Site icon Vistara News

IPL 2024: ಹೆಡ್​,ರಚಿನ್​ಗೆ 20 ಕೋಟಿ ರೂ. ನೀಡಿ ಖರೀದಿಸಲು ಮುಂದಾದ ಫ್ರಾಂಚೈಸಿ!

Travis Head

ಮುಂಬಯಿ: ಮುಂದಿನ ವರ್ಷ ನಡೆಯುವ ಐಪಿಎಲ್​ ಟೂರ್ನಿಯ(IPL 2024) ಆಟಗಾರರ ಹರಾಜು ಡಿ.19ರಂದು(ipl 2024 auction) ನಡೆಯಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಿದೆ. ಜತೆಗೆ ಟ್ರೇಡಿಂಗ್​ ವಿಂಡೋ ನಿಯಮದ ಪ್ರಕಾರ ಕೆಲ ಆಟಗಾರರನ್ನು ಖರೀದಿ ಕೂಡ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ, 2024 ಐಪಿಎಲ್​ ಹರಾಜು ಪ್ರಕ್ರಿಯೆಗಾಗಿ 590 ಪ್ಲೇಯರ್ಸ್​​ಗಳನ್ನು ಶಾರ್ಟ್​ ಲೀಸ್ಟ್​ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಾರಿಯ ವಿಶ್ವಕಪ್​ ಫೈನಲ್​ನಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ ಆಸ್ಟ್ರೇಲಿಯಾದ ಟ್ರಾವಿಸ್​ ಹೆಡ್​ ಮತ್ತು ನ್ಯೂಜಿಲ್ಯಾಂಡ್​ ತಂಡದ ಯುವ ಆಟಗಾರ ರಚಿನ್​ ರವೀಂದ್ರ ಅವರ ಖರೀದಿಗೆ ಕೆಲ ಫ್ರಾಂಚೈಸಿಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಲಿದೆ ಎಂದು ಐಪಿಎಲ್​ ಮೂಲಗಳು ತಿಳಿಸಿವೆ.

20 ಕೋಟಿ ರೂ. ನೀಡಲು ಸಿದ್ಧ!

ಭಾರತದ ವಿಶ್ವಕಪ್​ ಟ್ರೋಫಿ ಕನಸನ್ನು ಭಗ್ನ ಗೊಳಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಐಪಿಎಲ್ 2024 ಆಕ್ಷನ್​ನಲ್ಲಿ 20 ಕೋಟಿ ರೂ. ನೀಡಿ ಖರೀದಿಸಲು ಕೆಲವು ಫ್ರಾಂಚೈಸಿ ಮುಂದೆ ಬರಲಿದೆ ಎಂದು ವರದಿಯಾಗಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡಿರುವ ಹೆಡ್​ ಅವರು ಈ ಬಾರಿ ಅತ್ಯಧಿಕ ಮೊತ್ತಕ್ಕೆ ಸೇಲ್​ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ಮೂಲಗಳ ಪ್ರಕಾರ ಆರ್​ಸಿಬಿ ತಂಡವೇ ಅವರನ್ನು ಮತ್ತೆ ತಂಡಕ್ಕೆ ಖರೀದಇ ಮಾಡುವ ಎಲ್ಲ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ದಾಖಲೆ ಸ್ಯಾಮ್​ ಕರನ್​ ಹೆಸರಿನಲ್ಲಿದೆ

ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಹೆಗ್ಗಳಿಕೆ ಇಂಗ್ಲೆಂಡ್​ ತಂಡದ ಆಲ್​ರೌಂಡರ್​ ಸ್ಯಾಮ್​ ಕರನ್​ ಹಸರಿನಲ್ಲಿದೆ. 16ನೇ ಆವೃತ್ತಿಯಲ್ಲಿ ಅವರನ್ನು ಪಂಜಾಬ್​ ಕಿಂಗ್ಸ್​ ತಂಡ 18.50 ಕೋಟಿ ರೂ.ಗೆ ಖರೀದಿಸಿತ್ತು. ಒಂದೊಮ್ಮೆ ಟ್ರಾವಿಸ್​ ಹೆಡ್​ ಅವರು ಈ ಬಾರಿಯ ಹರಾಜಿನಲ್ಲಿ 20 ಕೋಟಿ.ರೂಗೆ ಸೇಲ್​ ಆದರೆ ಕರನ್ ದಾಖಲೆ ಮುರಿಯಲಿದ್ದಾರೆ.

ಇದನ್ನೂ ಓದಿ IPL 2024 : ಐಪಿಎಲ್​ ಹರಾಜಿನ ದಿನಾಂಕ, ಸ್ಥಳದ ಬಗ್ಗೆ ಖಚಿತ ಮಾಹಿತಿ ನೀಡಿದ ಬಿಸಿಸಿಐ

ರವೀನ್ ರವಿಂದ್ರಗೂ ಜಾಕ್ ​ಪಾಟ್ ಸಾಧ್ಯತೆ?

ಹಾಲಿ ಚಾಂಪಿಯನ್​ ಸಿಎಸ್‌ಕೆ ತಂಡದಿಂದ ಬೆನ್ ಸ್ಟೋಕ್ಸ್​ ಅವರನ್ನು ಬಿಡುಗಡೆ ಮಾಡಿದ ಹಿನ್ನಲೆ ಅವರ ಬದಲು ರವೀನ್ ರವಿಂದ್ರ​ ಅವರನ್ನು ತಂಡಕ್ಕ ಸೆರಿಸಿಕೊಳ್ಳಲು ಫ್ರಾಂಚೈಸಿ ಒಲವು ತೋರಿದೆ ಎನ್ನಲಾಗಿದೆ. ಇವರು ಮಾತ್ರವಲ್ಲದೆ ಅಫಘಾನಿಸ್ತಾನದ ಅಜ್ಮತುಲ್ಲ ಒಮರ್‌ಜಾಯ್‌ ಅವರನ್ನು ಕೂಡ ಖರೀದಿಸುವ ಸಾಧ್ಯತೆಗಳಿವೆ.

ಆರ್​ಸಿಬಿ ಬಗ್ಗೆ ಒಲವು

ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕೂಡ ರಚಿನ್​ ಅವರನ್ನು ಖರಿದೀಸುವ ರೇಸ್​ನಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ವಿಶ್ವಕಪ್​ ಆಡುವ ವೇಳೆ ಸ್ವತಃ ರಚಿನ್​ ಅವರು ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ಆಸೆ ಇದೆ ಎಂದು ಹೇಳಿದ್ದರು. ರಚಿನ್​ ಅವರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದು ಡಿ.10ಕ್ಕೆ ನಿರ್ಧಾರವಾಗಲಿದೆ.

Exit mobile version