Site icon Vistara News

GT vs PBKS: ಟೈಟಾನ್ಸ್​ ಮುಳುಗಿಸೀತೇ ಪಂಜಾಬ್​ ಕಿಂಗ್ಸ್?

GT vs PBKS

ಅಹಮದಾಬಾದ್​: ತವರಿನಲ್ಲಿ ಬಲಿಷ್ಠವಾಗಿರುವ, ಶುಭಮನ್​ ಗಿಲ್(Shubman Gill)​ ಸಾರಥ್ಯದ ಗುಜರಾತ್​ ಟೈಟಾನ್ಸ್(GT vs PBKS)​ ತಂಡ ಗುರುವಾರದ ಐಪಿಎಲ್​ನ(IPL 2024) 17ನೇ ಪಂದ್ಯದಲ್ಲಿ ಗಬ್ಬರ್​ ಖ್ಯಾತಿಯ ಶಿಖರ್​ ಧವನ್(Shikhar Dhawan)​ ನೇತೃತ್ವದ ಪಂಜಾಬ್​ ಕಿಂಗ್ಸ್​ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಇತ್ತಂಡಗಳ ಈ ಕಾದಾಟ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ(Narendra Modi Stadium) ನಡೆಯಲಿದೆ.​

ಪಂಜಾಬ್​ ಕಿಂಗ್ಸ್​ ಆಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಆ ಬಳಿಕ ಸತತ ಸೋಲಿಗೆ ತುತ್ತಾಯಿತು. ಇದೀಗ ನಾಲ್ಕನೇ ಪ್ರಯತ್ನದಲ್ಲಿ ಮತ್ತೆ ಗೆಲುವಿನ ಹಳಿ ಏರುವ ವಿಶ್ವಾಸದೊಂದಿಗೆ ಆಡಲಿಳಿಯಲಿದೆ. ಗಾಯಾಳು ಲಿಯಾಮ್​ ಲಿವಿಂಗ್​ಸ್ಟೋನ್ ಈ ಪಂದ್ಯದಲ್ಲಿ ಆಡುವುದು ಬಹುತೇಕ ಅನುಮಾನ. ಅವರ ಸ್ಥಾನದಲ್ಲಿ ನಥಾನ್​ ಎಲ್ಲಿಸ್​ ಕಣಕ್ಕಿಳಿಯಬಹುದು.​

ಗುಜರಾತ್​ ತಂಡ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ಮತ್ತು ಒಂದು ಸೋಲು ಕಂಡಿದೆ. ಎರಡೂ ಗೆಲುವು ಕೂಡ ತವರಿನಂಗಳದಲ್ಲಿಯೇ ಬಂದಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ಗೆಲುವು ಸಾಧಿಸುವ ಇರಾದೆಯಲ್ಲಿದೆ. ಆರ್​ಸಿಬಿ, ಮುಂಬೈ ತಂಡಕ್ಕೆ ಹೋಲಿಸಿದರೆ ಗುಜರಾತ್​ ತಂಡದ ಸಾಹಸವನ್ನು ಮೆಚ್ಚಲೇ ಬೇಕು. ಈ ತಂಡದಲ್ಲಿ ಸ್ಟಾರ್​ ಆಟಗಾರರು ಅಷ್ಟಾಗಿ ಇರದಿದ್ದರೂ ಕೂಡ ಇರುವ ಆಟಗಾರರ ಸಾಮರ್ಥ್ಯವನ್ನು ಬಳಸಿಕೊಂಡು ಗೆಲುವು ಸಾಧಿಸುತ್ತಿರುವುದು ನಿಜಕ್ಕೂ ಗ್ರೇಟ್​ ಎನ್ನಲೇ ಬೇಕು.

ಪಿಚ್​ ರಿಪೋರ್ಟ್​


ಅಹಮದಾಬಾದ್‌​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ಗೆ ಸಮಾನವಾಗಿ ಸಹಕಾರಿಸಲಿದೆ. ಆರಂಭದಲ್ಲಿ ಬೌಲಿಂಗ್​ಗೆ ನೆರವಾದರೆ ಆ ಬಳಿಕ ನಿಧಾನವಾಗಿ ಬ್ಯಾಟಿಂಗ್​ ಸ್ನೇಹಿಯಾಗಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಚೇಸಿಂಗ್​ ನಡೆಸುವ ಸಾಧ್ಯತೆ ಅಧಿಕವಾಗಿದೆ.

ಇದನ್ನೂ ಓದಿ IPL 2024: 6.4 ಕೋಟಿ ಪಡೆದ ಬೌಲರ್​ ರೂಲ್ಡ್​ ಔಟ್​; ಲಕ್ನೋ ತಂಡಕ್ಕೆ ಭಾರೀ ಹಿನ್ನಡೆ​

ಬಲಾಬಲ


ಗುಜರಾತ್​ ಟೈಟಾನ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ತಂಡಗಳು ಇದುವರೆಗಿನ ಐಪಿಎಲ್​ನಲ್ಲಿ ಕೇವಲ 3 ಬಾರಿ ಮಾತ್ರ ಮುಖಾಮುಖಿಯಾಗಿವೆ. ಇದರಲ್ಲಿ ಪಂಜಾಬ್​ ಗೆದ್ದಿದ್ದು ಒಂದು ಪಂದ್ಯ ಮಾಶತ್ರ ಉಳಿದ 2 ಪಂದ್ಯಗಳಲ್ಲಿ ಗುಜರಾತ್​ ಗೆಲುವು ಸಾಧಿಸಿದೆ. ಈ ಆವೃತ್ತಿಯ ಟೂರ್ನಿಯಲ್ಲಿ ತವರಿನಲ್ಲಿ ಆಡಿದ 2 ಪಂದ್ಯಗಳನ್ನು ಗೆದ್ದಿರುವ ಗುಜರಾತ್​ ನಾಳೆ ನಡೆಯುವ ಪಂದ್ಯದಲ್ಲಿಯೂ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ.

ಸಂಭಾವ್ಯ ತಂಡಗಳು


ಗುಜರಾತ್​ ಟೈಟಾನ್ಸ್​:
ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಶುಭಮನ್ ಗಿಲ್ (ನಾತಕ), ಅಜ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ

ಪಂಜಾಬ್​ ಕಿಂಗ್ಸ್​: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್/ ನಥಾನ್​ ಎಲ್ಲಿಸ್​, ಸ್ಯಾಮ್ ಕರನ್​, ಜಿತೇಶ್ ಶರ್ಮಾ (ವಿಕೆಟ್​ ಕೀಪರ್), ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.

ಪಂದ್ಯ ಆರಂಭ: ರಾತ್ರಿ 7.30, ಪ್ರಸಾರ: ಸ್ಟಾರ್​ಸ್ಟೋರ್ಟ್ಸ್​

Exit mobile version