Site icon Vistara News

IPL 2024: ಶಮಿಗೆ ಬಿಗ್ ಆಫರ್​ ನೀಡಿದ ಐಪಿಎಲ್​ ಫ್ರಾಂಚೈಸಿ; ಶಮಿ ನಿರ್ಧಾರವೇನು?

mohammed shami ipl

ಅಹಮದಾಬಾದ್​: ಮೊನಚಾದ ಬೌಲಿಂಗ್‌ ಮೂಲಕ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿ ದೇಶದ ಶತಕೋಟಿ ಜನರ ಮನಗೆದ್ದ, ಟೀಮ್​ ಇಂಡಿಯಾ ವೇಗಿ ಮೊಹಮ್ಮದ್ ಶಮಿ(Mohammed Shami) ಅವರನ್ನು ಟ್ರೇಡಿಂಗ್​ ಮೂಲಕ ಖರೀದಿ ಮಾಡಲು ಐಪಿಎಲ್(IPL 2024)​ ಫ್ರಾಂಚೈಸಿಯೊಂದು ಆಸಕ್ತಿ ತೋರಿದೆ ಎಂದು ಗುಜರಾತ್ ಟೈಟಾನ್ಸ್​ನ ಸಿಇಒ(Gujarat Titans CEO) ಮಾಹಿತಿ ನೀಡಿದ್ದಾರೆ.

ಈಗಾಗಲೇ ಎಲ್ಲ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ಮತ್ತು ಹರಾಜಿಗೆ ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಮಧ್ಯೆ ಕೆಲ ಫ್ರಾಂಚೈಸಿಗಳು ಡಿ.19ರಂದು ನಡೆಯುವ ಆಟಗಾರರ ಹರಾಜಿಗೂ ಮುನ್ನ ಟ್ರೆಡಿಂಗ್​ ಆಯ್ಕೆ ಮೂಲಕ ಕೆಲ ತಂಡದ ಸ್ಟಾರ್​ ಆಟಗಾರರನ್ನು ಖರೀದಿ ಮಾಡುತ್ತಿದೆ. ಈ ಮಧ್ಯೆ ಮೊಹಮ್ಮದ್​ ಶಮಿ ಅವರನ್ನು ಟ್ರೇಡ್​ ಮಾಡಲು ಫ್ರಾಂಚೈಸಿಯೊಂದು ಆಸಕ್ತಿ ತೋರಿದೆ ಎಂದು ಗುಜರಾತ್ ಟೈಟಾನ್ಸ್ ತಂಡದ ಸಿಇಒ ಕರ್ನಲ್ ಅರವಿಂದರ್ ಸಿಂಗ್ ಖಚಿತಪಡಿಸಿದ್ದಾರೆ. ಹೀಗಾಗಿ ಶಮಿ ಗುಜರಾತ್ ಬಿಟ್ಟು ಬೇರೆ ತಂಡ ಸೇರಿದರೂ ಅಚ್ಚರಿ ಪಡಬೇಕಿಲ್ಲ. 2 ಆವೃತ್ತಿಗಳ್ಲಲಿ ತಂಡದ ನಾಯಕನಾಗಿದ್ದ ಹಾರ್ದಿಕ್​ ಪಾಂಡ್ಯ ಅವರು ಮುಂಬೈ ಸೇರಿರುವಾಗ ಶಮಿ ಬೇರೆ ತಂಡ ಸೇರುವಲ್ಲಿ ಯಾವುದೇ ಅಚ್ಚರಿ ಇಲ್ಲ.

“ಮೊಹಮ್ಮದ್ ಶಮಿ ಅವರನ್ನು ಐಪಿಎಲ್ ಫ್ರಾಂಚೈಸಿಯೊಂದು ಸಂಪರ್ಕಿಸಿರುವುದು ನಿಜ. ಆದರೆ ಯಾವ ಫ್ರಾಂಚೈಸಿ ಎಂದು ಹೇಳಲು ಸಾಧ್ಯವಿಲ್ಲ” ಎಂದು ಕರ್ನಲ್ ಅರವಿಂದರ್ ಸಿಂಗ್ ಹೇಳಿದ್ದಾರೆ. ಶಮಿ ಅವರು 16ನೇ ಆವೃತ್ತಿಯ ಐಪಿಎಲ್​ನಲ್ಲಿ 17 ಪಂದ್ಯಗಳನ್ನು ಆಡಿ 28 ವಿಕೆಟ್ ಕಬಳಿಸಿದ್ದರು. ಜತೆಗೆ ತಂಡವನ್ನು ಫೈನಲ್​ ತಲುಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು.

ಇತ್ತೀಚೆಗೆ ಮುಕ್ತಾಯ ಕಂಡ ಏಕದಿನ ವಿಶ್ವಕಪ್​ನಲ್ಲಿ ಶಮಿ ಘಾತಕ ಬೌಲಿಂಗ್​ ಮೂಲಕ ಗಮನಸೆಳೆದಿದ್ದರು. 7 ಪಂದ್ಯಗಳನ್ನು ಆಡಿ ಒಟ್ಟು 24 ವಿಕೆಟ್ ಕಬಳಿಸಿ ಟೂರ್ನಿಯ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಅದರಲ್ಲೂ ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ 7 ವಿಕೆಟ್​ ಕಿತ್ತು ಮಿಂಚಿದ್ದರು. ಅವರ ಈ ಪ್ರದರ್ಶನ ಕಂಡ ಅನೇಕ ಫ್ರಾಂಚೈಸಿ ಅವರುನ್ನು ಟ್ರೇಡ್ ಮಾಡಲು ಆಸಕ್ತಿ ತೋರಿದಂತಿದೆ.

ಇದನ್ನೂ ಓದಿ Mohammed Shami: ಪಾದದ ನೋವನ್ನು ಮರೆಮಾಚಿ ದೇಶಕ್ಕಾಗಿ ವಿಶ್ವಕಪ್​ ಆಡಿದ ಶಮಿ

ಪಾದದ ನೋವನ್ನು ಮರೆತು ವಿಶ್ವಕಪ್​ ಆಡಿದ ಶಮಿ?

ಮೊಹಮ್ಮದ್​ ಶಮಿ(Mohammed Shami) ಅವರು ತಮ್ಮ ಪಾದದ ನೋವನ್ನು ಸಹಿಸಿಕೊಂಡು ದೇಶಕ್ಕಾಗಿ ಆಡಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಶಮಿ ಆಡುವುದು ಅನುಮಾನ ಎಂಬ ಸುದ್ದಿ ಕೇಳಿಬಂದ ವೇಳೆ ಈ ವಿಚಾರ ತಿಳಿದುಬಂದಿದೆ. ಆದರೆ ಶಮಿ ಅವರು ಯಾವುದೇ ಅಧಿಕೃತ ಮಾಗಿತಿ ನೀಡಿಲ್ಲ.

ಕೆಳ ದಿನಗಳ ಹಿಂದೆ ಅಪಘಾತದ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರ ಪ್ರಾಣವನ್ನು ಉಳಿಸುವ ಮೂಲಕ ಮೊಹಮ್ಮದ್‌ ಶಮಿ ಅವರು ಮಾನವೀಯತೆ ಮೆರೆದಿದ್ದರು. ಈ ಕುರಿತು ಮೊಹಮ್ಮದ್‌ ಶಮಿ ಅವರೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡುವ ಮೂಲಕ ಮಾಹಿತಿ ನೀಡಿದ್ದರು. “ಒಂದು ಜೀವ ಉಳಿಸಿದ ಖುಷಿ ನನ್ನದಾಯಿತು. ಈ ವ್ಯಕ್ತಿ ತುಂಬ ಅದೃಷ್ಟವಂತ. ಉತ್ತರಾಖಂಡದ ನೈನಿತಾಲ್‌ ಬಳಿ ಈಗಷ್ಟೇ ಕಾರೊಂದು ಬೆಟ್ಟದಿಂದ ಕೆಳಗೆ ಬಿತ್ತು. ಕಾರಿನಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಇದರಿಂದ ಕಾರಿನಲ್ಲಿದ್ದ ವ್ಯಕ್ತಿಗೆ ಮರು ಜನ್ಮ ಸಿಕ್ಕಂತಾಗಿದೆ” ಎಂದು ಪೋಸ್ಟ್‌ ಮಾಡಿದ್ದರು. ಇದಕ್ಕೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Exit mobile version