Site icon Vistara News

IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

IPL 2024

ಬೆಂಗಳೂರು: ಯುದ್ದ ಮುಗಿದ ಬಳಿಕ ಕೋಟೆಯ ಬಾಗಿಲು ಮುಚ್ಚಿದಂತಾಗಿದೆ ಆರ್​ಸಿಬಿಯ(Royal Challengers Bengaluru) ಸದ್ಯದ ಸ್ಥಿತಿ. ಹೌದು, ಆರಂಭಿಕ ಹಂತದಲ್ಲಿ ಸತತವಾಗಿ ಸೋಲು ಕಂಡು ಪ್ಲೇ ಆಫ್​ನ ಕ್ಷೀಣ ಅವಕಾಶ ಇರುವಾಗ ಇದೀಗ ಸತತವಾಗಿ ಗೆಲುವು ಸಾಧಿಸುತ್ತಿದೆ. ಇದುವರೆಗೂ ಕೊನೆಯ(IPL 2024) ಸ್ಥಾನಿಯಾಗಿದ್ದ ಆರ್​ಸಿಬಿ ಹ್ಯಾಟ್ರಿಕ್​ ಗೆಲುವಿನೊಂದಿಗೆ ಇದೀಗ 7ನೇ ಸ್ಥಾನಕ್ಕೇರಿದೆ. ಸದ್ಯಕ್ಕೆ ಆರ್​ಸಿಬಿಯ ಪ್ಲೇ ಆಫ್​ ಬಾಗಿಲು ಇನ್ನೂ ಮುಚ್ಚಿಲ್ಲ. ಇನ್ನೂ ಕೂಡ ಆರ್​ಸಿಬಿಗೆ ಅವಕಾಶವಿದೆ. ತಂಡದ ಪ್ಲೇ ಆಫ್​ ಲೆಕ್ಕಾಚಾರ(RCB Playoffs calculation) ಹೇಗಿದೆ ಎಂಬ ಮಾಹಿತಿ ಇಂತಿದೆ.

ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ಮತ್ತು ಪವಾಡವೊಂದು ನಡೆದರೆ ಆರ್​ಸಿಬಿಗೆ ಪ್ಲೇ ಆಫ್​ ಟಿಕೆಟ್ ಖಚಿತವಾಗಿ​ ಸಿಗಲಿದೆ. ಈಗಾಗಲೇ 11 ಪಂದ್ಯ ಆಡಿದ್ದು, 4 ಪಂದ್ಯ ಗೆದ್ದು, 7 ಪಂದ್ಯದಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 8 ಅಂಕ ಸಂಪಾದಿಸಿ 7ನೇ ಸ್ಥಾನದಲ್ಲಿದೆ. ಆರ್​ಸಿಬಿಗೆ ಇನ್ನು ಮೂರು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಉಳಿದಿರುವ ಈ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ 14 ಅಂಕ ಲಭಿಸಲಿದೆ. ಆದರೂ ಕೂಡ ಪ್ಲೇ ಆಫ್ ಟಿಕೆಟ್​ ಖಚಿತಗೊಳ್ಳುವುದಿಲ್ಲ. ಇದು ಖಚಿತಗೊಳ್ಳಬೇಕಿದ್ದರೆ, ಆರ್​ಸಿಬಿಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಕನಿಷ್ಠ 4ನೇ ಸ್ಥಾನಿಯಾಗಿ ಪ್ಲೇ ಆಫ್ ಗೇರುವ ಸಣ್ಣ ಅವಕಾಶವೊಂದಿದೆ. ಉಳಿದ 3 ಪಂದ್ಯಗಳ ಪೈಕಿ 1 ಪಂದ್ಯವನ್ನು ಆರ್​ಸಿಬಿ ತವರಿನಲ್ಲಿ ಆಡಲಿದೆ. ಇದು ಹಾಲಿ ಚಾಂಪಿಯನ್​ ಚೆನ್ನೈ ವಿರುದ್ಧ.

16 ಅಂಕ ಗಳಿಸಿರುವ ರಾಜಸ್ಥಾನ್​ ತಂಡಕ್ಕೆ ಪ್ಲೇ ಆಫ್​ ಸ್ಥಾನ ಬಹುತೇಕ ಖಚಿತಗೊಂಡಂತಿದೆ. ಅದಲ್ಲದೆ ರಾಜಸ್ಥಾನ್​ಗೆ ಇನ್ನೂ ಕೂಡ 4 ಪಂದ್ಯಗಳು ಬಾಕಿ ಇದೆ. ಇದರಲ್ಲಿ 1 ಪಂದ್ಯ ಗೆದ್ದರೂ ಸಾಕು. ಉಳಿದಿರುವ ಮೂರು ಸ್ಥಾನಗಳಿಗೆ 5 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಕೆಕೆಆರ್​ 14 ಅಂಕ ಪಡೆದು 2ನೇ ಸ್ಥಾನಿಯಾಗಿದೆ. ಕೆಕೆಆರ್​ಗೂ ಇನ್ನು 4 ಪಂದ್ಯ ಬಾಕಿ ಉಳಿದಿವೆ. ಲಕ್ನೋ 12 ಅಂಕದೊಂದಿಗೆ ಮೂರನೇ ಸ್ಥಾನಿಯಾಗಿದೆ. ಇಂದು ನಡೆಯುವ ಪಂದ್ಯದಲ್ಲಿ ಕೆಕೆಆರ್​ ಮತ್ತು ಲಕ್ನೋ ಮುಖಾಮುಖಿಯಾಗಲಿವೆ. ಇಲ್ಲಿ ಒಂದು ತಂಡಕ್ಕೆ ಸೋಲು ಖಚಿತ. ಲಕ್ನೋ ಗೆದ್ದರೆ ಆರ್​ಸಿಬಿಗೆ ನಷ್ಟವಾಗಲಿದೆ. ಇನ್ನೊಂದು ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್​ ಆಡಲಿವೆ. ಇಲ್ಲಿ ಚೆನ್ನೈ ಗೆದ್ದರೆ 12 ಅಂಕ ಆಗಲಿವೆ. ಹೈದರಾಬಾದ್​ 12 ಅಂಕದೊಂದಿಗೆ ಸದ್ಯ ಮೂರನೇ ಸ್ಥಾನಿಯಾಗಿದೆ. ಹೀಗಾಗಿ ಈ ಎಲ್ಲ 5 ತಂಡಗಳ ಪೈಕಿ ಕನಿಷ್ಠ ಮೂರು ತಂಡಗಳು ಉಳಿದ ಲೀಗ್​ ಪಂದ್ಯಗಳಲ್ಲಿ ಸೋಲು ಕಂಡರೆ, 14 ಅಂಕದ ಗಡಿ ದಾಟಲು ವಿಫಲರಾದರೆ ಆಗ ಆರ್​ಸಿಬಿಗೆ ಪ್ಲೇ ಆಫ್​ ಅವಕಾಶ ಸಿಗಲಿದೆ. ಒಟ್ಟಾರೆ ಆರ್​ಸಿಬಿಗೆ ಗೆಲುವಿನ ಜತೆಗೆ ಅದೃಷ್ಟ ಕೂಡ ಕೈ ಹಿಡಿಯಬೇಕಿದೆ.

ಇದನ್ನೂ ಓದಿ IPL 2024 Points Table: 7ನೇ ಸ್ಥಾನಕ್ಕೇರಿದ ಆರ್​ಸಿಬಿ; ಮುಂಬೈಗೆ ಕೊನೆಯ ಸ್ಥಾನ

ಆರ್​ಸಿಬಿ ಮುಂದಿನ ಪಂದ್ಯವನ್ನು ಮೇ 9ರಂದು ಪಂಜಾಬ್​ ಕಿಂಗ್ಸ್​ ವಿರುದ್ಧ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಸೋತರೆ ಆರ್​ಸಿಬಿ ಪ್ಲೇ ಆಫ್​ನಿಂದ ಅಧಿಕೃತವಾಗಿ ಹೊರಬೀಳಲಿದೆ. ಜತೆಗೆ ಆ ಬಳಿಕದ 2 ಪಂದ್ಯಗಳು ಕೇವಲ ಔಪಚಾರಿಕ ಪಂದ್ಯವಾಗಲಿದೆ.

Exit mobile version