ಚೆನ್ನೈ: ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2024)ಗೆ ಕ್ಷಣಗಣನೆ ಶುರುವಾಗಿದೆ. 2024ರ ಟೂರ್ನಿಗೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ ವಿಧ್ಯುಕ್ತ ಚಾಲನೆ ಸಿಗಲಿದೆ. ಇದೀಗ 10 ತಂಡಗಳ ನಾಯಕರುಗಳು ಗುರುವಾರ ಟ್ರೋಫಿ ಜತೆಗೆ ಫೋಟೊಶೂಟ್(IPL 2024 captains pose) ಮಾಡಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಚೆನ್ನೈ ತಂಡಕ್ಕೆ ಋತುರಾಜ್ ಗಾಯಕ್ವಾಡ್(Ruturaj Gaikwad) ನೂತನ ನಾಯಕನಾಗಿರುವುದು.
𝐈𝐭'𝐬 𝐒𝐡𝐨𝐰𝐓𝐢𝐦𝐞!
— IndianPremierLeague (@IPL) March 21, 2024
The #TATAIPL is here and WE are ready to ROCK & ROLL 🎉🥳🥁
Presenting the 9 captains with PBKS being represented by vice-captain Jitesh Sharma. pic.twitter.com/v3fyo95cWI
ಇದುವರೆಗೂ ಎಲ್ಲಿಯೂ ನಾಯಕತ್ವದ ಸುಳಿವು ಬಿಟ್ಟುಕೊಡದ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಅನಾವರಣ ಕಾರ್ಯಕ್ರಮದ ಫೋಟೊಶೂಟ್ ವೇಳೆ ಇದನ್ನು ರಿವಿಲ್ ಮಾಡಿತು. 5 ಬಾರಿ ತಂಡವನ್ನು ಚಾಂಪಿಯನ್ ಮಾಡಿದ್ದ ಧೋನಿ ಅವರು ನಾಯಕತ್ವಕ್ಕೆ ರಾಜಿನಾಮೆ ನೀಡಿದರು. ಈ ಹಿಂದೆಯೂ ಧೋನಿ ನಾಯಕತ್ವದಿಂದ ಕೆಳಗಿಳಿದು ರವೀಂದ್ರ ಜಡೇಜಾಗೆ ನಾಯಕತ್ವ ನೀಡಿದ್ದರು. ಆದರೆ ತಂಡ ಹಿಂದೆಂದು ಕಾಣಣ ಘೋರ ವೈಫಲ್ಯ ಕಂಡಿತ್ತು. ಹೀಗಾಗಿ ಅರ್ಧದಲ್ಲೇ ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡಿದ್ದರು. ಈ ಬಾರಿ ವಿದಾಯದ ಟೂರ್ನಿಯನ್ನಾಡುವ ಧೋನಿ ತಂಡದ ಭವಿಷ್ಯದ ನಿಟ್ಟಿನಲ್ಲಿ ಯುವ ಆಟಗಾರನಾಗಿರುವ ಋತುರಾಜ್ ಗಾಯಕ್ವಾಡ್ಗೆ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ IPL Trophy Shlok: ಐಪಿಎಲ್ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಅರ್ಥವೇನು?
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಅವರ ಬದಲು ಉಪನಾಯಕನಾಗಿರುವ ಜಿತೇಶ್ ಶರ್ಮ ಅವರು ಟ್ರೋಫಿ ಫೋಟೊಶೂಟ್ನಲ್ಲಿ ತಂಡವನ್ನು ಪ್ರತಿನಿಧಿಸಿದರು. ಉಳಿದಂತೆ ಎಲ್ಲ 9 ತಂಡಗಳ ನಾಯಕರು ಹಾಜರಿದ್ದರು.
The 🔟 Captains are READY! 😎
— IndianPremierLeague (@IPL) March 21, 2024
The Goal is SET 🏆
Let the #TATAIPL 2024 begin 😍 pic.twitter.com/f8cdv5Zfqh
ಮಾರ್ಚ್ 22ರಂದು ನಡೆಯುವ ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ(IPL 2024 opening ceremony) ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಸಂಗೀತ ನಿರ್ದೇಶಕ. ಆರು ರಾಷ್ಟ್ರ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್(AR Rahman), ಸೋನು ನಿಗಮ್(Sonu Nigam), ಟೈಗರ್ ಶ್ರಾಫ್(Tiger Shroff), ಅಕ್ಷಯ್ ಕುಮಾರ್(Akshay Kumar) ಪ್ರದರ್ಶನ ನೀಡಲಿದ್ದಾರೆ. ಈ ವಿಚಾರವನ್ನು ಐಪಿಎಲ್ ಆಡಳಿತ ಮಂಡಳಿ ಬುಧವಾರ ಟ್ವೀಟರ್ ಎಕ್ಸ್ ಖಾತೆಯಲ್ಲಿ ಅಧಿಕೃತ ಪ್ರಕಟನೆಯ ಮೂಲಕ ತಿಳಿಸಿದೆ. ಈ ಕಾರ್ಯಕ್ರಮ ಚೆನ್ನೈಯಲ್ಲಿ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಅಂದರೆ ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(royal challengers bangalore vs chennai super kings) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs CSK) ತಂಡಗಳು ಮುಖಾಮುಖಿಯಾಗುವುದರೊಂದಿಗೆ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಗೊಂಡಿದೆ. ಉಳಿದ ಪಂದ್ಯಗಳು ಯಾವಾಗಿನಿಂದ ಹಾಗೂ ಎಲ್ಲಿ ನಡೆಯುತ್ತದೆ ಎನ್ನುವ ಮಾಹಿತಿ ಇದುವರೆಗೆ ರಿವೀಲ್ ಆಗಿಲ್ಲ.