Site icon Vistara News

IPL 2024: ಕ್ಯಾಚ್​ ಮೂಲಕ ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಕಿಂಗ್​ ಕೊಹ್ಲಿ

IPL 2024

ಜೈಪುರ: ರಾಜಸ್ಥಾನ್​ ರಾಯಲ್ಸ್(Rajasthan Royals)​ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ(Royal Challengers Bengaluru) ಹೀನಾಯ 6 ವಿಕೆಟ್​ಗಳ ಸೋಲು ಕಂಡಿದೆ. ಆದರೆ, ವಿರಾಟ್​ ಕೊಹ್ಲಿ(Virat Kohli) ಅವರು ಸೋಲಿನ ಹೊರತಾಗಿಯೂ ಐಪಿಎಲ್​ನಲ್ಲಿ(IPL 2024) ಅತ್ಯಧಿಕ ಕ್ಯಾಚ್​ ಪಡೆದ ಸುರೇಶ್​ ರೈನಾ ದಾಖಲೆಯನ್ನು ಮುರಿದಿದ್ದಾರೆ.

ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಐಪಿಎಲ್​ನಲ್ಲಿ ತಮ್ಮ 8ನೇ ಶತಕ ದಾಖಲಿಸಿದರು. 72 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿದರು. 12 ಬೌಂಡರಿ ಮತ್ತು 4 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿತ್ತು. ಆದರೆ ಪಂದ್ಯ ಸೋತ ಕಾರಣ ಅವರ ಈ ಶತಕದಾಟ ವ್ಯರ್ಥವಾಯಿತು. ಇದೇ ಪಂದ್ಯದಲ್ಲಿ ಕೊಹ್ಲಿ ಅವರು ರಿಯಾನ್​ ಪರಾಗ್​ ಅವರ ಕ್ಯಾಚ್​ ಹಿಡಿಯುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಫೀಲ್ಡರ್​ ಆಗಿ ಹೊರಹೊಮ್ಮಿದರು.

ಪಂದ್ಯಕ್ಕೂ ಮುನ್ನ ಕೊಹ್ಲಿ ಅವರು ಸುರೇಶ್​ ರೈನಾ ಜತೆ ಜಂಟಿ ದಾಖಲೆ ಹೊಂದಿದ್ದರು. ಇದೀಗ ಕ್ಯಾಚ್​ಗಳ ಸಂಖ್ಯೆಯನ್ನು 110ಕ್ಕೆ ಏರಿಸುವ ಮೂಲಕ 109 ಕ್ಯಾಚ್​ ಪಡೆದ ಸುರೇಶ್​ ರೈನಾ ಅವರನ್ನು ಹಿಂದಿಕ್ಕಿದ್ದಾರೆ. 103 ಕ್ಯಾಚ್​ ಹಿಡಿದ ಮುಂಬೈ ತಂಡದ ಮಾಜಿ ಆಟಗಾರ ಕೈರಾನ್ ಪೊಲಾರ್ಡ್​ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್​ ಶರ್ಮ ಅವರು ಇಂದು ನಡೆಯುವ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಒಂದು ಕ್ಯಾಚ್ ಹಿಡಿದರೆ ಕ್ಯಾಚ್​ಗಳ ಶತಕ ಪೂರ್ತಿಗೊಳಿಸಿದೆ. ಈ ಮೂಲಕ 100 ಕ್ಯಾಚ್​ ಹಿಡಿದ ಸಾಧನೆ ಮಾಡಲಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್​ ಅಭಿಮಾನಿಗಳಿಗೆ ಇಂದು ಡಬಲ್‌ ಧಮಾಕಾ; ಒಂದೇ ದಿನ 2 ಪಂದ್ಯ

​ಐಪಿಎಲ್​ನಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದ ಆಟಗಾರರು


ವಿರಾಟ್​ ಕೊಹ್ಲಿ-110 ಕ್ಯಾಚ್

​ಸುರೇಶ್​ ರೈನಾ- 109 ಕ್ಯಾಚ್​

ಕೈರಾನ್​ ಪೊಲಾರ್ಡ್​-103 ಕ್ಯಾಚ್​

ರೋಹಿತ್​ ಶರ್ಮ- 99 ಕ್ಯಾಚ್​

ಶಿಖರ್​ ಧವನ್​-98 ಕ್ಯಾಚ್​

ರವೀಂದ್ರ ಜಡೇಜಾ-98 ಕ್ಯಾಚ್​

ರನ್​ ದಾಖಲೆ ಬರೆದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ 7500 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಪಂಜಾಬ್ ತಂಡದ ನಾಯಕ ಶಿಖರ್ ಧವನ್​ 6755 ರನ್ ಬಾರಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್​ 6545 ರನ್ ಬಾರಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. 6280 ರೋಹಿತ್ ಶರ್ಮಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಮಾಜಿ ಆಟಗಾರ ಸುರೇಶ್ ರೈನಾ 5528 ರನ್ ಬಾರಿಸಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ಆರ್​ಸಿಬಿಗೆ ಹೀನಾಯ ಸೋಲು

ವಿರಾಟ್​ ಕೊಹ್ಲಿಯ ದಾಖಲೆಯ 8ನೇ ಐಪಿಎಲ್ ಶತಕದ ಹೊರತಾಗಿಯೂ ಬೌಲರ್​​ಗಳ ಕೆಟ್ಟ ಪ್ರದರ್ಶನದಿಂದ ಸೊರಗಿದ ರಾಯ್ ಚಾಲೆಂಜರ್ಸ್​ ಬೆಂಗಳೂರು ತಂಡ (Royal Challengers Bangalore) ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2024) ಮತ್ತೊಂದು ಸೋಲಿಗೆ ಒಳಗಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್​ನ 19ನೇ ಪಂದ್ಯದಲ್ಲಿ 6 ವಿಕೆಟ್​ಗಳ ಮುಖಭಂಗ ಎದುರಿಸಿತು

Exit mobile version