Site icon Vistara News

IPL 2024: ಐಪಿಎಲ್​ಗೆ ಕನ್ನಡಿಗ ರಾಹುಲ್‌ ಫಿಟ್‌; ಆದರೆ…

KL Rahul

ಲಕ್ನೋ: ಐಪಿಎಲ್(IPL 2024)​ ಆರಂಭಕ್ಕೆ ಇನ್ನು ಮೂರು ದಿನಗಳು ಬಾಕಿ ಇರುವಾಗಲೇ ಲಕ್ನೋ(Lucknow Super Giants) ಹಾಗೂ ಕೆ.ಎಲ್​ ರಾಹುಲ್​(KL Rahul) ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಿಂದ ರಾಹುಲ್​ ಫಿಟ್​ನೆಸ್​ ಸರ್ಟಿಫಿಕೆಟ್‌ ಪಡೆದಿದ್ದು ಐಪಿಎಲ್​ ಮೊದಲ ಪಂದ್ಯದಿಂದಲೇ ತಂಡಕ್ಕೆ ಲಭ್ಯರಾಗಲಿದ್ದಾರೆ. ಆದರೆ, ಕೀಪಿಂಗ್‌ ನಡೆಸುವ ಸಾಧ್ಯತೆ ಕಡಿಮೆ ಎಂಬುದಾಗಿ ವರದಿಯಾಗಿದೆ.

ಇಂಗ್ಲೆಂಡ್​ ವಿರುದ್ಧದ ತವರಿನ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಮೊದಲ ಪಂದ್ಯ ಆಡಿದ ಬಳಿಕ ಗಾಯಗೊಂಡ ರಾಗುಲ್​ ಉಳಿದ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದರು. ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಅವರಿಗೆ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆ ನೀಡುವುದಾಗಿ ಹೇಳಲಾಗಿತ್ತು. ಆದರೆ, ರಾಹುಲ್​ ​ಶಸ್ತ್ರಚಿಕಿತ್ಸೆಗೆ ಒಳಗಾಗದೆ ಬೆಂಗಳೂರಿನ ಎನ್​ಸಿಯಲ್ಲಿ ಫಿಟ್​ನೆಸ್​ ತರಬೇತಿಗೆ ಒಳಗಾಗಿದ್ದರು. ಈ ವೇಳೆ ರಾಹುಲ್​ ಆರಂಭಿಕ ಐಪಿಎಲ್​ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರು ‘ಆಲ್‌ ಕ್ಲಿಯರ್‌ ಸರ್ಟಿಫಿಕೆಟ್‌’ ಪಡೆದು ಆಡಲು ಸಜ್ಜಾಗಿದ್ದಾರೆ.

ರಾಹುಲ್​ ಅವರು ಐಪಿಎಲ್​ ಆಡಿದರೂ ಕೂಡ ಕೇವಲ ಬ್ಯಾಟರ್‌ ಆಗಿ ಕಣಕ್ಕಿಳಿಯಲಿದ್ದಾರೆ. ಕೀಪಿಂಗ್‌ ನಡೆಸುವುದಿಲ್ಲ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಇವರ ಬದಲು ದಕ್ಷಿಣ ಆಫ್ರಿಕಾದ ಅನುಭವಿ ಕ್ವಿಂಟನ್‌ ಡಿ ಕಾಕ್‌ ಅಥವಾ ಉಪನಾಯಕನಾಗಿರುವ ನಿಕೋಲಸ್‌ ಪೂರಣ್‌ ವಿಕೆಟ್‌ ಕೀಪಿಂಗ್‌ ನಡೆಸಲಿದ್ದಾರೆ.

ಇದನ್ನೂ ಓದಿ IPL 2024 : ಸಿಎಸ್​ಕೆ ತಂಡಕ್ಕೆ ಮತ್ತೊಂದು ಆಘಾತ; ಮುಸ್ತಾಫಿಜುರ್​ಗೂ ಗಾಯ

ಎನ್‌ಸಿಎಯಲ್ಲಿ ರಾಹುಲ್​ ಬ್ಯಾಟಿಂಗ್‌ ಅಭ್ಯಾಸ ನಡೆಸಿದ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಮೂಲಕ ತಾನು ಬ್ಯಾಟಿಂಗ್​ ನಡೆಸಲು ಸಮರ್ಥನಿದ್ದೇನೆ ಎನ್ನುವ ಸಂದೇಶ ನೀಡಿದ್ದಾರೆ. 2023 ರ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮತ್ತು ಕೀಪಿಂಗ್​ ನಡೆಸಿದ್ದ ರಾಹುಲ್​ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಆದರೆ ಐಪಿಎಲ್​ನಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಲಕ್ನೋ(lucknow super giants) ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್​ 24ರಂದು ರಾಜಸ್ಥಾನ್​ ವಿರುದ್ಧ ಆಡಲಿದೆ.

ವಿಶ್ವಕಪ್​ನಲ್ಲಿ ಅವಕಾಶ?


ಮುಂಬರುವ ಟಿ20 ವಿಶ್ವಕಪ್‌ಗೆ ಪ್ರತಿ ತಂಡವು ತಯಾರಿ ನಡೆಸುತ್ತಿದೆ. ರಿಷಭ್​ ಪಂತ್ ಅವರ ಫಿಟ್‌ನೆಸ್ ಬಗ್ಗೆ ಭಾರತಕ್ಕೆ ಖಚಿತೆ ಇಲ್ಲ. ಬ್ಯಾಟಿಂಗ್​ ನಡೆಸಲು ಫಿಟ್​ ಆಗಿದ್ದರೂ ಕೂಡ ಕೀಪಿಂಗ್​ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಲಭಿಸಿಲ್ಲ. ಅಲ್ಲದೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೂಡ ಪಂತ್​ ಕೀಪಿಂಗ್​ ನಡೆಸಲು ಫಿಟ್​ ಆಗಿದ್ದರೆ ಮಾತ್ರ ವಿಶ್ವಕಪ್ ಆಡಲಿದ್ದಾರೆ ಎಂದು ಹೇಳಿದ್ದಾರೆ. ಒಂದೊಮ್ಮೆ ಪಂತ್​ ಕೀಪಿಂಗ್​ ನಡೆಸಲು ಸಾಧ್ಯವಾಗದಿದ್ದರೆ ಕೆ.ಎಲ್​ ರಾಹುಲ್​ ಅವರಿಗೆ ಕೀಪಿಂಗ್ ಹೊಣೆ ಸಿಗಲಿದೆ. ಈಗಾಗಲೇ ರಾಹುಲ್​ ಏಕದಿನ ವಿಶ್ವಕಪ್​ನಲ್ಲಿ ಕೀಪಿಂಗ್​ ಮಾಡಿ ಯಶಸ್ವಿಯಾಗಿದ್ದಾರೆ. ಬಿಸಿಸಿಐನ ಕೇಂದ್ರೀಯ ಗುತ್ತಿಗೆಯಿಂದ ವಜಾಗೊಂಡಿರುವ ಇಶಾನ್ ಕಿಶನ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿರಬಹುದು. ಇದು ಕೂಡ ರಾಹುಲ್‌ಗೆ ವರದಾನವಾಗಬಹುದು.

Exit mobile version