Site icon Vistara News

IPL 2024: ಐಪಿಎಲ್​ ಅಭಿಮಾನಿಗಳಿಗೆ ಇಂದು ಡಬಲ್‌ ಧಮಾಕಾ; ಒಂದೇ ದಿನ 2 ಪಂದ್ಯ

IPL 2024

ಬೆಂಗಳೂರು: ಭಾನುವಾರ ಐಪಿಎಲ್​ನಲ್ಲಿ(IPL 2024) ಡಬಲ್ ಹೆಡರ್​ ಪಂದ್ಯ ನಡೆಯಲಿದ್ದು ಕ್ರಿಕೆಟ್​ ಅಭಿಮಾನಿಗಳಿಗೆ ಇಡೀ ದಿನ ಭರ್ಜರಿ ರಸದೌತಣ ಸಿಗಲಿದೆ. ಮೊದಲ ಪಂದ್ಯದಲ್ಲಿ ಗೆಲುವೇ ಕಾಣದ ಮುಂಬೈ ಇಂಡಿಯನ್ಸ್(Mumbai Indians)​ ತಂಡ ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ಸವಾಲು ಎದುರಿಸಿದರೆ, ರಾತ್ರಿಯ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ಮತ್ತು ಗುಜರಾತ್​ ಟೈಟಾನ್ಸ್​(Gujarat Titans) ಮುಖಾಮುಖಿಯಾಗಲಿವೆ.

ಮುಂಬೈ vs ಡೆಲ್ಲಿ


ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್(suryakumar yadav)​ ಅವರ ಆಗಮನ ಪಾಂಡ್ಯ ಪಡೆಗೆ ಆನೆ ಬಲ ಬಂದಂತಾಗಿದೆ. ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಕಾಣುತ್ತಿದ ತಂಡಕ್ಕೆ ಇದೀಗ ಸೂರ್ಯಕುಮಾರ್​ ಬಲ ನೀಡಲಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗಾಯಗೊಂಡಿದ್ದ ಸೂರ್ಯ ಆ ಬಳಿಕ ಸರಿ ಸುಮಾರು 5 ತಿಂಗಳಿನಿಂದ ಕ್ರಿಕೆಟ್​ ಆಡಿಲ್ಲ. ನಾಯಕತ್ವ ಬದಲಾವಣೆಯನ್ನು ಎಲ್ಲ ಆಟಗಾರರು ಕೂಡ ಒಪ್ಪಿಕೊಂಡು ಒಗ್ಗಟ್ಟಿನಿಂದ ಆಡಬೇಕಿದೆ. ಎಲ್ಲದಕ್ಕೂ ಪಾಂಡ್ಯ ಅವರನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ. ಜತೆಗೆ ಪಾಂಡ್ಯ ಕೂಡ ಕೋಚಿಂಗ್​ ಸ್ಟಾಫ್​ ಹೇಳುವ ಯೋಜನೆಗೆ ಬದ್ಧರಾಗಿ ನಿರ್ಧಾರ ಕೈಗೊಳ್ಳಬೇಕು. ಎದುರಾಳಿ ಡೆಲ್ಲಿ ತಂಡ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದೆ. ತಂಡದಲ್ಲಿ ಬಹುಪಾಲು ಅನಾನುಭವಿಗಳಿದ್ದಾರೆ. ಲಭ್ಯವಿರುವ ಅನುಭವಿಗಳು ಕೂಡ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಹೀಗಾಗಿ ಯಾರನ್ನು ಆಡಿಸುವುದು, ಯಾರನ್ನು ಕೈ ಬಿಡುವುದು ಎನ್ನುವುದೇ ದೊಡ್ಡ ಚಿಂತೆಯಾಗಿದೆ. 

ಸಂಭಾವ್ಯ ತಂಡಗಳು


ಮುಂಬೈ ಇಂಡಿಯನ್ಸ್​:
 ಇಶಾನ್ ಕಿಶನ್ (ವಿಕೆಟ್​ ಕೀಪರ್​), ರೋಹಿತ್ ಶರ್ಮಾ, ಸೂರ್ಯಕುಮಾರ್​ ಯಾದವ್​, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜಸ್​ಪ್ರೀತ್​ ಬುಮ್ರಾ, ಕ್ವೇನಾ ಮಫಕಾ.

ಡೆಲ್ಲಿ ಕ್ಯಾಪಿಟಲ್ಸ್​: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ರಸಿಖ್ ದಾರ್ ಸಲಾಂ, ಅನ್ರಿಚ್ ನಾರ್ಜೆ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

ಇದನ್ನೂ ಓದಿ IPL 2024 Points Table: ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್​; ಆರ್​ಸಿಬಿಗೆ ಎಷ್ಟನೇ ಸ್ಥಾನ?

ಲಕ್ನೋ vs ಗುಜರಾತ್​


ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 4 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆದರೆ ಎಲ್ಲ ನಾಲ್ಕು ಪಂದ್ಯಗಳನ್ನು ಕೂಡ ಗುಜರಾತ್​ ತಂಡವೇ ಗೆದ್ದು ಬೀಗಿದೆ. ಹೀಗಾಗಿ ಲಕ್ನೋ ತಂಡ ಗುಜರಾತ್​ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಲಕ್ನೋ ತಂಡದ ಬಲವೆಂದರೆ ವಿಂಡೀಸ್​ ಬ್ಯಾಟರ್​ ನಿಕೋಲಸ್​ ಪೂರನ್​ ಮತ್ತು ಡಿ ಕಾಕ್​ ಅವರ ಪ್ರಚಂಡ ಬ್ಯಾಟಿಂಗ್​. ಜತೆಗೆ ಮಯಾಂಕ್​ ಯಾದವ್ ಅವರ ಘಾತಕ ಬೌಲಿಂಗ್​ ದಾಳಿ. ಗಂಟೆಗೆ 150ಕ್ಕಿಂತ ವೇಗದಲ್ಲಿ ಚೆಂಡೆಸೆದು ಎದುರಾಳಿ ಬ್ಯಾಟರ್​ಗಳನ್ನು ಬೇಟೆಯಾಡುವಲ್ಲಿ ಈಗಾಗಲೇ ಅವರು ಯಶಸ್ಸು ಕಂಡಿದ್ದಾರೆ.

ಸಂಭಾವ್ಯ ತಂಡ


ಗುಜರಾತ್​:
 ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಶುಭಮನ್​ ಗಿಲ್ (ನಾಯಕ), ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ದರ್ಶನ್ ನಲ್ಕಂಡೆ.

ಲಕ್ನೋ: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಯಶ್ ಠಾಕೂರ್, ನವೀನ್-ಉಲ್-ಹಕ್, ಮಯಾಂಕ್ ಯಾದವ್, ಮಣಿಮಾರನ್ ಸಿದ್ಧಾರ್ಥ್.

Exit mobile version