Site icon Vistara News

IPL 2024: ಹರಾಜಿನಲ್ಲಿ ಅನ್​ಸೋಲ್ಡ್​ ಆದ ಆಟಗಾರರ ಪಟ್ಟಿ; ಇನ್ನೂ ಇದೆ ಅವಕಾಶ!

unsold players

ಬೆಂಗಳೂರು: ಮಂಗಳವಾರ ದುಬೈನಲ್ಲಿ ನಡೆದ 2024ರ ಐಪಿಎಲ್​ನ(IPL 2024) ಆಟಗಾರರ ಮಿನಿ ಹರಾಜು ಹಲವು ದಾಖಲೆಗಳಿಗೆ ಸಾಕ್ಷಿಯಾಗಿತ್ತು. ಕೆಲ ನಿರೀಕ್ಷೆಗಳು ಹುಸಿಗೊಂಡರೆ, ಇನ್ನೂ ಕೆಲವು ನಿರೀಕ್ಷೆಯನ್ನು ಮೀರಿದ ಮೊತ್ತಕ್ಕೆ ಆಟಗಾರರು ಸೇಲ್​ ಆದರು. ಪ್ಯಾಟ್ ಕಮಿನ್ಸ್ ಅವರು 20.50 ಕೋಟಿ ರೂ. ಗೆ ಹೈದರಾಬಾದ್ ತಂಡದ ಪಾಲಾಗಿ ದಾಖಲೆ ಬರೆದರೆ, ಕೆಲವೇ ನಿಮಿಷಗಳಲ್ಲಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ. ಸಾರ್ವಕಾಲಿಕ ದಾಖಲೆ ಮೊತ್ತಕ್ಕೆ ಮಾರಾಟವಾದರು. ಒಟ್ಟು 333 ಆಟಗಾರರಲ್ಲಿ ಅನ್​ಸೋಲ್ಡ್​ ಆದ ಆಟಗಾರರ ಪಟ್ಟಿ ಇಲ್ಲಿದೆ.

ಅನ್​ಸೋಲ್ಡ್​ ಆದರೂ ಇನ್ನೂ ಇದೆ ಅವಕಾಶ

ಅನ್​ಸೋಲ್ಡ್​ ಆದ ಆಟಗಾರರಿಗೆ ಇನ್ನು ಕೂಡ ಐಪಿಎಲ್​ ತಂಡ ಸೇರುವ ಅವಕಾಶವಿದೆ. ಇದು ಹೇಗೆ ಎನ್ನುವ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಐಪಿಎಲ್​ ತಂಡ ಸೇರಿದ ಯಾವುದೇ ಆಟಗಾರ ಗಾಯಗೊಂಡು ಅಥವಾ ಇತರ ಕಾರಣಗಳಿಂದ ಟೂರ್ನಿಗೆ ಅಲಭ್ಯರಾದರೆ ಆಗ ಅನ್​ಸೋಲ್ಡ್​ ಆದ ಆಟಗಾರರಿಗೆ ಅದೃಷ್ಟ ಖುಲಾಯಿಸಲಿದೆ.

ಇದಕ್ಕೆ ತಕ್ಕ ನಿದರ್ಶನವೆಂದರೆ, ಕಳೆದ ಬಾರಿಯ ಮಿನಿ ಹರಾಜಿನಲ್ಲಿ 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಟೀಮ್​ ಇಂಡಿಯಾದ ಹಿರಿಯ ಆಟಗಾರ ಕೇದಾರ್​ ಜಾಧವ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ಅವರು ಅನ್​ಸೋಲ್ಡ್​ ಆಟಗಾರರ ಪಟ್ಟಿಯಲ್ಲಿದ್ದರು. ಆಡುವ ಅವಕಾಶ ಸಿಗದ ಕಾರಣ ಅವರು ಸ್ಟಾರ್​​ ಸ್ಪೋರ್ಟ್ಸ್​ನಲ್ಲಿ ಟೂರ್ನಿಯ ಕಾಮೆಂಟ್ರಿ ನಡೆಸುವು ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆರ್​ಸಿಬಿಯ ಬೌಲರ್​ ಡೇವಿಡ್​ ವಿಲ್ಲಿ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರು. ಇವರ ಸ್ಥಾನಕ್ಕೆ ಕೇದಾರ್​ ಆಯ್ಕೆಯಾದರು. ಹೀಗಾಗಿ ಈ ಬಾರಿ ಅನ್​ಸೋಲ್ಡ್​ ಆದ ಆಟಗಾರರಿಗೆ ಇದೇ ರೀತಿಯ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ಆದರ ಅದೃಷ್ಟ ನೆಟ್ಟಗಿರಬೇಕು.

ಇದನ್ನೂ ಓದಿ IPL 2024 Auction : ಆಟಗಾರರನ್ನು ಖರೀದಿಸಿದ ಬಳಿಕ ಆರ್​ಸಿಬಿ ತಂಡ ಈ ರೀತಿ ಇದೆ

ಈ ಬಾರಿ ಅನ್​ಸೋಲ್ಡ್​ ಆದ ಆಟಗಾರರ ಪಟ್ಟಿ

ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)

ಕರುಣ್ ನಾಯರ್ (ಭಾರತ)

ಫಿಲಿಪ್ ಸಾಲ್ಟ್ (ಇಂಗ್ಲೆಂಡ್)

ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ)

ಕುಸಾಲ್ ಮೆಂಡಿಸ್ (ಶ್ರೀಲಂಕಾ)

ಜೋಶ್ ಹ್ಯಾಝಲ್‌ವುಡ್ (ಆಸ್ಟ್ರೇಲಿಯಾ)

ಕಾಲಿನ್ ಮನ್ರೊ (ನ್ಯೂಜಿಲ್ಯಾಂಡ್)

ಫಿನ್ ಅಲೆನ್ (ನ್ಯೂಜಿಲ್ಯಾಂಡ್​)

ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ)

ಕೈಸ್ ಅಹ್ಮದ್ (ಅಫಘಾನಿಸ್ತಾನ)

ಮೈಕೆಲ್ ಬ್ರೇಸ್‌ವೆಲ್ (ನ್ಯೂಜಿಲ್ಯಾಂಡ್)

ಜೇಮ್ಸ್ ನೀಶಮ್ (ನ್ಯೂಜಿಲ್ಯಾಂಡ್)

ಕೀಮೋ ಪಾಲ್ (ವೆಸ್ಟ್ ಇಂಡೀಸ್)

ಒಡಿಯನ್ ಸ್ಮಿತ್ (ವೆಸ್ಟ್ ಇಂಡೀಸ್)

ದುಷ್ಮಂತ ಚಮೀರ (ಶ್ರೀಲಂಕಾ)

ಬೆನ್ ದ್ವಾರ್ಶುಯಿಸ್ (ಆಸ್ಟ್ರೇಲಿಯಾ)

ಮ್ಯಾಟ್ ಹೆನ್ರಿ (ನ್ಯೂಜಿಲ್ಯಾಂಡ್)

ಕೈಲ್ ಜೇಮಿಸನ್ (ನ್ಯೂಜಿಲ್ಯಾಂಡ್)

ಆಡಮ್ ಮಿಲ್ನೆ (ನ್ಯೂಜಿಲ್ಯಾಂಡ್)

ಲ್ಯಾನ್ಸ್ ಮೋರಿಸ್ (ಆಸ್ಟ್ರೇಲಿಯಾ)

ಲ್ಯೂಕ್ ವುಡ್ (ಇಂಗ್ಲೆಂಡ್)

ಮೊಹಮ್ಮದ್ ವಕಾರ್ (ಅಫಘಾನಿಸ್ತಾನ)

ಮೊಹಮ್ಮದ್ ವಕಾರ್ ಸಲಾಮ್ಖೈಲ್ (ಅಫಘಾನಿಸ್ತಾನ)

ಆದಿಲ್ ರಶೀದ್ (ಇಂಗ್ಲೆಂಡ್)

ಅಕೇಲ್ ಹೊಸೈನ್ (ವೆಸ್ಟ್ ಇಂಡೀಸ್)

ಇಶ್ ಸೋಧಿ (ನ್ಯೂಜಿಲ್ಯಾಂಡ್)

ತಬ್ರೇಝ್ ಶಮ್ಸಿ (ಸೌತ್ ಆಫ್ರಿಕಾ)

ರೋಹನ್ ಕುನ್ನುಮ್ಮಲ್ (ಭಾರತ)

ಪ್ರಿಯಾಂಶ್ ಆರ್ಯ (ಭಾರತ)

ಮನನ್ ವೋಹ್ರಾ (ಭಾರತ)

ಸರ್ಫರಾಝ್ ಖಾನ್ (ಭಾರತ)

ರಾಜ್ ಅಂಗದ್ ಬಾವಾ (ಭಾರತ)

ವಿವ್ರಾಂತ್ ಶರ್ಮಾ (ಭಾರತ)

ಅತಿತ್ ಶೇತ್ (ಭಾರತ)

ಹೃತಿಕ್ ಶೋಕೀನ್ (ಭಾರತ)

ಉರ್ವಿಲ್ ಪಟೇಲ್ (ಭಾರತ)

ವಿಷ್ಣು ಸೋಲಂಕಿ (ಭಾರತ)

ಇಶಾನ್ ಪೊರೆಲ್ (ಭಾರತ)

ಮುರುಗನ್ ಅಶ್ವಿನ್ (ಭಾರತ)

ಸಂದೀಪ್ ವಾರಿಯರ್ (ಭಾರತ)

ರಿತಿಕ್ ಈಶ್ವರನ್ (ಭಾರತ)

ಹಿಮ್ಮತ್ ಸಿಂಗ್ (ಭಾರತ)

ಶಶಾಂಕ್ ಸಿಂಗ್ (ಭಾರತ)

ಸುಮೀತ್ ವರ್ಮಾ (ಭಾರತ)

ಹರ್ಷ ದುಬೆ (ಭಾರತ)

ಕಮಲೇಶ ನಾಗರಕೋಟಿ (ಭಾರತ)

ರೋಹಿತ್ ರಾಯುಡು (ಭಾರತ)

ಪ್ರದೋಶ್ ಪಾಲ್ (ಭಾರತ)

ಜಿ ಅಜಿತೇಶ್ (ಭಾರತ)

ಗೌರವ್ ಚೌಧರಿ (ಭಾರತ)

ಬಿಪಿನ್ ಸೌರಭ್ (ಭಾರತ)

ಸಾಕಿಬ್ ಹುಸೇನ್ (ಭಾರತ)

ಮೊಹಮ್ಮದ್ ಕೈಫ್ (ಭಾರತ)

ಕೆ ಎಂ ಆಸಿಫ್ (ಭಾರತ)

ಗುರ್ಜಪ್ನೀತ್ ಸಿಂಗ್ (ಭಾರತ)

ಪೃಥ್ವಿ ರಾಜ್ ಯರ್ರಾ (ಭಾರತ)

ಶುಭಂ ಅಗರ್ವಾಲ್ (ಭಾರತ)

Exit mobile version