Site icon Vistara News

IPL 2024: ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡಿ; ಕೆ.ಎಲ್​ ರಾಹುಲ್ ​ಆಗ್ರಹ

kl rahul and virat kohli

ಬೆಂಗಳೂರು: ಇನ್ನೆರಡು ದಿನ ಕಳೆದರೆ 2024ರ ಇಂಡಿಯನ್ ಪ್ರೀಮಿಯರ್ ಲೀಗ್(IPL 2024) ಟೂರ್ನಿ ಆರಂಭಗೊಳ್ಳಲಿದೆ. ಮಾರ್ಚ್ 22ರಿಂದ 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs CSK) ತಂಡಗಳು ಮುಖಾಮುಖಿಯಾಗುವುದರೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ.

ಪ್ರತಿ ಬಾರಿಯೂ ಐಪಿಎಲ್​ ಶುರುವಾದಗ ಸ್ನೇಹಿತರೆಲ್ಲರೂ ವೈರಿಗಳಾಗಿ ಬದಲಾಗುತ್ತಾರೆ. ಐಪಿಎಲ್​ ಮುಗಿದ ತಕ್ಷಣ ಮತ್ತೆ ಒಂದಾಗುತ್ತಾರೆ. ತಮ್ಮ ನೆಚ್ಚಿನ ಆಟಗಾರ ಮತ್ತು ತಂಡಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಕುಚಿಕು ಗೆಳೆಯರೆಲ್ಲ ಬದ್ಧ ವೈರಿಗಳಾಗಿರುತ್ತಾರೆ. ಇದೀಗ ಲಕ್ನೋ ತಂಡದ ನಾಯಕ ಕೆ.ಎಲ್​ ರಾಹುಲ್(KL Rahul)​ ಅವರು ತಮ್ಮ ನೆಚ್ಚಿನ ಗೆಳೆಯ(kl rahul and virat kohli friendship) ವಿರಾಟ್​ ಕೊಹ್ಲಿ(Virat Kohli) ಬಗ್ಗೆ ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಾಹುಲ್​ ಅವರು ಲೈವ್​ ವಿಡಿಯೊ ಕಾಲ್​ ಮೂಲಕ ವಿರಾಟ್​ ಜತೆ ಐಪಿಎಲ್​ ಪೂರ್ವ ಸಿದ್ಧತೆಯ ಬಗ್ಗೆ ಮಾತನಾಡುವ ವೇಳೆ ನಿಮ್ಮನ್ನು ಮತ್ತು ಎಬಿಡಿ ವಿಲಿಯರ್ಸ್​ ಅವರನ್ನು ಐಪಿಎಲ್​ನಿಂದ ಬ್ಯಾನ್​ ಮಾಡಬೇಕು. ಪ್ರತಿ ಆವೃತ್ತಿಯಲ್ಲಿಯೂ ನಿಮ್ಮಿಬ್ಬರ ಜತೆಯಾಟ, ದಾಖಲೆ ಮತ್ತು ರನ್​ ಗಳಿಕೆ ಟಾಪ್​ನಲ್ಲಿರುತ್ತದೆ. ನಿಮ್ಮಿಬ್ಬರನ್ನು ಬ್ಯಾನ್​ ಮಾಡಿದರೆ ನಮಗೆ ಒಳಿತು ಎಂದು ಹೇಳಿದ್ದಾರೆ. ರಾಹುಲ್​ ಮಾತು ಕೇಳಿ ಕೊಹ್ಲಿ ಜೋರಾಗಿ ನಕ್ಕಿದ್ದಾರೆ. ರಾಹುಲ್​ ಅವರು ಯಾವುದೇ ದ್ವೇಷದಿಂದ ಈ ಮಾತನ್ನು ಹೇಳಿಲ್ಲ. ಬದಲಾಗಿ ತಮಾಷೆಯಾಗಿ ಈ ಮಾತನ್ನು ಹೇಳಿದ್ದಾರೆ. ಮೂರು ವರ್ಷದ ಹಿಂದಿನ ಹಳೆಯ ವಿಡಿಯೊ ಇದಾಗಿದೆ. ಕೊರೊನಾ ಕಾಲಘಟ್ಟದಲ್ಲಿ ನಡೆಸಿದ ಲೈವ್​ ವಿಡಿಯೊ ಕಾಲ್​ ಇದಾಗಿತ್ತು. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ IPL 2024: ಐಪಿಎಲ್​ ಆರಂಭಕ್ಕೂ ಮುನ್ನ ಕುಟುಂಬ ಸಮೇತರಾಗಿ ಮಹಾಕಾಳೇಶ್ವರನ ದರ್ಶನ ಪಡೆದ ರಾಹುಲ್​

ಕುಚಿಕು ಗೆಳೆಯರು


ರಾಹುಲ್​ ಮತ್ತು ವಿರಾಟ್​ ಕೊಹ್ಲಿ ಕುಚಿಕು ಗೆಳೆಯರು. ಇವರಿಬ್ಬರ ಸ್ನೇಹ ಹಲವು ಬಾರಿ ಮೈದಾನದಲ್ಲಿ ಸಾಬೀತಾಗಿದೆ. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಲೆಂದೇ ರಾಹುಲ್​ ಅವರು ಒಂದೂ ರನ್​ ಮಾಡದೆ ಕೊಹ್ಲಿಯ ಶತಕ ಪೂರ್ತಿಗೊಳ್ಳುವಂತೆ ಮಾಡಿದ್ದರು. ಹೀಗೆ ಕೊಹ್ಲಿ ಫಾರ್ಮ್​ ಕಳೆದುಕೊಂಡಾಗ ಅಥವಾ ರಾಹುಲ್​ ಫಾರ್ಮ್ ಕಳೆದುಕೊಂಡಾಗ ಉಭಯ ಆಟಗಾರರು ಕೂಡ ಪರಸ್ಪರ ಬೆಂಬಲ ಸೂಚಿಸಿ ಟೀಕಾಕಾರರ ಬಾಯಿ ಮುಚ್ಚಿಸುತ್ತಾರೆ.

Exit mobile version