ಬೆಂಗಳೂರು: ಭಾನುವಾರದ ಐಪಿಎಲ್ನಲ್ಲಿ(IPL 2024) ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಪಂಜಾಬ್ ಕಿಂಗ್ಸ್(Punjab Kings) ಮತ್ತು ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಹಗಲು ಪಂದ್ಯದಲ್ಲಿ ಮುಖಾಮುಖಿಯಾದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ಮತ್ತು ಕೆಕೆಆರ್(Kolkata Knight Riders) ಸೆಣಸಾಟ ನಡೆಸಲಿವೆ. ಎಲ್ಲ ನಾಲ್ಕು ತಂಡಗಳಿಗೂ ಪ್ಲೇ ಆಫ್ ಪ್ರವೇಶದ ನಿಟ್ಟಿನಲ್ಲಿ ಇದು ಮಹತ್ವದ ಪಂದ್ಯವಾಗಿದೆ. ಹೀಗಾಗಿ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಅಧಿಕವಾಗಿದೆ.
ಬ್ಯಾಟಲ್ ಆಫ್ ದಿ ಕಿಂಗ್ಸ್ಗೆ ಚೆನ್ನೈ-ಪಂಜಾಬ್ ರೆಡಿ
ಪಂಜಾಬ್-ಚೆನ್ನೈ(PBKS vs CSK) ಮೊದಲ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೆಣಸಾಟಕ್ಕೆ ಇಳಿಯಲಿವೆ. ಇದು ಈ ಆವೃತ್ತಿಯಲ್ಲಿ ಇಲ್ಲಿ ನಡೆಯುವ ಮೊದಲ ಐಪಿಎಲ್(IPL 2024) ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲೇ 7 ವಿಕೆಟ್ ಸೋಲಿಗೆ ಪಂಜಾಬ್ಗೆ ಅವರ ತವರಿನ ಅಂಗಳದಲ್ಲಿ ಸೇಡು ತೀರಿಸಿಕೊಳ್ಳುವುದು ಹಾಲಿ ಚಾಂಪಿಯನ್ ಗುರಿಯಾಗಿದೆ.
Sigaram Thodu! Time to peak! 🏔️ 💪🏻#PBKSvCSK #WhistlePodu🦁💛 pic.twitter.com/Yml4c7Zfir
— Chennai Super Kings (@ChennaiIPL) May 4, 2024
ಚೆನ್ನೈ(Chennai Super Kings) ತಂಡ ಆರಂಭಿಕ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಸತತ ಗೆಲುವು ಸಾಧಿಸಿತ್ತು. ಆದರೆ ಈಗ ಹಿಂದಿನ ಲಯ ಕಳೆದುಕೊಂಡಿದ್ದು ತವರಿನಲ್ಲೇ ಸೋಲಿನ ಅವಮಾನಕ್ಕೆ ಸಿಲುಕಿದೆ. ಬಾಂಗ್ಲಾ ಎಡಗೈ ವೇಗಿ ಮುಸ್ತಫಿಜುರ್ ರೆಹಮಾನ್ ಕೂಡ ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸುವ ಸಲುವಾಗಿ ತಂಡ ತೊರೆದಿದ್ದಾರೆ. ಶಾರ್ದೂಲ್ ಠಾಕೂರ್ ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ದೀಪಕ್ ಚಹಾರ್, ರಿಚರ್ಡ್ ಗ್ಲೀಸನ್ ಕೂಡ ದುಬಾರಿಯಾಗುತ್ತಿದ್ದಾರೆ. ಜಡೇಜಾ ಕೂಡ ಸ್ಪಿನ್ ಮಾಡುತಿಲ್ಲ. ಸದ್ಯಕ್ಕೆ ಪತಿರಾಣ ಮಾತ್ರ ಘಾತಕ ಬೌಲಿಂಗ್ ನಡೆಸುತ್ತಿದ್ದಾರೆ.
ಇದನ್ನೂ ಓದಿ IPL 2024: ಹ್ಯಾಟ್ರಿಕ್ ಗೆಲುವು ಸಾಧಿಸಿದ ಆರ್ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?
ಪಂಜಾಬ್(Punjab Kings) ತಂಡದಲ್ಲಿ ಅನುಭವಿಗಳಾದ ಕಗಿಸೊ ರಬಾಡ, ಅರ್ಶ್ದೀಪ್ ಸಿಂಗ್, ಹರ್ಷಲ್ ಪಟೇಲ್ ಅವರಂತಹ ಘಾತಕ ಬೌಲರ್ ಇದ್ದರೂ ಕೂಡ ಇವರಿಂದ ಇದುವರೆಗೆ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕಂಡುಬಂದಿಲ್ಲ. ಪಂಜಾಬ್ ಗೆದ್ದಿರುವುದು ಬ್ಯಾಟಿಂಗ್ ಬಲದಿಂದ. ಹೀಗಾಗಿ ಈ ಪಂದ್ಯದಲ್ಲಿಯೂ ಪಂಜಾಬ್ ಬ್ಯಾಟಿಂಗ್ ಬಲವನ್ನೇ ನಂಬಿದೆ. ಕಳೆದೊಂದು ವರ್ಷದಿಂದ ತೀವ್ರ ಬ್ಯಾಟಿಂಗ್ ಬರ ಎದುರಿಸಿದ್ದ ಜಾನಿ ಬೇರ್ಸ್ಟೋ ಪ್ರಚಂಡ ಫಾರ್ಮ್ಗೆ ಮರಳಿದ್ದಾರೆ. ಇದು ಪಂಜಾಬ್ಗೆ ಆನೆ ಬಲ ಬಂದಂತಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಸಿಡಿಲಬ್ಬರ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗಬಲ್ಲರು. ಒಟ್ಟಾರೆಯಾಗಿ ಪಂಜಾಬ್ಗೆ ಬ್ಯಾಟಿಂಗ್ಗೇ ಮುಖ್ಯ ಬಲವಾಗಿದೆ.
𝙐𝙋, 𝙩𝙝𝙞𝙨 𝙞𝙨 𝙮𝙤𝙪𝙧 𝙆𝙖𝙥𝙩𝙖𝙖𝙣 𝙨𝙥𝙚𝙖𝙠𝙞𝙣𝙜 💙 pic.twitter.com/uJrq2ucnMc
— Lucknow Super Giants (@LucknowIPL) May 5, 2024
ಲಕ್ನೋ ಸವಾಲು ಗೆದ್ದೀತೇ ಕೆಕೆಆರ್
ದಿನದ ಮತ್ತೊಂದು ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೆಕೆಆರ್ ಮುಖಾಮುಖಿಯಾಗಲಿವೆ. ರಾಹುಲ್ ಪಡೆಗೆ ಇದು ತವರಿನ ಪಂದ್ಯವಾಗಿದೆ. ಸದ್ಯ ಅಂಕಪಟ್ಟಿಯಲ್ಲಿ ಕೆಕೆಆರ್ 2ನೇ ಸ್ಥಾನಿಯಾಗಿದ್ದರೆ, ಲಕ್ನೋ 3ನೇ ಸ್ಥಾನದಲ್ಲಿದೆ. ಶರವೇಗದ ಎಸೆತಗಾರ ಮಾಯಾಂಕ್ ಯಾದವ್ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಲಕ್ನೋ ಬೌಲಿಂಗ್ ವಿಭಾಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕೆಕೆಆರ್ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ.