Site icon Vistara News

IPL 2024: ಐಪಿಎಲ್​ ವೇಳೆ ತಾಳ್ಮೆ ಕಳೆದುಕೊಂಡಿದ್ದ ಧೋನಿಗೂ ಬಿದ್ದಿತ್ತು ದಂಡದ ಬರೆ

MS Dhoni

ಚೆನ್ನೈ: ಮಹೇಂದ್ರ ಸಿಂಗ್‌ ಧೋನಿ ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದೇ ಕಾರಣಕ್ಕೆ ಅವರಿಗೆ ಕ್ಯಾಪ್ಟನ್‌ ಕೂಲ್‌ ಎಂಬ ಹೆಸರು ಕೂಡ ಇದೆ. ಆದರೆ 2019ರಲ್ಲಿ(IPL 2019) ನಡೆದಿದ್ದ ಐಪಿಎಲ್(IPL 2024)​ ಪಂದ್ಯವೊಂದರಲ್ಲಿ ಧೋನಿ ಆ್ಯಂಗ್ರಿಮ್ಯಾನ್‌ಆಗಿ ಬದಲಾಗಿದ್ದರು. ಜತೆಗೆ ದಂಡದ ಶಿಕ್ಷೆಗೂ ಗುರಿಯಾಗಿದ್ದರು.

ಹೌದು, 12ನೇ ಆವೃತ್ತಿಯ ಐಪಿಎಲ್​ನಲ್ಲಿ ಧೋನಿ ಅವರ ಪಿತ್ತ ನೆತ್ತಿಗೇರಿದ ಘಟನೆ ಸಂಭವಿಸಿತ್ತು. ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ(RR Vs CSK) ವಿರುದ್ಧ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ ಎಸೆತದಲ್ಲಿ ಜಯ ಸಾಧಿಸಿ ಸಂಭ್ರಮಿಸಿತು. ಇದೇ ವೇಳೆ ಕ್ಯಾಪ್ಟನ್‌ ಕೂಲ್‌ ಭಾರೀ ಚರ್ಚೆಗೆ ಗುರಿಯಾದ್ದರು.

ಬೆನ್‌ ಸ್ಟೋಕ್ಸ್‌ ಎಸೆದ ಅಂತಿಮ ಓವರ್‌ನಲ್ಲಿ ಚೆನ್ನೈಗೆ 18 ರನ್‌ ಬೇಕಿತ್ತು. ಸ್ಟೋಕ್ಸ್‌ ಅವರ 4ನೇ ಎಸೆತ ನೋ ಬಾಲ್‌ ಆಗಿತ್ತು. ಪಂಪೈರ್​ ಉಲ್ಲಾಸ್‌ ಗಾಂದೆ ನೋಬಾಲ್‌ ನೀಡಿದ್ದರು. ಆದರೆ ಲೆಗ್‌ ಅಂಪಾಯರ್‌ ನೋಬಾಲ್‌ ನೀಡಿರಲಿಲ್ಲ. ಈ ಸನ್ನಿವೇಶ ಎಲ್ಲರನ್ನೂ ಗೊಂದಲಕ್ಕೀಡು ಮಾಡಿತ್ತು. ಈ ಎಸೆತದಲ್ಲಿ ಚೆನ್ನೈಆಟಗಾರರು 2 ರನ್‌ ಕಸಿದಿದ್ದರು. ಜಡೇಜ ಈ ಕುರಿತು ಅಂಪಾಯರ್‌ಗಳನ್ನು ಪ್ರಶ್ನಿಸಿದ್ದರೂ ಯಾವುದೇ ಧನಾತ್ಮಕ ಉತ್ತರ ದೊರೆಯಲಿಲ್ಲ. ಆಗ ಬೌಂಡರಿ ಗೆರೆ ಬಳಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಧೋನಿ ಮೈದಾನಕ್ಕೆ ಓಡೋಡಿ ಬಂದು ಅಂಪಾಯರ್‌ಗಳ ಜತೆ ವಾಗ್ವಾದಕ್ಕಿಳಿದರು.

ಇದನ್ನೂ ಓದಿ IPL 2024 : ಐಪಿಎಲ್​ ಇನಿಂಗ್ಸ್​ ಒಂದರಲ್ಲಿ ಅತ್ಯಧಿಕ ಸಿಕ್ಸರ್​ಗಳನ್ನು ಬಾರಿಸಿದ ಆಟಗಾರರ ವಿವರ ಇಲ್ಲಿದೆ


ಆದರೆ, ಧೋನಿ ಮಾತನ್ನು ಯಾರೂ ಒಪ್ಪಲಿಲ್ಲ. ಥರ್ಡ್‌ ಅಂಪಾಯರ್‌ ಕೂಡ ಮನವಿ ನಿರಾಕರಿಸಿದ್ದರು. ಧೋನಿ ಈ ಹಿಂದೆ ಒಮ್ಮೆಯೂ ಕೂಡ ಮೈದಾನದಲ್ಲಿ ಇಷ್ಟೊಂದು ತಾಳ್ಮೆ ಕಳೆದುಕೊಂಡಿದನ್ನು ಯಾರು ಕೂಡ ನೋಡಿರಲಿಲ್ಲ. ಅಂದು ಧೋನಿಯನ್ನು ಕಂಡ ಅವರ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದರು. ಧೋನಿಯ ಈ ಅತಿರೇಕದ ವರ್ತನೆಗೆ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ IPL 2024 : ಐಪಿಎಲ್​ನಲ್ಲಿ ಹ್ಯಾಟ್ರಿಕ್​ ವಿಕೆಟ್ ಸಾಧನೆ ಮಾಡಿದ ಬೌಲರ್​ಗಳ ವಿವರ ಇಲ್ಲಿದೆ


ಈ ಬಾರಿ ವಿದಾಯ


ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಅವರು ಐಪಿಎಲ್​ಗೆ ವಿದಾಯ ಹೇಳಬೇಕಿತ್ತು. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ತಮ್ಮ ನಿವೃತ್ತಿಯನ್ನು ಒಂದು ವರ್ಷ ಮುಂದಕ್ಕೆ ಹಾಕಿದ್ದರು. ಈ ಬಾರಿಯ ಟೂರ್ನಿ ಧೋನಿಗೆ ವಿದಾಯದ ಟೂರ್ನಿಯಾಗಿದೆ.

Exit mobile version