Site icon Vistara News

IPL 2024: ಆರ್​ಸಿಬಿಗೆ ಬಿಗ್​ ಶಾಕ್​; ಐಪಿಎಲ್​ ಟೂರ್ನಿಯಿಂದ ಹೊರ ಬಿದ್ದ ಆಲ್​ರೌಂಡರ್​!

IPL 2024

ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟಿರುವ ಆರ್​ಸಿಬಿ(RCB) ತಂಡಕ್ಕೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ತಂಡದ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್(Glenn Maxwell)​ ಅವರು ಗಾಯದಿಂದಾಗಿ ಸಂಪೂರ್ಣವಾಗಿ ಐಪಿಎಲ್​(IPL 2024) ಟೂರ್ನಿಯಿಂದ(Maxwell ruled out of IPL) ಹೊರ ಬೀಳಲಿದ್ದಾರೆ ಎಂದು ತಂಡದ ಮೂಲಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಮ್ಯಾಕ್ಸ್​ವೆಲ್ ಅವರು ಈ ಬಾರಿಯ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿದ 6 ಪಂದ್ಯಗಳಲ್ಲಿ 2 ಪಂದ್ಯ ಶೂನ್ಯ ಸಾಧನೆ. ಉಳಿದ ಎರಡಂಕಿ ದಾಟಿತ್ತು ಒಂದು ಪಂದ್ಯದಲ್ಲಿ ಮಾತ್ರ. ಬ್ಯಾಟಿಂಗ್​ ಮಾತ್ರವಲ್ಲದೆ ಫೀಲ್ಡಿಂಗ್​ನಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ 2 ಕ್ಯಾಚ್​ ಕೈಚೆಲ್ಲಿ ಪಂದ್ಯದ ಸೋಲಿಗೆ ಕಾರಣರಾಗಿದ್ದರು. ಇದೇ ಪಂದ್ಯದಲ್ಲಿ ಬೆರಳಿನ ಗಾಯಕ್ಕೂ ತುತ್ತಾಗಿದ್ದರು. ಒಟ್ಟಾರೆ ಅಸ್ಥಿರ ಪ್ರದರ್ಶನ ತೋರುತ್ತಿರುವ ಮ್ಯಾಕ್ಸ್​ವೆಲ್​ ಐಪಿಎಲ್​ನಿಂದ ಹೊರಬಿಳಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಫ್ರಾಂಚೈಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಕುಡಿತದ ಚಟಕ್ಕೆ ದಾಸನಾದ ಮ್ಯಾಕ್ಸ್​ವೆಲ್​?


ಗ್ಲೆನ್​​ ಮ್ಯಾಕ್ಸ್​ವೆಲ್​(Glenn Maxwell) ಅವರ ಕಳಪೆ ಪ್ರದರ್ಶನಕ್ಕೆ ಕುಡಿತದ ಚಟವೇ ಪ್ರಮುಖ ಕಾರಣ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನದ ಮೂಲಕ ಏಕಾಂಗಿಯಾಗಿ 200 ರನ್​ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಅಲ್ಲದೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಹೀಗಾಗಿ ಅವರ ಮೇಲೆ ಈ ಬಾರಿ ಆರ್​ಸಿಬಿ ಹೆಚ್ಚಿನ ನಿರೀಕ್ಷೆ ಇರಿಸಿತ್ತು. ಆದರೆ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಇದಕ್ಕೆ ಕುಡಿತದ ಚಟವೇ ಕಾರಣ ಎನ್ನಲಾಗಿದೆ.

ಇದನ್ನೂ ಓದಿ IPL 2024: ಆರ್​ಸಿಬಿ ಪ್ಲೇ ಆಫ್​ ಪ್ರವೇಶದ ಲೆಕ್ಕಾಚಾರ ಹೇಗಿದೆ?

ಪ್ರತಿ ದಿನ ಮ್ಯಾಕ್ಸ್​ವೆಲ್ ಕುಡಿಯುತ್ತಿದ್ದು ಇದರಿಂದ ಅವರಿಗೆ ಆಟದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಪಂದ್ಯದ ಮುನ್ನ ದಿನವೂ ಕೂಡ ಅವರು ಪಾನಮತ್ತರಾಗಿರುತ್ತಾರೆ ಎಂದು ಕೆಲ ಮೂಲಗಳು ತಿಳಿಸಿವೆ. ಇದೇ ವರ್ಷಾರಂಭದಲ್ಲಿ ಮ್ಯಾಕ್ಸ್​ವೆಲ್(Glenn Maxwell)​ ಅವರು ಕಂಠ ಪೂರ್ತಿ ಕುಡಿದು ಅಸ್ವಸ್ಥರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜನವರಿಯಲ್ಲಿ ಅಡಿಲೇಡ್​ನಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಏರ್ಪಡಿಸಿದ್ದ ಮದ್ಯಪಾನ ಪಾರ್ಟಿಯಲ್ಲಿ ಅತಿಯಾಗಿ ಕುಡಿದ ಮ್ಯಾಕ್ಸ್​ವೆಲ್​ ಅನಾರೋಗ್ಯಕ್ಕೀಡಾದ್ದರು. ತಕ್ಷಣ ಅವರನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹಿಂದೊಮ್ಮೆ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಮ್ಯಾಕ್ಸ್​ವೆಲ್​ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಇದರಿಂದ ಬಿಗ್ ಬ್ಯಾಶ್ ಕೂಟದಿಂದ ಮ್ಯಾಕ್ಸ್​ವೆಲ್​ ಹೊರಬಿದ್ದಿದ್ದರು.

2022ರ ಮಾರ್ಚ್‌ 18ರಂದು ಮ್ಯಾಕ್ಸ್‌ವೆಲ್‌ ಮತ್ತು ವಿನಿ ರಾಮನ್‌ ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದರು. ಅಲ್ಲದೆ ಭಾರತೀಯ ಸಂಪ್ರದಾಯದಂತೆ ಸೀಮಂತ ಕೂಡ ಮಾಡಿ ಎಲ್ಲರ ಗಮನಸೆಳೆದಿದ್ದರು. ಈ ಜೋಡಿಗೆ ಮುದ್ದಾದ ಒಂದು ಗಂಡು ಮಗುವಿದೆ. ಮಗುವಿನ ಹೆಸರು ಲೋಗನ್‌ ಮಾವೆರಿಕ್‌(Logan Maverick).

Exit mobile version