ಹೈದರಾಬಾದ್: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ನಾಳೆ ನಡೆಯುವ ಐಪಿಎಲ್ನ(IPL 2024) 18ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ ಆಡಲಿದೆ. ಈ ಪಂದ್ಯ ಹೈದರಾಬಾದ್ನಲ್ಲಿ ನಡೆಯಲಿದ್ದು ಪಂದ್ಯಕ್ಕೂ ಮುನ್ನ ಚೆನ್ನೈ ಆಟಗಾರರು ಫೇಮಸ್ ಹೈದರಾಬಾದ್ ಬಿರಿಯಾನಿ(Hyderabadi biryani) ಸವಿದಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಬಿರಿಯಾನಿ… ಸೂಪರ್ ಕುಟುಂಬಮ್!.. ಭಾವನೆಗಳು ಭೇಟಿಯಾದಾಗ ಎಂದು ಈ ವಿಡಿಯೊಗೆ ಕ್ಯಾಪ್ಷನ್ ನೀಡಿದೆ.
Biryani 🤝 Super Kudumbam! 😋
— Chennai Super Kings (@ChennaiIPL) April 4, 2024
When Emotions Meet! 💛#WhistlePodu #Yellove 🦁💛 pic.twitter.com/4Naqszcmt7
ಚೆನ್ನೈ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಅವರು ಈ ಔತಣ ಕೂಟವನ್ನು ಏರ್ಪಡಿಸಿದ್ದರು. ಹೈದರಾಬಾದ್ ಮೂಲದವರಾದ ರಾಯುಡು ಅವರು ಕಳೆದ ಆವೃತ್ತಿಯ ಟೂರ್ನಿಯಲ್ಲಿ ಐಪಿಎಲ್ ನಿವೃತ್ತಿ ಘೋಷಿಸಿದ್ದರು. ಚೆನ್ನೈ ತಂಡ ಕಪ್ ಗೆದ್ದಾಗ ಧೋನಿ ಜತೆ ಜಂಟಿಯಾಗಿ ಕಪ್ ಸ್ವೀಕರಿಸಿದ್ದರು. ಚೆನ್ನೈ ತಂಡ ಆಡಿದ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆದ್ದು ಸದ್ಯ ಅಂಕಪಟ್ಟಿಯಲ್ಲಿ 4 ಅಂಕದೊಂದಿಗೆ ಮೂರನೇ ಸ್ಥಾನಿಯಾಗಿದೆ.
ಚೆನ್ನೈ ತಂಡ ಕಳೆದ ಪಂದ್ಯದಲ್ಲಿ ಸೋಲು ಕಂಡಿತ್ತು ಎಂದ ಮಾತ್ರಕ್ಕೆ ಈ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ತಂಡದಲ್ಲಿ ಬಲಿಷ್ಠ ಆಟಗಾರರ ಪಡೆಯೇ ಇದೆ. ಇವರೆಲ್ಲ ಯಾವುದೇ ಹಂತದಲ್ಲಿ ಸಿಡಿದು ನಿಲ್ಲಬಲ್ಲರು. ಪ್ರಸಕ್ತ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದಿರುವ ಬಾಂಗ್ಲಾದೇಶದ ಆಟಗಾರ ಮುಸ್ತಫಿಜುರ್ ರೆಹಮಾನ್ ಅವರು ಟಿ20 ವಿಶ್ವಕಪ್ ಆಡಲು ವೀಸಾ ಸಂಬಂಧಿತ ತುರ್ತು ಕೆಲಸಕ್ಕಾಗಿ ತವರಿಗೆ ಮರಳಿದ್ದಾರೆ. ಹೀಗಾಗಿ ಅವರು ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇದು ಚೆನ್ನೈಗೆ ಕೊಂಚ ಮಟ್ಟಿನ ಹಿನ್ನಡೆಯಾಗಿ ಪರಿಣಮಿಸಬಹುದು.
ಇದನ್ನೂ ಓದಿ IPL 2024: ಸಚಿನ್ ಐಪಿಎಲ್ ದಾಖಲೆ ಮುರಿದ ಆ್ಯಂಡ್ರೆ ರೆಸೆಲ್
ಧೋನಿಗೆ ವಿದಾಯದ ಟೂರ್ನಿ
ಎಂ.ಎಸ್.ಧೋನಿ, ಕ್ಯಾಪ್ಟನ್ ಕೂಲ್, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಧೋನಿ(MS Dhoni) ಕೂಡ ತಮ್ಮ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿ ತೋರುತ್ತಾರೆ. ಅಭಿಮಾನಿಗಳ ಒತ್ತಾಸೆಯಕ್ಕೆ ಮಣಿದು ತಮ್ಮ ಐಪಿಎಲ್ ನಿವೃತ್ತಿಯನ್ನು ಕೂಡ ಮುಂದೂಡಿದ್ದರು. ಈ ಬಾರಿ ನಿವೃತ್ತಿಯಾಗಲಿದ್ದಾರೆ.
THE CRAZE FOR MS DHONI. 🤯🔥pic.twitter.com/68FMCYDWSR
— Johns. (@CricCrazyJohns) April 3, 2024
ಕಳೆದ ಬಾರಿಯ ಐಪಿಎಲ್ ಟೂರ್ನಿಯುದ್ದಕ್ಕೂ ಧೋನಿ ಕಾಲಿನ ಗಾಯಕ್ಕೆ ತುತ್ತಾಗಿದ್ದರೂ ಆಡಿದ್ದರು. ನೋವು ನಿವಾರಕ ಪ್ಲಾಸರ್ಗಳನ್ನು ಧರಿಸಿ ಆಡಿದ್ದರು. ಟೂರ್ನಿ ಮುಗಿದ ಬಳಿಕ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ತಮ್ಮ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಬಾರಿಯ ಟೂರ್ನಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್ ನಡೆಸಿದ್ದಾರೆ. ಕಳೆದ ಪಂದ್ಯದಲ್ಲಿ ಕಾಲು ನೋವಿನಿಂದ ಬಳಳುತ್ತಿರುವುದು ಕೂಡ ಕಂಡುಬಂದಿತ್ತು.