Site icon Vistara News

IPL 2024 Final: ಐಪಿಎಲ್​ ವಿನ್ನರ್​ & ರನ್ನರ್​ಗೆ ಸಿಗುವ ಮೊತ್ತವೆಷ್ಟು? ಈ ಬಾರಿ ಆರೆಂಜ್​ ಕ್ಯಾಪ್​, ಪರ್ಪಲ್​ ಕ್ಯಾಪ್​ ಯಾರಿಗೆ ಸಿಗಲಿದೆ?

IPL 2024 Final

IPL 2024 Final: How much will IPL winner & runner get? Who will get Orange Cap, Purple Cap award?

ಚೆನ್ನೈ: ಇಂದು (ಭಾನುವಾರ) ನಡೆಯಲಿರುವ 17ನೇ ಆವೃತ್ತಿಯ ಐಪಿಎಲ್(IPL 2024 Final)​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ಮತ್ತು ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ವಿಜೇತರು(IPL 2024 Prize money) ಎಷ್ಟು ಹಣ ಪಡೆಯುತ್ತಾರೆ ಎನ್ನುವ ಕುತೂಲಕಾರಿ ಮಾಹಿತಿ ಇಂತಿದೆ.

ಕೆಕೆಆರ್​ ಮತ್ತು ಹೈದರಾಬಾದ್ ಐಪಿಎಲ್‌ ಫೈನಲ್‌ನಲ್ಲಿ ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲು. ಫೈನಲ್​ನಲ್ಲಿ ವಿಜೇತ ತಂಡಕ್ಕೆ ಬಹುಮಾನ ಮೊತ್ತವಾಗಿ 20 ಕೋಟಿ ರೂಪಾಯಿ ಸಿಗಲಿದೆ. ಹಾಗೆಯೇ, ರನ್ನರ್ ಅಪ್‌ ತಂಡಕ್ಕೆ 15 ಕೋಟಿ ರೂ. ಸಿಗಲಿದೆ. ಮೂರನೇ ಸ್ಥಾನಿಯಾದ ರಾಜಸ್ಥಾನ್​ಗೆ 7 ಕೋಟಿ ಮತ್ತು 4ನೇ ಸ್ಥಾನಿ ಆರ್​ಸಿಬಿಗೆ 6.5 ಕೋಟಿ ರೂ ಸಿಗಲಿದೆ. ಒಟ್ಟು ಬಹುಮಾನ ಮೊತ್ತ 46.5 ಕೋಟಿ ರೂ. ಆಗಿದೆ.

ಸ್ವಾರಸ್ಯವೆಂದರೆ ಐಪಿಎಲ್​ ವಿಜೇತರಿಗಿಂತ ಅಧಿಕ ಮೊತ್ತ ಈ ಬಾರಿ ಆಸ್ಟ್ರೇಲಿಯಾದ ಆಟಗಾರರಾದ ಪ್ಯಾಟ್‌ ಕಮಿನ್ಸ್‌ ಮತ್ತು ಮಿಚೆಲ್​ ಸ್ಟಾರ್ಕ್​ಗೆ ಸಿಕ್ಕಿದೆ. ಪ್ಯಾಟ್‌ ಕಮಿನ್ಸ್‌ ಅವರನ್ನು ಹೈದರಾಬಾದ್‌ 20.5 ಕೋಟಿ ರೂ.ಗೆ ಖರೀದಿಸಿತ್ತು. ಅತ್ತ ಕೆಕೆಆರ್​ ವಿಚೆಲ್​ ಸ್ಟಾರ್ಕ್‌ ಅವರನ್ನು ಬರೋಬ್ಬರಿ 24.75 ಕೋಟಿ ರೂ. ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿತು.

ಇದನ್ನೂ ಓದಿ KKR vs SRH IPL 2024: ಐಪಿಎಲ್​ ಫೈನಲ್​ ಸಮಾರಂಭದಲ್ಲಿ ಸಂಗೀತ ರಸದೌತಣ ನೀಡಲಿದ್ದಾರೆ ಕೊಹ್ಲಿಯ ಅಪ್ಪಟ ಅಭಿಮಾನಿ

ಕೊಹ್ಲಿಗೆ ಆರೆಂಜ್​ ಕ್ಯಾಪ್​


ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ 15 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಸದ್ಯ ಆರ್​ಸಿಬಿ ತಂಡದ ವಿರಾಟ್​ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿ 741 ರನ್​ ಬಾರಿಸಿ ಆರೆಂಜ್ ಕ್ಯಾಪ್ ಹೋಲ್ಡರ್​ ಆಗಿದ್ದಾರೆ. ಇವರ ರನ್​ ಹಿಂದಿಕ್ಕಲು ಇನ್ನು ಯಾರಿಗೂ ಅವಕಾಶ ಇಲ್ಲದ ಕಾರಣ ಈ ಪ್ರಶಸ್ತಿ ಇವರಿಗೇ ಸಿಗಲಿದೆ.

ಪರ್ಪಲ್​ ಕ್ಯಾಪ್​ ಸದ್ಯ 24 ವಿಕೆಟ್​ ಪಡೆದಿರುವ ಪಂಜಾಬ್ ಕಿಂಗ್ಸ್​​ ತಂಡದ ಹರ್ಷಲ್​ ಪಟೇಲ್​ ಬಳಿ ಇದೆ. ಆದರೆ ಈ ಕ್ಯಾಪ್​ ಪಡೆಯಲು ಕೆಕೆಆರ್​ ತಂಡದ ಸ್ಪಿನ್ನರ್​ ವರಣ್​ ಚರ್ಕವರ್ತಿಗೆ ಉತ್ತಮ ಅವಕಾಶವಿದೆ. ವರುಣ್​ ಸದ್ಯ 20 ವಿಕೆಟ್​ ಕಿತ್ತಿದ್ದಾರೆ. ಫೈನಲ್​ ಪಂದ್ಯದಲ್ಲಿ 5 ವಿಕೆಟ್​ ಕಿತ್ತರೆ ಈ ಕ್ಯಾಪ್​ ಇವರ ಪಾಲಾಗಲಿದೆ.

ಇತರ ಬಹುಮಾನ


ಪಂದ್ಯಾವಳಿಯ ಉದಯೋನ್ಮುಖ ಆಟಗಾರನಿಗೆ 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸಿಗಲಿದೆ. ಋತುವಿನ ಅತ್ಯಂತ ಮೌಲ್ಯಯುತ ಆಟಗಾರ 12 ಲಕ್ಷ ರೂಪಾಯಿ, ಇತರ ಪ್ರಶಸ್ತಿಗಳಾದ-ಪವರ್ ಪ್ಲೇಯರ್ ಆಫ್ ದಿ ಸೀಸನ್, ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಮತ್ತು ಗೇಮ್ ಚೇಂಜರ್ ಆಫ್ ದಿ ಸೀಸನ್ ಪಡೆದ ಆಟಗಾರ ಕ್ರಮವಾಗಿ ರೂ 15 ಲಕ್ಷ ಮತ್ತು ರೂ 12 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ.

Exit mobile version