Site icon Vistara News

IPL 2024: ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​; ಐಪಿಎಲ್​ ಆರಂಭಕ್ಕೆ ಡೇಟ್​ ಫಿಕ್ಸ್!​

ipl fans

ಮುಂಬಯಿ: ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024)ರ ಆಟಗಾರರ ಮಿನಿ ಹರಾಜು(IPL Auction 2024) ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಆದರೆ ಟೂರ್ನಿ ಯಾವಾಗ ಆರಂಭವಾಗಲಿದೆ ಎನ್ನುವುದು ಕ್ರಿಕೆಟ್​ ಅಭಿಮಾನಗಳ ಚಿಂತೆಯಾಗಿತ್ತು. ಇದಕ್ಕೆ ಈ ಉತ್ತರ ಸಿಕ್ಕಿದೆ. ಟೂರ್ನಿ ಆರಂಭದ ಸುಳಿವನ್ನು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(jay shah) ಬಿಟ್ಟುಕೊಟ್ಟಿದ್ದಾರೆ.

ಹೌದು, ಶನಿವಾರ ಮುಂಬೈಯಲ್ಲಿ ನಡೆದಿದ್ದ ಮಹಿಳಾ ಪ್ರೀಮಿಯರ್​ ಲೀಗ್​ನ ಮಿನಿ ಹರಾಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಯ್​ ಶಾ ಅವರು ಪುರುಷರ 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ.​

ಪ್ರತಿ ವರ್ಷ ಐಪಿಎಲ್​ ಆರಂಭವಾಗುವುದು ಮಾರ್ಚ್​ ಅಂತಿಮ ವಾರದಲ್ಲಿ. ಮೇ ತನಕ ಪಂದ್ಯಾವಳಿಗಳು ಸಾಗುತ್ತದೆ. ಆದರೆ ಈ ಬಾರಿ 2024 ಲೋಕಸಭಾ ಚುನಾವಣೆ ಇದೇ ಸಮಯದಲ್ಲಿ ಇರುವುದರಿಂದ ಟೂರ್ನಿಯನ್ನು ಭಾರತದಲ್ಲಿ ನಡೆಸುವುದು ಕಷ್ಟ. ಹೀಗಾಗಿ ಐಪಿಎಲ್​ ಅಭಿಮಾನಿಗಳಿಗೆ ಟೂರ್ನಿ ಆರಂಭದ ಬಗ್ಗೆ ಹಲವು ಗೊಂದಲ ಕಾಡಿತ್ತು. ಇದೀಗ ಜಯ್​ ಶಾ ಅವರು ಮಾರ್ಚ್ ಕೊನೆಯ ವಾರದಲ್ಲಿ ಐಪಿಎಲ್ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆದರೆ ದಿನಾಂಕ ಮತ್ತು ಈ ಟೂರ್ನಿಯನ್ನು ಎಲ್ಲಿ ನಡೆಸಲಾಗುವುದು ಎನ್ನುವ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಈ ಹಿಂದೆಯೂ ವಿದೇಶದಲ್ಲಿ ನಡೆದಿತ್ತು ಟೂರ್ನಿ

2009ರಲ್ಲಿ ಮಹಾಚುನಾವಣೆಯ ಕಾರಣದಿಂದ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಹಾಗೆಯೇ 2014ರಲ್ಲಿಯೂ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಆದರೆ ಈ ಬಾರಿ ಬಿಸಿಸಿಐ ಸಂಪೂರ್ಣವಾಗಿ ಟೂರ್ನಿಯನ್ನು ವಿದೇಶದಲ್ಲಿ ನಡೆಸುವುದು ಕಷ್ಟ ಸಾಧ್ಯ. ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಒಂದು ಹಂತದ ಪಂದ್ಯಗಳನ್ನು ವಿದೇಶದಲ್ಲಿ ನಡೆಸುವ ಸಾಧ್ಯತೆ ಇದೆ. ಆದರೆ ಈ ತಾಣ ಯಾವುದೆಂಬುದು ಕುತೂಹಲ. ಸದ್ಯದ ಪ್ರಕಾರ ಬಿಸಿಸಿಐ ಯುಎಇಯಲ್ಲಿ ನಡೆಸುವ ಸಾಧ್ಯತೆ ಅಧಿಕ. ಏಕೆಂದರೆ ಪ್ರಯಾಣದ ದೃಷ್ಟಿಯಲ್ಲಿ ಹತ್ತಿರವಿರುವುದರಿಂದ ಯುಎಇಯನ್ನು ಮೊದಲ ಆಧ್ಯತೆಯಾಗಿ ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ IPL 2024 : ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆರ್​ಸಿಬಿಯ ಮೂವರು ಮಾಜಿ ಆಟಗಾರರು ಇವರು

1166 ಆಟಗಾರರು ಹೆಸರು ನೋಂದಣಿ

ಈ ಬಾರಿಯ ಐಪಿಎಲ್​ ಮಿನಿ ಹರಾಜಿಗೆ 1,166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ. ಈ ಪಟ್ಟಿಯಲ್ಲಿ 212 ಅಂತಾರಾಷ್ಟ್ರೀಯ ಪಂದ್ಯವಾಡಿದವರು , 909 ಅಂತಾರಾಷ್ಟ್ರೀಯ ಕ್ರಿಕೆಟ್ ಆಡದವರು ಮತ್ತು 45 ಅಸೋಸಿಯೇಟ್ ಆಟಗಾರರು ಇದ್ದಾರೆ. ಈ ಪೈಕಿ ವಿದೇಶಿ ಆಟಗಾರರ ಸಂಖ್ಯೆ 336 ಎಂದು ತಿಳಿದುಬಂದಿದೆ.

ಫ್ರಾಂಚೈಸಿಗಳಿಗೆ ಸೂಚನೆ

ಹರಾಜು ರಿಜಿಸ್ಟರ್​ನಲ್ಲಿ ಪಟ್ಟಿ ಮಾಡದ ಹೆಚ್ಚುವರಿ ಆಟಗಾರರ ವಿನಂತಿಗಳೊಂದಿಗೆ ಪ್ರತಿಕ್ರಿಯಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫ್ರಾಂಚೈಸಿಗಳನ್ನು ವಿನಂತಿಸಿದೆ. ವಿನಂತಿಸಿದ ಆಟಗಾರರು ಅರ್ಹರಾಗಿದ್ದರೆ ಮತ್ತು ಆಸಕ್ತಿ ಹೊಂದಿದ್ದರೆ ಸ್ವಯಂಚಾಲಿತವಾಗಿ ಹರಾಜಿನಲ್ಲಿ ಸೇರಿಕೊಳ್ಳಲಿದ್ದಾರೆ. ಹರಾಜಿನಲ್ಲಿ ಸೇರಿಸಲು ಬಯಸುವ ಆಟಗಾರರ ಪಟ್ಟಿಯೊಂದಿಗೆ ಪ್ರತಿಕ್ರಿಯಿಸಲು ಫ್ರಾಂಚೈಸಿಗಳಿಗೆ ಸೂಚನೆ ನೀಡಲಾಗಿದೆ. ಕೇವಲ 77 ಸ್ಲಾಟ್​ಗಳನ್ನು ಮಾತ್ರ ಭರ್ತಿ ಮಾಡಬೇಕಾಗಿದೆ, ಅದರಲ್ಲಿ ಗರಿಷ್ಠ 30 ವಿದೇಶಿ ಆಟಗಾರರು ಇರಬಹುದು. ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ.

Exit mobile version