ಮುಂಬಯಿ: ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರುವ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಾರಿಯ ಐಪಿಎಲ್(IPL 2024) ಫೈನಲ್(IPL 2024 final) ಪಂದ್ಯ ನಡೆಯುವುದಿಲ್ಲ ಎಂದು ವರದಿಯಾಗಿದೆ. ಬಿಸಿಸಿಐ(BCCI) ಮೂಲಗಳ ಪ್ರಕಾರ ಇಲ್ಲಿ ಒಂದು ಕ್ವಾಲಿಫೈಯರ್ ಮತ್ತು ಒಂದು ಎಲಿಮಿನೇಟರ್ ಪಂದ್ಯ ಮಾತ್ರ ನಡೆಯಲಿದೆ ಎನ್ನಲಾಗಿದೆ. ಫೈನಲ್ ಚೆನ್ನೈಯ ಚೆಪಾಕ್ ಸ್ಟೇಡಿಯಂನಲ್ಲಿ(Chepauk will also host the IPL 2024 final) ನಡೆಯಲಿದೆ ಎಂದು ವರದಿಯಾಗಿದೆ.
ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಫೈನಲ್ ಮತ್ತು ಒಂದು ಪ್ಲೇ ಆಫ್ ಪಂದ್ಯಗಳು ನಡೆಸುವ ಎಲ್ಲ ಯೋಜನೆಗಳನ್ನು ರೂಪಿಸಲಾಗಿದೆ. ಕಳೆದ ವರ್ಷದ ಚಾಂಪಿಯನ್ ತಂಡದ ತವರಿನಲ್ಲಿ ಉದ್ಘಾಟನ ಮತ್ತು ಫೈನಲ್ ಪಂದ್ಯ ನಡೆಸುವುದು ಐಪಿಎಲ್ ಗವರ್ನಿಂಗ್ ಕೌನ್ಸಿಲ್ನ ವಾಡಿಕೆ. ಹೀಗಾಗಿ ಈ ಬಾರಿಯ ಫೈನಲ್ ಚೆನ್ನೈನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಮೇ 26ರಂದು ಐಪಿಎಲ್ ಫೈನಲ್ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಕೆಲವೇ ದಿನಗಳಲ್ಲಿ ಬಿಸಿಸಿಐ ನೀಡಲಿದೆ.
Chepauk is set to host IPL 2024 Final.
— Vibhor (@dhotedhulwate) March 23, 2024
Hope it all goes as per plan and we qualify for the finals. pic.twitter.com/NLQUNTSmFS
ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ಬಿಸಿಸಿಐ ಮೊದಲ ಹಂತದ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ದ್ವಿತೀಯಾರ್ಧದ(BCCI Reworking IPL 2024 Schedule) ಪಂದ್ಯದ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ. ಏ. 7 ರಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಮೊದಲಾರ್ಧದ ಕೊನೆಯ ಪಂದ್ಯ ನಡೆಯಲಿದೆ.
ಇದನ್ನೂ ಓದಿ IPL 2024: ಕ್ರೀಡಾಂಗಣದಲ್ಲೇ ಸಿಗರೇಟ್ ಸೇದಿದ ಶಾರುಖ್ ಖಾನ್; ಛೀಮಾರಿ ಹಾಕಿದ ನೆಟ್ಟಿಗರು
ಭಾರತದಲ್ಲೇ ಪಂದ್ಯಾವಳಿ
ಚುನಾವಣ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಪಂದ್ಯಾವಳಿ ನಡೆಸುವು ಮತ್ತು ಭದ್ರತೆ ನೀಡುವುದು ಕಷ್ಟವಾಗಬಹುದು ಎಂಬ ಕಾರಣದಿಂದ, ದ್ವಿತೀಯಾರ್ಧದ ಪಂದ್ಯಗಳನ್ನು ಬಿಸಿಸಿಐ ದುಬೈಗೆ ಸ್ಥಳಾಂತರಿಸಲು ಮುಂದಾಗಿದೆ ಎಂದು ಕಳೆದ ವಾರ ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿತ್ತು. ಆದರೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್(Arun Dhumal) ಪಂದ್ಯ ವಿದೇಶದಲ್ಲಿ ನಡೆಸುವ ಮಾತೇ ಇಲ್ಲ ಎಂದು ಬಲವಾದ ಹೇಳಿಕೆ ನೀಡಿದ್ದರು.
CHEPAUK TO HOST THE FINAL OF IPL 2024 #MSDhonipic.twitter.com/XBGm8zEQ5F
— Nicky (@iemnic) March 24, 2024
“ಲೀಗ್ ಅನ್ನು ದೇಶದಿಂದ ಸ್ಥಳಾಂತರಿಸುವ ಯಾವುದೇ ಆಲೋಚನೆ ಇಲ್ಲ, ಮತ್ತು ಇಡೀ ಲೀಗ್ ಅನ್ನು ಭಾರತದಲ್ಲಿ ಮಾತ್ರ ಆಡಲಾಗುವುದು. ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಪ್ರೋಟೋಕಾಲ್‌ಗಳು ಮತ್ತು ಸಲಹೆಗಳನ್ನು ಅನುಸರಿಸಿ ಬಿಸಿಸಿಐ ಭದ್ರತಾ ಏಜೆನ್ಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಉಳಿದ ಪಂದ್ಯಾವಳಿಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ”ಎಂದು ಧುಮಾಲ್ ಕಳೆದ ವಾರ ಹೇಳಿದ್ದರು. ಧುಮಾಲ್ ಹೇಳಿಕೆ ನೋಡುವಾಗ ಚುನಾವಣೆ ನಡೆಯುವ ದಿನ ಪಂದ್ಯವನ್ನು ನಡೆಸದೆ ಉಳಿದ ದಿನಗಳಲ್ಲಿ ಪಂದ್ಯವನ್ನು ನಡೆಯುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಂತೆ ಕಾಣುತ್ತಿದೆ. ಆದರೆ ಚುನಾವಣ ಸಮಿತಿಯಿಂದ ಅನುಮತಿ ಕಡ್ಡಾಯ.