Site icon Vistara News

IPL 2024: ಸನ್​ರೈಸರ್ಸ್ ತಂಡದ ದಾಖಲೆಗಳ ಸುರಿಮಳೆಯ ಪಟ್ಟಿ ಹೀಗಿದೆ

IPL 2024

ನವದೆಹಲಿ: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಗರಿಷ್ಠ ಮೊತ್ತವನ್ನು ಬಾರಿಸುವ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಸನ್​ರೈಸರ್ಸ್ ಹೈದರಾಬಾದ್​(Sunrisers Hyderabad) ತಂಡ ಶನಿವಾರದ ಡೆಲ್ಲಿ(Delhi Capitals) ವಿರುದ್ಧದ ಪಂದ್ಯದಲ್ಲಿಯೂ 250ರ ಗಡಿ ದಾಡಿ ಹಲವು ದಾಖಲೆಯನ್ನು ನಿರ್ಮಿಸಿದೆ. ಹೈದರಾಬಾದ್​ ಬರೆದ ದಾಖಲೆಗಳ ಪಟ್ಟಿ ಇಂತಿದೆ.

​ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು


22 ಸಿಕ್ಸರ್​, ಡೆಲ್ಲಿ ಕ್ಯಾಪಿಲ್ಸ್​ ವಿರುದ್ಧ (2024)

22 ಸಿಕ್ಸರ್​, ಆರ್​ಸಿಬಿ ವಿರುದ್ಧ(2024)

ಫ್ರಾಂಚೈಸಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 250+ ರನ್​


ಸನ್​ರೈಸರ್ಸ್ ಹೈದರಾಬಾದ್​- 3 ಬಾರಿ

ಸರ್ರೆ-3 ಬಾರಿ

ಆರ್​ಸಿಬಿ-2 ಬಾರಿ

ಸೋಮರ್‌ಸೆಟ್-2 ಬಾರಿ

ಯಾರ್ಕ್​ಶೈರ್-2 ಬಾರಿ

ಇದನ್ನೂ ಓದಿ IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

ಐಪಿಎಲ್​ನಲ್ಲಿ 10 ಓವರ್​ಗೆ ಅತಿ ಹೆಚ್ಚು ರನ್​ ಬಾರಿಸಿದ ತಂಡಗಳು


ಸನ್​ರೈಸರ್ಸ್​ ಹೈದರಾಬಾದ್​ 158/4. ಡೆಲ್ಲಿ ವಿರುದ್ಧ(2024)

ಸನ್​ರೈಸರ್ಸ್​ ಹೈದರಾಬಾದ್ 148/2. ಮುಂಬೈ ಇಂಡಿಯ್ಸ್​ ವಿರುದ್ಧ(2024)

ಮುಂಬೈ ಇಂಡಿಯನ್ಸ್​ 141/2. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ(2024)

ಕೆಕೆಆರ್​ 135/1. ಡೆಲ್ಲಿ ವಿರುದ್ಧ (2024)

ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ತಂಡ


ಹೈದರಾಬಾದ್​- 125/0. ಡೆಲ್ಲಿ ವಿರುದ್ಧ(2024)

ಕೆಕೆಆರ್​-105/0. ಆರ್​ಸಿಬಿ ವಿರುದ್ಧ(2017)

ಚೆನ್ನೈ-100/2. ಪಂಜಾಬ್​ ವಿರುದ್ಧ(2014)

ಚೆನ್ನೈ-90/0. ಮುಂಬೈ ವಿರುದ್ಧ(2015)

ಕೆಕೆಆರ್​-88/1. ಡೆಲ್ಲಿ ವಿರುದ್ಧ(2024)

ಎಡಗೈ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್​(Travis Head) ಮತ್ತು ಅಭಿಷೇಕ್​ ಶರ್ಮ(Abhishek Sharma) ಅವರ ವಿಸ್ಫೋಟಕ ಬ್ಯಾಟಿಂಗ್​ ಹೈದರಾಬಾದ್​ ತಂಡದ ಪ್ರಮುಖ ಹೈಲೆಟ್ಸ್​ ಆಗಿತ್ತು. ಅಭಿಷೇಕ್​ ಶರ್ಮ ಕೇವಲ 12 ಎಸೆತಗಳಲ್ಲಿ 6 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 46 ರನ್​ ಗಳಿಸಿ ಕುಲ್​ದೀಪ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರು. ಅಭಿಷೇಕ್​ ಮತ್ತು ಹೆಡ್​ ಸೇರಿಕೊಂಡು ಮೊದಲ ವಿಕೆಟ್​ಗೆ 131 ರನ್​ ಜತೆಯಾಟ ನಡೆಸಿದರು. 16 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಟ್ರಾವಿಸ್​ ಹೆಡ್​ 11 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ 89 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 32 ಎಸೆತ.

Exit mobile version