Site icon Vistara News

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ಕುಲ್​ದೀಪ್, ನರೈನ್

IPL 2024

ಕೋಲ್ಕತ್ತಾ: ಕೋಲ್ಕತ್ತಾ ನೈಟ್​ ರೇಡರ್ಸ್(Kolkata Knight Riders)​ ಮತ್ತು ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ನಡುವೆ ನಿನ್ನೆ(ಸೋಮವಾರ) ನಡೆದ ಐಪಿಎಲ್​ನ(IPL 2024) 37ನೇ ಲೀಗ್​ ಪಂದ್ಯದಲ್ಲಿ ಸುನೀಲ್​ ನರೈನ್​​(Sunil Narine) ಮತ್ತು ಕುಲ್​ದೀಪ್​ ಯಾದವ್(Kuldeep Yadav) ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಉಭಯ ಆಟಗಾರರ ದಾಖಲೆಯ ವಿವರ ಇಂತಿದೆ.

ಸುನೀಲ್​ ನಾರಾಯಣ್​ ಐಪಿಎಲ್​ನಲ್ಲಿ ಒಂದೇ ಕ್ರೀಡಾಂಗಣದಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡರು. ಈ ಮೂಲಕ ಲಸಿತ್ ಮಾಲಿಂಗ ಅವರ ದಾಖಲೆ ಮುರಿದರು. ಮಾಲಿಂಗ ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ 68 ವಿಕೆಟ್​ ಕಿತ್ತಿದ್ದಾರೆ. ನಾರಾಯಣ್​ ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ 69 ವಿಕೆಟ್​ ಕಿತ್ತು ಐಪಿಎಲ್​ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಒಂದೇ ಸ್ಟೇಡಿಯಂನಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್


ಸುನೀಲ್​ ನರೈನ್​-69 ವಿಕೆಟ್​ (ಈಡನ್​ ಗಾರ್ಡನ್ಸ್​
)

ಲಸಿತ್​ ಮಾಲಿಂಗ್​-68 ವಿಕೆಟ್​(ವಾಂಖೆಡೆ)

ಅಮಿತ್​ ಮಿಶ್ರಾ-58 ವಿಕೆಟ್​(ಫಿರೋಜ್ ಶಾ ಕೋಟ್ಲಾ)

ಯಜುವೇಂದ್ರ ಚಹಲ್​-52 ವಿಕೆಟ್​(ಬೆಂಗಳೂರು)

ಹರ್ಭಜನ್​ ಸಿಂಗ್​-49 ವಿಕೆಟ್​(ವಾಂಖೆಡೆ)

9ನೇ ಕ್ರಮಾಂಕದಲ್ಲಿ ಕುಲ್​ದೀಪ್ ದಾಖಲೆ​


ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಚೈನಾಮನ್​ ಖ್ಯಾತಿಯ ಸ್ಪಿನ್ನರ್​ ಕುಲ್​ದೀಪ್​ ಯಾದವ್(35*)​ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿ ಅತ್ಯಧಿಕ ರನ್​ ಗಳಿಸಿದ 2ನೇ ಬ್ಯಾಟರ್​ ಎಂಬ ಕೀರ್ತಿಗೆ ಪಾತ್ರರಾದರು. ಮಾಜಿ ಆಟಗಾರ ಹರ್ಭಜನ್​ ಸಿಂಗ್(49*)​ ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ LSG vs MI: ಫಿಟ್​ ಆದ ಶರವೇಗದ ಎಸೆತಗಾರ ಮಾಯಾಂಕ್‌ ಯಾದವ್‌; ಮುಂಬೈ ವಿರುದ್ಧ ಕಣಕ್ಕೆ

ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್

ಡೆಲ್ಲಿ ಕ್ಯಾಟಪಿಲ್ಸ್​ ವಿರುದ್ಧ ಪ್ರಚಂಡ ಬ್ಯಾಟಿಂಗ್​ ನಡೆಸಿ ಗಮನಸೆಳೆದ ಕೆಕೆಆರ್(​KKR vs DC) ತಂಡದ ಆರಂಭಿಕ ಆಟಗಾರ ಫಿಲ್​ ಸಾಲ್ಟ್(Phil Salt)​ ಅವರು ಮಾಜಿ ಆಟಗಾರ ದಾದಾ ಖ್ಯಾತಿಯ ಸೌರವ್ ಗಂಗೂಲಿಯ(Sourav Ganguly) ಐಪಿಎಲ್​(IPL 2024) ದಾಖಲೆಯೊಂದನ್ನು ಮುರಿದರು.

ಫಿಲ್ ಸಾಲ್ಟ್​ ಅವರು ಅರ್ಧಶತಕ ಬಾರಿಸುವ ಮೂಲಕ ಐಪಿಎಲ್​ ಆವೃತ್ತಿಯೊಂದರಲ್ಲಿ ಕೆಕೆಆರ್​ ಪರ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ ಸೌರವ್​ ಗಂಗೂಲಿಯ ದಾಖಲೆಯನ್ನು ಮುರಿದರು. ಗಂಗೂಲಿ 2010ರ ಆವೃತ್ತಿಯಲ್ಲಿ 7 ಇನಿಂಗ್ಸ್​ ಆಡಿ 331 ರನ್​ ಬಾರಿಸಿದ್ದರು. ಆದರೆ ಫಿಲ್​ ಸಾಲ್ಟ್​ ಕೇವಲ 6 ಇನಿಂಗ್ಸ್​ಗಳಿಂದ 344* ರನ್​ ಕಲೆಹಾಕುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಆ್ಯಂಡ್ರೆ ರಸೆಲ್​ ಮೂರನೇ ಸ್ಥಾನದಲ್ಲಿದ್ದಾರೆ. ರಸೆಲ್​ 2019ರಲ್ಲಿ 7 ಇನಿಂಗ್ಸ್​ ನಿಂದ 311 ರನ್​ ಬಾರಿಸಿದ್ದೆರು.

ಫಿಲ್​ ಸಾಲ್ಟ್​-344* ರನ್​, 6* ಇನಿಂಗ್ಸ್​

ಸೌರವ್​ ಗಂಗೂಲಿ-331 ರನ್​, 7 ಇನಿಂಗ್ಸ್​

ಆ್ಯಂಡ್ರೆ ರಸೆಲ್​- 311 ರನ್​, 7 ಇನಿಂಗ್ಸ್​

ಕ್ರಿಸ್​ ಲೀನ್​-303 ರನ್​, 9 ಇನಿಂಗ್ಸ್​

ಕೆಕೆಆರ್​ಗೆ 7 ವಿಕೆಟ್​ ಜಯ

ಈಡನ್​ ಗಾರ್ಡನ್ಸ್​ನಲ್ಲಿ ಸೋಮವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ​ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) 16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಕೆಕೆಆರ್​ಗೆ 9ನೇ ಪಂದ್ಯದಲ್ಲಿ ಒಲಿದ 6ನೇ ಗೆಲುವಾಗಿದೆ. ಸದ್ಯ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ.

Exit mobile version