Site icon Vistara News

IPL 2024: ಗಾಯಾಳು ಕುಲ್​ದೀಪ್​ ಯಾದವ್​ಗೆ ವಿಶ್ರಾಂತಿ; ಡೆಲ್ಲಿ ತಂಡಕ್ಕೆ ಹಿನ್ನಡೆ

IPL 2024

ನವದೆಹಲಿ: ಚೈನಾಮನ್​ ಖ್ಯಾತಿಯ ಎಡಗೈ ಸ್ಪಿನ್ನರ್ ಕುಲ್​ದೀಪ್​ ಯಾದವ್(Kuldeep Yadav) ಅವರು ಸಣ್ಣ ಪ್ರಮಾಣದ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಮುನ್ನಚ್ಚರಿಕೆಯ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್(delhi capitals) ಕುಲದೀಪ್​ಗೆ ವಿಶ್ರಾಂತಿ ನೀಡಲು ಶಿಫಾರಸು ಮಾಡಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಕುಲ್​ದೀಪ್​ಗೆ ಗಾಯವಾಗಿತ್ತು.

ಗಾಯದ ಸಮಸ್ಯೆಯಿಂದಾಗಿ ಕುಲ್​ದೀಪ್​ ಮುಂದಿನ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ಮಾಹಿತಿ ನೀಡಿದೆ. ಕಳೆದ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿಯೂ ಕುಲ್​ದೀಪ್​ ಆಡಿರಲಿಲ್ಲ. ಡೆಲ್ಲಿ ತನ್ನ ಮುಂದಿನ ಪಂದ್ಯದಲ್ಲಿ ಗೆಲುವೇ ಕಾಣದ ಮುಂಬೈ ಇಂಡಿಯನ್ಸ್​ ಜತೆ ಆಡಲಿದೆ. ಈ ಪಂದ್ಯ ನಾಳೆ(ಭಾನುವಾರ) ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ.

ಕುಲದೀಪ್ ಈ ಬಾರಿಯ ಐಪಿಎಲ್​ನಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿ ಮೂರು ವಿಕೆಟ್​ಗಳನ್ನು ಉರುಳಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಕೊನೆಗೊಂಡಿದ್ದ ತವರಿನ ಐದು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಒಟ್ಟು 19 ವಿಕೆಟ್​ಗಳನ್ನು ಪಡೆದಿದ್ದರು. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿಯೂ ಕುಲ್​ದೀಪ್​ ಉತ್ತಮ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ IPL 2024 Points Table: ಹಾಲಿ ಚಾಂಪಿಯನ್​ ಚೆನ್ನೈಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ ಮೇಲೇರಿದ ಹೈದರಾಬಾದ್​

ಇದೇ ಜೂನ್​ 1ರಿಂದ ಪ್ರತಿಷ್ಠಿತ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ ಕೂಡ ಆರಂಭಗೊಳ್ಳಲಿದೆ. ಪ್ರಧಾನ ಸ್ಪಿನ್ನರ್​ ಆಗಿರುವ ಕಾರಣ ಕುಲ್​ದೀಪ್​ ಆರೋಗ್ಯದ ಮೇಲೆ ಬಿಸಿಸಿಐ ಕೂಡ ನಿಗಾವಹಿಸಿದೆ. ಐಪಿಎಲ್​ ಆಡುತ್ತಿರುವ ಕೇಂದ್ರ ಗುತ್ತಿಗೆಗೆ ಒಳಪಟ್ಟ ಯಾವುದೇ ಭಾರತೀಯ ಆಟಗಾರ ಗಾಯಗೊಂಡೆ ತಕ್ಷಣ ಫ್ರಾಂಚೈಸಿಗಳು ಎನ್​ಸಿಎಗೆ ವರದಿ ಮಾಡುವುದು ಕಡ್ಡಾಯವಾಗಿದೆ. ಡೆಲ್ಲಿ ಆಡಿದ 4 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ.

ಅಂಕಪಟ್ಟಿ


ಶುಕ್ರವಾರ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಬಲಿಷ್ಠ ಹಾಗೂ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತಂಡವನ್ನು ಮಗುಚಿ ಹಾಕುವ ಮೂಲಕ ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad) ತಂಡ 2 ಸ್ಥಾನಗಳ ಏರಿಕೆ ಕಂಡು 5ನೇ ಸ್ಥಾನಕ್ಕೇರಿದೆ. ಚೆನ್ನೈ ಸೋಲು ಕಂಡರೂ ಕೂಡ 3ನೇ ಸ್ಥಾನದಲ್ಲೇ ಮುಂದುವರಿದಿದೆ.

ತಂಡಪಂದ್ಯಗೆಲುವುಸೋಲುಅಂಕ
ಕೋಲ್ಕೊತಾ ನೈಟ್‌ ರೈಡರ್ಸ್​3306 (+2.518)
ರಾಜಸ್ಥಾನ್​ ರಾಯಲ್ಸ್​3306 (+1.249)
​ಚೆನ್ನೈ ಸೂಪರ್​ ಕಿಂಗ್ಸ್​3214 (+0.976)
ಲಕ್ನೋ ಸೂಪರ್​ ಜೈಂಟ್ಸ್​3214(+0.483)
ಹೈದರಾಬಾದ್​​4224 (+0.409)
ಪಂಜಾಬ್​4224 (-0.220)
ಗುಜರಾತ್​​​4224 (-0.580)
ಆರ್​ಸಿಬಿ4132 (-0.876)
ಡೆಲ್ಲಿ ಕ್ಯಾಪಿಟಲ್ಸ್​4132 (-1.347)
ಮುಂಬೈ ಇಂಡಿಯನ್ಸ್​3030 (-1.423)
Exit mobile version