿದೆ.

ಪರಿಷ್ಕೃತ ಲಕ್ನೋ ತಂಡ


ಕೆ.ಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್(ಉಪ ನಾಯಕ), ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ದೇವದತ್ತ್​ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುದ್ಧವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್​ ಜೋಸೆಫ್​, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ.ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ. ಸಿದ್ಧಾರ್ಥ್, ಆ್ಯಶ್ಟನ್​ ಟರ್ನರ್, ಮ್ಯಾಟ್​ ಹೆನ್ರಿ, ಮೊಹಮ್ಮದ್ ಅರ್ಷದ್ ಖಾನ್.

Exit mobile version