Site icon Vistara News

IPL 2024: ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ; ಕೊಹ್ಲಿ ಐಪಿಎಲ್​ ಆಡುವುದು ಅನುಮಾನ!

Virat Kohli rcb

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್‌(IPL 2024) ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲಾ ಫ್ರಾಂಚೈಸಿಗಳು ಅಭ್ಯಾಸ ಆರಂಭಿಸಿದೆ. ಚೆನ್ನೈ ಸೂಪರ್​ ಕಿಂಗ್ಸ್(CSK)​ ವಿರುದ್ಧ ಉದ್ಘಾಟನಾ ಪಂದ್ಯ ಆಡಲಿರುವ ಕನ್ನಡಿಗರ ನೆಚ್ಚಿನ ತಂಡವಾದ ಆರ್‌ಸಿಬಿ(RCB) ಕೂಡ ಗುರುವಾರದಿಂದ ಬೆಂಗಳೂರಿನಲ್ಲಿ ತನ್ನ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಆದರೆ ತಂಡದ ಸ್ಟಾರ್​ ಆಟಗಾರ ವಿರಾಟ್‌ ಕೊಹ್ಲಿ(virat kohli) ಇನ್ನೂ ಕೂಡ ತಂಡ ಸೇರಿಲ್ಲ. ಅವರ ಅನುಪಸ್ಥಿತಿಯಲ್ಲೇ ತಂಡ ಅಭ್ಯಾಸ ನಡೆಸುತ್ತಿದೆ.

ಬಿಸಿಸಿಐ(BCCI) ಮೂಲಗಳ ಮಾಹಿತಿ ಪ್ರಕಾರ ಕೊಹ್ಲಿ ತಂಡ ಸೇರಲು ಇನ್ನೂ ಕೆಲವು ದಿನಗಳಾಗುತ್ತವೆ ಎಂದು ತಿಳಿದುಬಂದಿದೆ. ತಂಡದ ನಾಯಕ ಫಾಫ್​ ಡು ಪ್ಲೆಸಿಸ್‌, ಅಲ್ಜಾರಿ ಜೋಸೆಫ್, ದಿನೇಶ್​ ಕಾರ್ತಿಕ್, ಗ್ಲೆನ್ ಮ್ಯಾಕ್ಸ್​ವೆಲ್​​ ಸೇರಿ ಉಳಿದ ಎಲ್ಲ ಆಟಗಾರರು ಅಭ್ಯಾಸ ನಿರತರಾಗಿದ್ದಾರೆ. ಆದರೆ ಕೊಹ್ಲಿ ಗೈರು ಎದ್ದು ಕಾಣುತ್ತಿತ್ತು. ಇಂಗ್ಲೆಂಡ್​ ವಿರುದ್ಧದ ತವರಿನ ಟೆಸ್ಟ್​ ಸರಣಿಯಿಂದ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಿದ್ದ ವಿರಾಟ್​ ಕೊಹ್ಲಿ(Virat Kohli), ತಮ್ಮ ಪತ್ನಿ ಅನುಷ್ಕಾ ಶರ್ಮ ಅವರ ಹೆರಿಗೆಯ ಕಾರಣದಿಂದ ಲಂಡನ್​ಗೆ ತೆರೆಳಿದ್ದರು. ಜನವರಿ 15ರಂದು ಕೊಹ್ಲಿ ಪತ್ನಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಲಂಡನ್​ನಲ್ಲಿಯೇ ಇದ್ದಾರೆ.

ಕೊಹ್ಲಿ ಅವರು ತಂಡ ಸೇರುವುದು ಇನ್ನೂ ತಡವಾಗಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿರುವ ಮಾಹಿತಿಯನ್ನು ಗಮನಿಸುವಾಗ ಕೊಹ್ಲಿ ಆರಂಭಿಕ ಹಂತದ ಐಪಿಎಲ್​ ಆಡುವುದು ಅನುಮಾನ(virat Kohli doubtful ipl) ಎನ್ನುವಂತಿದೆ.

ಆರ್​ಸಿಬಿ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್​ವೆಲ್​, ವಿರಾಟ್ ಕೊಹ್ಲಿ, ಕ್ಯಾಮರೂನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

ಆರ್​ಸಿಬಿ ಹೆಸರು ಈ ಬಾರಿ ಬದಲಾವಣೆಯಾಗುವುದು ಖಚಿತಗೊಂಡಿದೆ. ಇದರ ಸುಳಿವನ್ನು ಕೂಡ ಫ್ರಾಂಚೈಸಿ ಬಿಟ್ಟುಕೊಟ್ಟಿದೆ. ರಾಯಲ್ ಚಾಲೆಂಜರ್ಸ್ ಬ್ಯಾಂಗಳೂರು ಬದಲು ಈ ಬಾರಿಯ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿ ಬದಲಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕ ಎನ್ನುವಂತೆ ಆರ್​ಸಿಬಿ 2 ಪ್ರೋಮೊಗಳನ್ನು ಕೂಡ ಬಿಡುಗಡೆ ಮಾಡಿದೆ. ಮೊದಲ ಪ್ರೋಮೊದಲ್ಲಿ ರಿಷಬ್​ ಶೆಟ್ಟಿ(Rishabh Shetty) ಕಾಣಿಸಿಕೊಂಡರೆ, ಎರಡನೇ ಪ್ರೋಮೊದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್(Ashwini Puneeth Rajkumar) ಕಾಣಿಸಿಕೊಂಡಿದ್ದಾರೆ. ಇಬ್ಬರು ಕೂಡ ಅರ್ಥ ಆಯ್ತಾ? ಎಂದು ಹೇಳುವ ಮೂಲಕ ಹೆಸರು ಬದಲಾವಣೆಯ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಆರ್​ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಕಳೆದೆರಡು ವರ್ಷಗಳಿಂದ ಆರ್​ಸಿಬಿ ಅನ್​ಬಾಕ್ಸ್​(RCB’s Unbox Event) ಹೆಸರಿನಲ್ಲಿ ನಡೆಯುತ್ತ ಬಂದಿದೆ. ಅಭಿಮಾನಿಗಳಿಗಾಗಿ ನಡೆಸುವ ಈ ಕಾರ್ಯಕ್ರಮದಲ್ಲಿ ತಂಡದ ಹೊಸ ಜೆರ್ಸಿ ಅನಾವರಣ ಸೇರಿ ಹಲವು ಅಚ್ಚರಿಯನ್ನು ಘೋಷಣೆ ಮಾಡುವುದು ಈ ಕಾರ್ಯಕ್ರಮದ ವಿಶೇಷತೆ. ಈ ಬಾರಿ ಹೆಸರಿನ ಬದಲಾವಣೆ ಮಾಡುವ ಸಾಧ್ಯತೆ ಇದೆ.

Exit mobile version