Site icon Vistara News

IPL 2024: ರಾಜಸ್ಥಾನ್​ vs ಕೆಕೆಆರ್​ ಪಂದ್ಯದ ದಿನಾಂಕ ಬದಲಾವಣೆ ಸಾಧ್ಯತೆ!

IPL 2024

ಕೋಲ್ಕತಾ: ಏಪ್ರಿಲ್​ 17ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಬೇಕಿರುವ ಐಪಿಎಲ್​ನ(IPL 2024) 32ನೇ ಪಂದ್ಯವಾದ ಕೆಕೆಆರ್‌(Kolkata Knight Riders) ಮತ್ತು ರಾಜಸ್ಥಾನ್‌(Rajasthan Royals) ನಡುವಿನ ಪಂದ್ಯ ನಿಗದಿತ ದಿನಾಂಕದಂದು ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ. ಇದಕ್ಕೆ ಕಾರಣ ಪಂದ್ಯದ ದಿನ ರಾಮನವಮಿ ಆಚರಣೆ ಜತೆಗೆ 19ರಂದು ಪಶ್ಚಿಮ ಬಂಗಾಲದಲ್ಲಿ ನಡೆಯುವ ಮೊದಲ ಹಂತದ ಚುನಾವಣೆ. ಹೀಗಾಗಿ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗದು ಎಂಬುದಾಗಿ ಪೊಲೀಸ್‌ ಇಲಾಖೆ ಬಂಗಾಳ ಕ್ರಿಕೆಟ್‌ ಮಂಡಳಿ (ಸಿಎಬಿ) ಸೂಚಿಸಿದೆ.

ಸಿಎಬಿ ಅಧ್ಯಕ್ಷ ಸ್ನೇಹಶಿಷ್‌ ಗಂಗೂಲಿ ಕೂಡ ಇದನ್ನು ಬಿಸಿಸಿಐ ಗಮನಕ್ಕೆ ತಂದಿದ್ದು ಈ ಪಂದ್ಯವನ್ನು ಒಂದು ದಿನ ಮುಂಚಿತವಾಗಿ (ಏ. 16) ಅಥವಾ ಒಂದು ದಿನ ವಿಳಂಬವಾಗಿ (ಏ. 18) ನಡೆಸುವಂತೆ ಮನವಿ ಮಾಡಿದ್ದಾರೆ. ಸದ್ಯಕ್ಕೆ ಪಂದ್ಯದ ದಿನಾಂಕ ಬದಲಾವಣೆ ಕುರಿತು ಬಿಸಿಸಿಐ ಮತ್ತು ಐಪಿಎಲ್​ ಆಡಳಿತ ಮಂಡಳಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಟೂರ್ನಿಯಲ್ಲಿ 14 ಪಂದ್ಯಗಳು ಮುಕ್ತಾಯ ಕಂಡಿದೆ. ರಾಜಸ್ಥಾನ್​ ರಾಯಲ್ಸ್​ ಹ್ಯಾಟ್ರಿಕ್​​ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಅಗ್ರಸ್ಥಾನ ಕಾಯ್ದುಕೊಂಡಿದೆ. ಉಳಿದ ತಂಡಗಳ ಸ್ಥಿತಿ ಹೇಗಿದೆ ಎಂಬ ಮಾಹಿತಿ ಇಂತಿದೆ.

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​3306 (+1.249)
ಕೋಲ್ಕೊತಾ ನೈಟ್‌ ರೈಡರ್ಸ್2204 (+1.047)
​ಚೆನ್ನೈ ಸೂಪರ್​ ಕಿಂಗ್ಸ್​3214 (+0.976)
ಗುಜರಾತ್‌ ಟೈಟಾನ್ಸ್3214(-0.738)
ಸನ್​ರೈಸರ್ಸ್​ ಹೈದರಾಬಾದ್​3122‌ (+0.204)
ಲಕ್ನೋ ಸೂಪರ್​ ಜೈಂಟ್ಸ್​2112 (+0.025)
ಡೆಲ್ಲಿ ಕ್ಯಾಪಿಟಲ್ಸ್​3122 (-0.016)
ಪಂಜಾಬ್​ ಕಿಂಗ್ಸ್​3122 (-0.337)
ಆರ್​ಸಿಬಿ3122 (-0.711)
ಮುಂಬೈ ಇಂಡಿಯನ್ಸ್​3030 (-1.423)

ರಾಜಸ್ಥಾನ್​ ತಂಡ ಆಡಿದ ಮೂರು ಪಂದ್ಯಗಳನ್ನು ಗೆದ್ದು ಅಜೇಯ ಗೆಲುವಿನೋಟ ಮುಂದುವರಿಸಿದೆ. ತವರಿನಲ್ಲಿ ಮತ್ತು ತವರಿನಾಚೆಯ ಪಂದ್ಯಗಳನ್ನು ಗೆಲ್ಲುತ್ತಾ ತನ್ನ ಶಕ್ತಿ ಪ್ರದರ್ಶನ ತೋರುತ್ತಿದೆ. ಕೋಲ್ಕತ್ತಾ ಕೂಡ ತನಾಡಿದ 2 ಪಂದ್ಯಗಳಲ್ಲಿಯೂ ಗೆದ್ದು ಟೂರ್ನಿಯಲ್ಲಿ ಅಜೇಯವಾಗಿದೆ.

ಇದನ್ನೂ ಓದಿ IPL 2024: ಹಾರ್ದಿಕ್​ಗೆ ಗೇಲಿ ಮಾಡದಂತೆ ಅಭಿಮಾನಿಗಳಿಗೆ ವಾರ್ನಿಂಗ್​ ನೀಡಿದ ರೋಹಿತ್

ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 15.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 127 ರನ್ ಬಾರಿಸಿ ಭರ್ಜರಿ ವಿಜಯ ಸಾಧಿಸಿತು. 39 ಎಸೆತಗಳಲ್ಲಿ 54 ರನ್ ಬಾರಿಸಿದ ರಿಯಾನ್ ಪರಾಗ್​ ಬ್ಯಾಟಿಂಗ್​ನಲ್ಲಿ ತಂಡಕ್ಕೆ ನೆರವು ಕೊಟ್ಟರೆ, ಬೌಲಿಂಗ್​ನಲ್ಲಿ ಟ್ರೆಂಟ್ ಬೌಲ್ಟ್​ ಹಾಗೂ ಯಜ್ವೇಂದ್ರ ಚಹಲ್​ ತಲಾ 3 ವಿಕೆಟ್​ ಪಡೆದುಕೊಂಡು ಮಿಂಚಿದರು. ಇದು ಮುಂಬೈಗೆ ಎದುರಾದ​ ಹ್ಯಾಟ್ರಿಕ್​ ಸೋಲಾಗಿದೆ.

Exit mobile version