Site icon Vistara News

IPL 2024: ಅಭ್ಯಾಸ ಆರಂಭಿಸಿದ ಹಾಲಿ ಚಾಂಪಿಯನ್ ಸಿಎಸ್​ಕೆ​; ಆರ್​ಸಿಬಿ ಮೊದಲ ಎದುರಾಳಿ

IPL 2024

ಚೆನ್ನೈ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​(Chennai Super Kings) ತಂಡ 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿಗಾಗಿ ಚೆನ್ನೈನಲ್ಲಿ ಶನಿವಾರದಿಂದ ಅಭ್ಯಾಸ ಆರಂಭಿಸಿದೆ. ಆಟಗಾರರು ಚೆನ್ನೈ ತಲುಪಿ ಅಭ್ಯಾಸ ಶುರು ಮಾಡಿರುವ ಫೋಟೊ ಮತ್ತು ವಿಡಿಯೊವನ್ನು ಸಿಎಸ್​ಕೆ(CSK) ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಮಾಧ್ಯಮದಲ್ಲಿ ಪ್ರಕಟಿಸಿದೆ.

ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಋತುರಾಜ್​ ಗಾಯಕ್ವಾಡ್​, ದೀಪಕ್​ ಚಹರ್​,ತಷಾರ್​ ದೇಶ್​ಪಾಂಡೆ ಸೇರಿ ಹಲವು ಆಟಗಾರರು ಕೋಚ್​ಗಳ ಸಾರಥ್ಯದಲ್ಲಿ ವ್ಯಾಯಾಮ, ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ನಡೆಸಿದ್ದಾರೆ. ಈ ಫೋಟೊವನ್ನು ಫ್ರಾಂಚೈಸಿ ತನ್ನ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡು ‘ಪ್ರಯಾಣದ ಮೊದಲ ಹೆಜ್ಜೆ’ ಎಂದು ಬರೆದುಕೊಂಡಿದೆ. ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಅನಂತ್ ಅಂಬಾನಿ-ರಾಧಿಕಾ ವಿವಾಹಪೂರ್ವ ಸಮಾರಂಭದಲ್ಲಿ ಪಾಲ್ಗೊಂಡಿರುವ ಕಾರಣ ಈ ಸಮಾರಂಭ ಮುಕ್ತಾಯಗೊಂಡ ತಕ್ಷಣ ಚೆನ್ನೈಗೆ ವಿಮಾನ ಏರಲಿದ್ದಾರೆ.

ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ ತಂಡ ಈ ಬಾರಿಯ ಆವೃತ್ತಿಗಾಗಿ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದ್ದರೂ ಕಪ್​ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಬಲಿಷ್ಠವಾಗಿ ಗೋಚರಿಸಿದ ಚೆನ್ನೈ ತಂಡ ಮತ್ತೆ ಕಪ್​ ಗೆಲ್ಲುವುದು ಖಚಿತ ಎಂದು ಟೂರ್ನಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಮಾರ್ಚ್​ 22ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಚೆನ್ನೈ ತಂಡ ತನ್ನ ಬದ್ಧ ಎದುರಾಳಿ ಆರ್​ಸಿಬಿ ವಿರುದ್ಧ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ IPL 2024: ಐಪಿಎಲ್​ ಆರಂಭಕ್ಕೂ ಮುನ್ನವೇ ಹೈದರಾಬಾದ್​ಗೆ​ ಆತಂಕ; ಬೌಲಿಂಗ್​ ಕೋಚ್ ಅಲಭ್ಯ!​

ಕಳೆದ ವರ್ಷವೇ ಧೋನಿ(ms dhoni) ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಕಪ್ ಗೆದ್ದು ಧೋನಿಗೆ ಸ್ಮರಣೀಯ ವಿದಾಯ ನೀಡುವುದು ಈ ಬಾರಿ ತಂಡದ ಆಟಗಾರರ ಪ್ರಮುಖ ಗುರಿಯಾಗಿದೆ.

ಚೆನ್ನೈ ತಂಡ

ಎಂ.ಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶೇಕ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯೀನ್ ಅಲಿ, ಶಿವಂ ದುಬೆ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜವರ್ಧನ್ ಹಂಗರ್ಗೇಕರ್, ದೀಪಕ್ ಚಹರ್, ಮಹೇಶ್ ದೀಕ್ಷಾನಾ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾನಾ, ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ.

ಸಿಎಸ್​ಕೆ ಹರಾಜಿನಲ್ಲಿ ಖರೀದಿಸಿದ ಆಟಗಾರರು

ರಚಿನ್ ರವೀಂದ್ರ- 1.80 ಕೋಟಿ (ಮೂಲ ಬೆಲೆ 50 ಲಕ್ಷ ರೂ.)

ಶಾರ್ದೂಲ್ ಠಾಕೂರ್- 4 ಕೋಟಿ (ಮೂಲ ಬೆಲೆ 2 ಕೋಟಿ ರೂ.)

ಡೇರಿಲ್ ಮಿಚೆಲ್- 14 ಕೋಟಿ (ಮೂಲ ಬೆಲೆ 1 ಕೋಟಿ ರೂ.)

ಸಮೀರ್ ರಿಝ್ವಿ- 8.40 ಕೋಟಿ (ಮೂಲ ಬೆಲೆ 20 ಲಕ್ಷ ರೂ.)

ಮುಸ್ತಫಿಜುರ್ ರೆಹಮಾನ್- 2 ಕೋಟಿ (ಮೂಲ ಬೆಲೆ 2 ಕೋಟಿ ರೂ.)

ಅವಿನಾಶ್- 20 ಲಕ್ಷ (ಮೂಲ ಬೆಲೆ 20 ಲಕ್ಷ ರೂ.)

Exit mobile version