ಲಕ್ನೋ: ಅಪಾರ ದೈವ ಭಕ್ತರಾಗಿರುವ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ, ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಐಪಿಎಲ್(IPL 2024) ಟೂರ್ನಿ ಆರಂಭಕ್ಕೂ ಮುನ್ನ ಕುಟುಂಬ ಸಮೇತರಾಗಿ ಉಜ್ಜಯಿನಿಯ(Ujjain) ಬಾಬಾ ಮಹಾಕಾಳೇಶ್ವರದ ಜ್ಯೋತಿರ್ಲಿಂಗ(Mahakaleshwar Temple) ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಕಳೆದ ವರ್ಷ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ರಾಹುಲ್ ಅವರು ಪತ್ನಿ ಅಥಿಯಾ ಶೆಟ್ಟಿ ಜತೆ ಉಜ್ಜಯಿನಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡದ ನಾಯಕನಾಗಿದ್ದು, ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುವ ಮುನ್ನ ಮಹಾಕಾಳೇಶ್ವರದ ದರ್ಶನ ಮಾಡಿದ್ದಾರೆ. ರಾಹುಲ್ ತಮ್ಮ ಕ್ರಿಕೆಟ್ ಬಿಡುವಿನ ವೇಳೆ ಹಲವು ದೇವಾಲಯಕ್ಕೆ ಹೋಗುವ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಲೇ ಇರುತ್ತಾರೆ. ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತು ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ. 2 ತಿಂಗಳ ಹಿಂದೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಭೇಟಿ ಶ್ರೀ ದೇವಿಯ ದರ್ಶನ ಪಡೆದಿದ್ದರು.
#WATCH | Cricketer KL Rahul offered prayers at Mahakaleshwar Temple in Ujjain, Madhya Pradesh today. pic.twitter.com/5dvZybtgAu
— ANI (@ANI) March 20, 2024
ಕೀಪಿಂಗ್ ಡೌಟ್
ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಿಂದ ಕೆ.ಎಲ್ ರಾಹುಲ್ ಫಿಟ್ನೆಸ್ ಸರ್ಟಿಫಿಕೆಟ್ ಪಡೆದಿದ್ದು ಐಪಿಎಲ್ ಮೊದಲ ಪಂದ್ಯದಿಂದಲೇ ತಂಡಕ್ಕೆ ಲಭ್ಯರಾಗಲಿದ್ದಾರೆ. ಆದರೆ, ಕೀಪಿಂಗ್ ನಡೆಸುವ ಸಾಧ್ಯತೆ ಕಡಿಮೆ ಎಂಬುದಾಗಿ ವರದಿಯಾಗಿದೆ.
ಇದನ್ನೂ ಓದಿ IPL 2024: ‘ಬ್ರೋಕನ್ ಹಾರ್ಟ್’ ಎಮೋಜಿ; ಐಪಿಎಲ್ಗೆ ಸೂರ್ಯಕುಮಾರ್ ಡೌಟ್
ಇಂಗ್ಲೆಂಡ್ ವಿರುದ್ಧದ ತವರಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಆಡಿದ ಬಳಿಕ ಗಾಯಗೊಂಡ ರಾಗುಲ್ ಉಳಿದ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದರು. ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಅವರಿಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ನೀಡುವುದಾಗಿ ಹೇಳಲಾಗಿತ್ತು. ಆದರೆ, ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗದೆ ಬೆಂಗಳೂರಿನ ಎನ್ಸಿಯಲ್ಲಿ ಫಿಟ್ನೆಸ್ ತರಬೇತಿಗೆ ಒಳಗಾಗಿದ್ದರು. ಈ ವೇಳೆ ರಾಹುಲ್ ಆರಂಭಿಕ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರು ‘ಆಲ್ ಕ್ಲಿಯರ್ ಸರ್ಟಿಫಿಕೆಟ್’ ಪಡೆದು ಆಡಲು ಸಜ್ಜಾಗಿದ್ದಾರೆ.
2 ದಿನಗಳ ಹಿಂದೆ ರಾಹುಲ್ ಎನ್‌ಸಿಎಯಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಮೂಲಕ ತಾನು ಬ್ಯಾಟಿಂಗ್ ನಡೆಸಲು ಸಮರ್ಥನಿದ್ದೇನೆ ಎನ್ನುವ ಸಂದೇಶ ನೀಡಿದ್ದರು. 2023 ರ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ನಡೆಸಿದ್ದ ರಾಹುಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಆದರೆ ಐಪಿಎಲ್ನಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಲಕ್ನೋ(lucknow super giants) ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್ 24ರಂದು ರಾಜಸ್ಥಾನ್ ವಿರುದ್ಧ ಆಡಲಿದೆ.