Site icon Vistara News

IPL 2024: ಅಭ್ಯಾಸದ ವೇಳೆ ಸಿಕ್ಸರ್​ಗಳ ಸುರಿಮಳೆಗೈದ ರಿಷಭ್​ ಪಂತ್​; ವಿಡಿಯೊ ವೈರಲ್​

Rishabh Pant practice ahead of IPL 2024

ವಿಶಾಖಪಟ್ಟಣಂ: 14 ತಿಂಗಳ ಬಳಿಕ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಲಿರುವ ಡೆಲ್ಲಿ(Delhi Capitals) ತಂಡದ ಕಪ್ತಾನ ರಿಷಭ್​ ಪಂತ್(Rishabh Pant)​ ಅವರು ತಮ್ಮ ಪುನರಾಗಮನ್ನು ಹೊಡಿ ಬಡಿ ಆಟದ ಮೂಲಕ ಆರಂಭಿಸುವ ಸಾಧ್ಯತೆಯೊಂದು ಕಂಡುಬಂದಿದೆ. ಮಾರ್ಚ್​ 22ರಿಂದ ಆರಂಭಗೊಳ್ಳಲಿರುವ ಐಪಿಎಲ್(IPL 2024)​ ಟೂರ್ನಿಗಾಗಿ ಅಭ್ಯಾಸ(Rishabh Pant practice) ನಡೆಸುತ್ತಿರುವ ಪಂತ್ ಸಿಕ್ಸರ್​ಗಳ(Rishabh Pant hits stunning six) ಸುರಿಮಳೆಗೈದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

​ಡೆಲ್ಲಿ ತಂಡ ವಿಶಾಖಪಟ್ಟಣದಲ್ಲಿ ತನ್ನ ಐಪಿಎಲ್​ ಪೂರ್ವಭಾವಿ ಅಭ್ಯಾಸ ಶಿಬಿರವನ್ನು ನಡೆಸುತ್ತಿದ್ದು ಪಂತ್​ ಕೂಡ ಗುರುವಾರದಿಂದ ತಂಡದ ಸಹ ಆಟಗಾರರೊಂದಿಗೆ ಅಭ್ಯಾಸ ನಡೆಸಿದ್ದಾರೆ. ಪಂತ್​ ಅವರು ಕಾರು ಅಪಘಾತದ ಬಳಿಕ ಆಡುತ್ತಿರುವ ಮೊದಲ ಕ್ರಿಕೆಟ್​ ಟೂರ್ನಿ ಇದಾಗಿದೆ. ಕ್ರಿಕೆಟ್​ಗೆ ಮರಳಲು ಕಳೆದ ಒಂದು ವರ್ಷದಿಂದ ಎನ್​ಸಿಎಯಲ್ಲಿ ಕಠಿಣ ಪರಿಶ್ರಮವಹಿಸಿದ್ದರು.


ನೆಟ್ಸ್​ನಲ್ಲಿ ಪಂತ್​ ಅವರು ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದು ಕೇವಲ ದೊಡ್ಡ ಹೊಡೆತಗಳ ಕಡೆ ಮಾತ್ರ ಗಮನಹರಿಸಿದ್ದಾರೆ. ಕಳೆದ ವಾರ ಪಂತ್​ ಅವರು ಎನ್​ಸಿಎಯಲ್ಲಿ ಐಪಿಎಲ್​ಗಾಗಿ ಸಿದ್ಧತೆ ನಡೆಸುವ ವೇಳೆ ತಮ್ಮ ಸಿಗ್ನೇಚರ್‌ ಶೈಲಿಯಾದ ಒಂದೇ ಕೈಯಲ್ಲಿ ಸಿಕ್ಸರ್​ ಬಾರಿಸಿ ಗಮನಸೆಳೆದಿದ್ದರು. ಇದೀಗ 14 ತಿಂಗಳ ಬಳಿಕ ಆಡಲಿರುವ ಅವರು ತಮ್ಮ ಮೊದಲ ಪಂದ್ಯದಲ್ಲೇ ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

ಮಾರ್ಚ್ 23 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿಯಲ್ಲಿ ಪಂದ್ಯವನ್ನಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಐಪಿಎಲ್​ 2024ರ ಅಭಿಯಾನವನ್ನು ಪ್ರಾರಂಭಿಸಲಿದೆ. ನಾಯಕನಾಗಿರು ಪಂತ್​ ಅವರು ಬ್ಯಾಟಿಂಗ್​ ಜತೆಗೆ ವಿಕೆಟ್​ ಕೀಪಿಂಗ್ ಕೂಡ ಮಾಡಲಿದ್ದಾರೆ. ಈ ವಿಚಾರವನ್ನು ಬಿಸಿಸಿಐ ಫಿಟ್​ನೆಸ್​ ವರದಿ ಪ್ರಕಟಿಸುವ ವೇಳೆ ತಿಳಿಸಿತ್ತು.

ಇದನ್ನೂ ಓದಿ IPL 2024 : ಐಪಿಎಲ್​ ಇತಿಹಾಸದಲ್ಲಿ ದಾಖಲಾಗಿರುವ ಅತಿವೇಗದ ಶತಕಗಳ ವಿವರ ಈ ಕೆಳಗಿನಂತಿದೆ

ಬುಧವಾರ ವಿಶಾಖಪಟ್ಟಣಂ ತಲುಪಿ ಡೆಲ್ಲಿ ಕ್ಯಾಂಪ್​ ಸೇರಿದ್ದ ಪಂತ್​, ಮತ್ತೊಮ್ಮೆ ಐಪಿಎಲ್​ಗೆ ಚೊಚ್ಚಲ ಪ್ರವೇಶ ಮಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಹೇಳಿದ್ದರು. “ನಾನು ಉತ್ಸುಕನಾಗಿದ್ದೇನೆ ಮತ್ತು ಆತಂಕಗೊಂಡಿದ್ದೇನೆ. ಏಕೆಂದರೆ ನಾನು ಮತ್ತೆ ನನ್ನ ಚೊಚ್ಚಲ ಪಂದ್ಯವನ್ನಾಡಲಿದ್ದೇನೆ ಎಂದು ಭಾಸವಾಗುತ್ತಿದೆ. ಮತ್ತೆ ಕ್ರಿಕೆಟ್ ಆಡುವುದು ಪವಾಡದಂತೆ ಭಾಸವಾಗುತ್ತಿದೆ. ಚೇತರಿಸಿಕೊಳ್ಳುವ ಸಮಯದಲ್ಲಿ ಸಹಾಯ ಮಾಡಿದ ಅಭಿಮಾನಿಗಳು, ಬಿಸಿಸಿಐ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸಿಬ್ಬಂದಿಗೆ ಧನ್ಯವಾದ’ ಹೇಳಿದ್ದರು.


2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

Exit mobile version