Site icon Vistara News

IPL 2024: ಇನ್ನು ಮುಂದೆ ಐಪಿಎಲ್​ ಪಂದ್ಯದ ದಿನ ಮೈದಾನದ ಫೋಟೋ ಹಂಚಿಕೊಳ್ಳುವಂತಿಲ್ಲ; ಕಾರಣವೇನು?

IPL 2024

ಮುಂಬೈ: 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಈಗಾಗಲೇ 31 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಇಂದು ನಡೆಯುವ 32ನೇ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಇದರ ಮಧ್ಯೆ ಪ್ರಸಾರ ಹಕ್ಕುಗಳ ಉಲ್ಲಂಘನೆಯಾಗದಿರಲಿ ಎನ್ನುವ ಕಾರಣಕ್ಕೆ ಐಪಿಎಲ್‌ ಪಂದ್ಯಗಳು ನಡೆಯುವ ದಿನ ಮೈದಾನದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಬಿಸಿಸಿಐ(BCCI) ಫ್ರಾಂಚೈಸಿಗಳಿಗೆ ಖಡಕ್​ ಸೂಚನೆ ನೀಡಿದೆ ಎನ್ನಲಾಗಿದೆ.

ಬಿಸಿಸಿಐ ಸೂಚನೆ ಪ್ರಾಕಾರ, ಇನ್ನು ಮುಂದೆ ಐಪಿಎಲ್‌ನ ವೀಕ್ಷಕ ವಿವರಣೆಗಾರರು, ಆಟಗಾರರು, ಕಂಟೆಂಟ್‌ ತಂಡ ಮತ್ತು ಫ್ರಾಂಚೈಸಿಗಳು ಐಪಿಎಲ್‌ ಪಂದ್ಯಗಳು ನಡೆಯುವ ದಿನ ಮೈದಾನದ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವಂತಿಲ್ಲ. ಈ ರೀತಿ ಹಂಚಿಕೊಂಡರೆ ಐಪಿಎಲ್‌ ಪ್ರಸಾರಕರಿಗೆ ಭಾರೀ ನಷ್ಟ ಸಂಭವಿಸಲಿದೆ ಎಂದು ತಿಳಿದುಬಂದಿದೆ.

ಐಪಿಎಲ್‌ ಪ್ರಸಾರಕ ಸಂಸ್ಥೆಗಳು ಕೋಟ್ಯಂತರು ರೂ. ಹಣವನ್ನು ಪಾವತಿಸಿ ಮೈದಾನದ ವಿಡಿಯೋ ಫೋಟೋಗಳ ಮೇಲೆ ಸಂಪೂರ್ಣ ಹಕ್ಕು ಹೊಂದಿರುತ್ತವೆ. ಉಳಿದವರು ಇವುಗಳನ್ನು ಹಂಚಿಕೊಳ್ಳುವುದರಿಂದ ಪ್ರಸಾರ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಬಿಸಿಸಿಐ ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ IPL 2024: ಕೆಕೆಆರ್ ನಾಯಕ ಶ್ರೇಯಸ್​ ಅಯ್ಯರ್​ಗೆ ಬಿತ್ತು 12 ಲಕ್ಷ ದಂಡದ ಬರೆ

ಪ್ಲೇ ಆಫ್​ ಸನಿಹಕ್ಕೆ ರಾಜಸ್ಥಾನ್​; ಅಂಕಪಟ್ಟಿ ಹೇಗಿದೆ?


ಕೋಲ್ಕತ್ತಾ: ಮಂಗಳವಾರ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​(Rajasthan Royals) ತಂಡ ಜೋಸ್​ ಬಟ್ಲರ್(Jos Buttler)​ ಅವರ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನದ ಬಲದಿಂದ ಎದುರಾಳಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಮಗುಚಿ ಹಾಕುವಲ್ಲಿ ಯಶಸ್ಸು ಕಂಡಿದೆ. ಜತೆಗೆ ಅಂಕಪಟ್ಟಿಯಲ್ಲಿ(IPL 2024 Points Table) 12 ಅಂಕ ಸಂಪಾದಿಸಿ ಪ್ಲೇ ಆಫ್​ ಟಿಕೆಟ್​ ಬಹುತೇಕ ಖಚಿತ ಪಡಿಸಿಕೊಂಡಿದೆ. ಇನ್ನಡೆರಡು ಪಂದ್ಯಗಳು ಗೆದ್ದರೆ ಇದು ಅಧಿಕೃತಗೊಳ್ಳಲಿದೆ. ಕೆಕೆಆರ್​ ಮತ್ತು ರಾಜಸ್ಥಾನ್​ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಅಂಕಪಟ್ಟಿ ಮುಂದುವರಿದಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​76112 (+0.677)
ಕೆಕೆಆರ್​​6428 (+1.399)
ಚೆನ್ನೈ ಸೂಪರ್​ ಕಿಂಗ್ಸ್​​6428 (+0.726)
ಹೈದರಾಬಾದ್​​6428(+0.502)
ಲಕ್ನೋ6336 (+0.038)
ಗುಜರಾತ್​6336 (-0.637)
ಪಂಜಾಬ್​​​​6244 (-0.218)
ಮುಂಬಯಿ6244 (-0.234)
ಡೆಲ್ಲಿ ಕ್ಯಾಪಿಟಲ್ಸ್​6244 (-0.975)
ಆರ್​ಸಿಬಿ7162 (-1.185)
Exit mobile version