Site icon Vistara News

IPL 2024: ಕ್ಯಾಚ್​ಗಳ ಶತಕ ಪೂರ್ತಿಗೊಳಿಸಿದ ಜಡೇಜಾ; ಈ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನ ಯಾರಿಗೆ?

IPL 2024

ಚೆನ್ನೈ: ಕೆಕೆಆರ್(Kolkata Knight Riders)​ ವಿರುದ್ಧದ ಪಂದ್ಯದಲ್ಲಿ ಚೆನ್ನೈ(Chennai Super Kings) ತಂಡದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ(Ravindra Jadeja) ಅವರು ಮೂರು ಕ್ಯಾಚ್​ ಹಿಡಿಯುವ ಮೂಲಕ ಐಪಿಎಲ್​ನಲ್ಲಿ(IPL 2024) ಅತ್ಯಧಿಕ ಕ್ಯಾಚ್​ ಪಡೆದ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ 4ನೇ ಸ್ಥಾನಿಯಾಗಿದ್ದ ರೋಹಿತ್​ ಶರ್ಮ ಅವರನ್ನು ಹಿಂದಿಕ್ಕಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಜಡೇಜಾ 98 ಕ್ಯಾಚ್​ಗಳನ್ನು ಪಡೆದಿದ್ದರು. ಶತಕದ ಕ್ಯಾಚ್​ ಪೂರ್ತಿಗೊಳಿಸಲು ಅವರಿಗೆ 2 ಕ್ಯಾಚ್​ಗಳ ಅವಶ್ಯಕತೆ ಇತ್ತು. ಕೆಕೆಆರ್​ ವಿರುದ್ಧ ಒಟ್ಟು ಮೂರು ಕ್ಯಾಚ್​ ಪಡೆದು 101 ಕ್ಯಾಚ್​ ಹಿಡಿದ ಸಾಧನೆ ಮಾಡಿದರು. ಸದ್ಯ 4ನೇ ಸ್ಥಾನಿಯಾಗಿರುವ ಅವರು ಮುಂದಿನ ಪಂದ್ಯಗಳಲ್ಲಿ ಮೂರು ಕ್ಯಾಚ್​ ಪಡೆದರೆ ಕೈರಾನ್​ ಪೊಲಾರ್ಡ್(103 ಕ್ಯಾಚ್) ​ದಾಖಲೆಯನ್ನು ಮುರಿಯಲಿದ್ದಾರೆ.

ಐಪಿಎಲ್​ನಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ದಾಖಲೆ ಆರ್​ಸಿಬಿ ತಂಡದ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್​ ಅವರು ಒಟ್ಟು 110* ಕ್ಯಾಚ್​ ಪಡೆದಿದ್ದಾರೆ. ಮಾಜಿ ಆಟಗಾರ ಸುರೇಶ್​ ರೈನಾ 109 ಕ್ಯಾಚ್​ಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ರೋಹಿತ್​ ಶರ್ಮ ಭರ್ತಿ 100 ಕ್ಯಾಚ್​ ಹಿಡಿದು 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IPL 2024 Points Table: ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಚೆನ್ನೈ; ಉಳಿದ ತಂಡದ ಸ್ಥಿತಿ ಹೇಗಿದೆ?

​ಐಪಿಎಲ್​ನಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದ ಆಟಗಾರರು


ವಿರಾಟ್​ ಕೊಹ್ಲಿ-110 ಕ್ಯಾಚ್

​ಸುರೇಶ್​ ರೈನಾ- 109 ಕ್ಯಾಚ್​

ಕೈರಾನ್​ ಪೊಲಾರ್ಡ್​-103 ಕ್ಯಾಚ್​

ರವೀಂದ್ರ ಜಡೇಜಾ-101* ಕ್ಯಾಚ್​

ರೋಹಿತ್​ ಶರ್ಮ- 100* ಕ್ಯಾಚ್​

ಶಿಖರ್​ ಧವನ್​-98 ಕ್ಯಾಚ್​

ಚೆನ್ನೈಗೆ 7 ವಿಕೆಟ್​ ಜಯ


ಸೋಮವಾರ ನಡೆದ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ತಂಡ ಕೆಕೆಆರ್​ ವಿರುದ್ಧ 7 ವಿಕೆಟ್​ ಅಂತರದ ಗೆಲುವು ಸಾಧಿಸಿ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕೆಕೆಆರ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್ ಬಾರಿಸಿತು. ಜವಾಬಿತ್ತ ಚೆನ್ನೈ 14 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ ನಷ್ಟಕ್ಕೆ 141 ರನ್ ಬಾರಿಸಿ ಗೆಲುವು ಸಾಧಿಸಿತು. ಋತುರಾಜ್ ಗಾಯಕ್ವಾಡ್​ (67 ರನ್​) ಸಮಯೋಚಿತ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ದಾಳಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಹೊರಟ ಚೆನ್ನೈ ತಂಡದ ಪರ ರಚಿನ್ ರವೀಂದ್ರ ಮತ್ತೊಂದು ಬಾರಿ ವೈಫಲ್ಯ ಎದುರಿಸಿದರು. ಅವರು 15 ರನ್ ಬಾರಿಸಿ ಔಟಾದರು. ಈ ವೇಳೆ ತಂಡದ ಮೊತ್ತ 27 ಆಗಿತ್ತು. ಬಳಿಕ ಜತೆಯಾದ ಡ್ಯಾರಿಲ್​ ಮಿಚೆಲ್​ (25) ಋತುರಾಜ್​ಗೆ ಉತ್ತಮ ಸಾಥ್​ ಕೊಟ್ಟರು. ಈ ಜೋಡಿ ತಂಡದ ಮೊತ್ತವನ್ನು 97ರ ತನಕ ಕೊಂಡೊಯ್ದರು. ಹೀಗಾಗಿ ಚೆನ್ನೈಗೆ ಗೆಲುವಿನ ವಿಶ್ವಾಸ ಮೂಡಿತು. ಆದರೆ, ನರೈನ್ ಎಸೆತಕ್ಕೆ ಬೌಲ್ಡ್​ ಅದ ಮಿಚೆಲ್​ ನಿರಾಸೆಯಿಂದ ಹೊರನಡೆದರು. ಆ ಬಳಿಕ ಕ್ರೀಸ್​ಗೆ ಬಂದ ಚೆನ್ನೈ ತಂಡದ ಆಪದ್ಭಾಂದವ ಶಿವಂ ದುಬೆ ಮುನ್ನಡೆ ಕಲ್ಪಿಸಿ ಕೊಟ್ಟರು. ಋತುರಾಜ್​ ಕೊನೇ ತನಕ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟರು.

Exit mobile version