ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡದ ಎಲಿಮಿನೇಟರ್(IPL 2024 Eliminator) ಎದುರಾಳಿ ಯಾರೆಂದು ಫಿಕ್ಸ್ ಆಗಿದೆ. ಇದರ ಬೆನ್ನಲ್ಲೇ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ನಡೆಸುವ ಸಲುವಾಗಿ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ಗಳಾದ ಕ್ಯಾಮರೂನ್ ಗ್ರೀನ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ತಂಡ ತೊರೆಯಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಇಂಗ್ಲೆಂಡ್ನ ಆಟಗಾರರು ಐಪಿಎಲ್ ಪಂದ್ಯವಾವಳಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಮರಳಿದ್ದಾರೆ. ಇದೀಗ ಆಸ್ಟ್ರೇಲಿಯಾ ಸರದಿ ಎನ್ನಲಾಗಿದೆ. ಕೇವಲ ಆರ್ಸಿಬಿ ಮಾತ್ರವಲ್ಲದೆ ಇತರ ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರರು ಕೂಡ ಐಪಿಎಲ್ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಒಂದೊಮ್ಮೆ ಆಸೀಸ್ ಆಟಗಾರರು ಐಪಿಎಲ್ನಿಂದ ಹೊರಹೋದರೆ ಸನ್ರೈಸರ್ಸ್ ಮತ್ತು ಆರ್ಸಿಬಿ ತಂಡಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ಈ 2 ತಂಡಗಳಲ್ಲಿಯೇ ತಲಾ 2 ಆಸೀಸ್ ಆಟಗಾರರಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳು ಮೇ 27ರಿಂದ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ನಮೀಬಿಯಾ ವಿರುದ್ಧ ಮೇ 29ಕ್ಕೆ ಆಡಲಿದೆ. ಮೂಲಗಳ ಪ್ರಕಾರ ಆಸ್ಟ್ರೇಲಿಯಾ ತಂಡ ಮೇ 21ರಂದು ಕೆರಿಬಿಯನ್ ದ್ವೀಪಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಹೇಳಲಾಗಿದೆ.
ಆರ್ಸಿಬಿಗೆ ರಾಜಸ್ಥಾನ್ ಎದುರಾಳಿ
ಇಂದು ರಾತ್ರಿ ನಡೆಯಬೇಕಿದ್ದ ಐಪಿಎಲ್ನ ಅಂತಿಮ ಲೀಗ್ ಪಂದ್ಯವಾದ ರಾಜಸ್ಥಾನ್ ರಾಯಲ್ಸ್(RR vs KKR) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ನಡುವಣ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ರಾಜಸ್ಥಾನ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಹೀಗಾಗಿ ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡ ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ ಆಡಲಿದೆ. ಈ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸತತವಾಗಿ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಫ್ಗೆ ಲಗ್ಗೆಯಿಟ್ಟ ಆರ್ಸಿಬಿಗೆ ಎಲಿಮಿನೇಟರ್ ಪಂದ್ಯದಲ್ಲೂ ಲಕ್ ಹೈ ಹಿಡಿಯುವುದೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IPL 2024 : ಐಪಿಎಲ್ ಬೆಟ್ಟಿಂಗ್‌ಗಾಗಿ ಮೈ ತುಂಬಾ ಸಾಲ; ನೇಣಿಗೆ ಶರಣಾದ ಯುವಕ
ಕೆಕೆಆರ್ ಮಣಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಕ್ವಾಲಿಫೈಯರ್ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್ಗೆ(Rajasthan Royals) ಮಳೆ ತಣ್ಣೀರೆರಚಿತು. ಸನ್ರೈಸರ್ಸ್ ಹೈದರಾಬಾದ್ 2ನೇ ತಂಡವಾಗಿ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಿತು. ರಾಜಸ್ಥಾನ್ ಮತ್ತು ಹೈದರಾಬಾದ್ ಸಮಾನ 17 ಅಂಕ ಹೊಂದಿದರೂ ರನ್ ರೇಟ್ನಲ್ಲಿ ಮುಂದಿದ್ದ ಕಾರಣ ಈ ಲಾಭ ಕಮಿನ್ಸ್ ಪಡೆಗೆ ಲಭಿಸಿತು. ಮಂಗಳವಾರ(ಮೇ 21) ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೈದರಾಬಾದ್ ಕಣಕ್ಕಿಳಿಯಲಿದೆ. ಈ ಪಂದ್ಯ ಅಹಮದಾಬಾದ್ನಲ್ಲಿ ನಡೆಯಲಿದೆ.