Site icon Vistara News

IPL 2024: ಲಕ್ನೋ ಸೂಪರ್​ ಜೈಂಟ್ಸ್​ ತಂಡಕ್ಕೆ ನಿಕೋಲಸ್ ಪೂರನ್ ಉಪನಾಯಕ

Nicholas Pooran

ಲಕ್ನೋ: 17ನೇ ಆವೃತ್ತಿಯ ಐಪಿಎಲ್(IPL 2024)​ ಕ್ರಿಕೆಟ್​ ಟೂರ್ನಿ ಆರಂಭಕ್ಕೆ ಇನ್ನು ಭರ್ತಿ ಮೂರು ವಾರಗಳು ಮಾತ್ರ ಬಾಕಿ ಉಳಿದಿದೆ. ಎಲ್ಲ ಫ್ರಾಂಚೈಸಿಗಳು ಈಗಾಗಕಲೇ ಟೂರ್ನಿಗಾಗಿ ಅಭ್ಯಾಸ ಕೂಡ ಆರಂಭಿಸಿದೆ. ಇದೀಗ ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡಕ್ಕೆ ಉಪನಾಯಕನನ್ನು ನೇಮಕ ಮಾಡಲಾಗಿದೆ. ವೆಸ್ಟ್​ ಇಂಡೀಸ್​ನ ಎಡಗೈ ಹಾರ್ಡ್​ ಹಿಟ್ಟರ್​ ನಿಕೋಲಸ್​ ಪೂರನ್​ ಅವರನ್ನು ಫ್ರಾಂಚೈಸಿ ಉಪನಾಯಕನನ್ನಾಗಿ ಆಯ್ಕೆ ಮಾಡಿದೆ. ಈ ಹಿಂದೆ ಕೃಣಾಲ್​ ಪಾಂಡ್ಯ ಉಪನಾಯಕನಾಗಿದ್ದರು.

ಲಕ್ನೋ ಸೂಪರ್​ ಜೈಂಟ್ಸ್​ ಫ್ರಾಂಚೈಸಿಯು ಪೂರನ್ ಅವರನ್ನು ವೈಸ್​ ಕ್ಯಾಪ್ಟನ್​ ಮಾಡಿದ ಸಂಗತಿಯನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಪ್ರಕಟಿಸಿದೆ. ರಾಹುಲ್​ ತೊಡೆಗಳ ಸ್ನಾಯು ಸೆಳೆದ ಚಿಕಿತ್ಸೆಗೆ ಲಂಡನ್​ನಲ್ಲಿ ಚಿಕಿತ್ಸೆಗೆ ಒಳಗಾಗಲಿದ್ದು ಐಪಿಎಲ್​ ಟೂರ್ನಿಯ ಆರಂಭಿಕ ಹಂತದ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಉಪಯನಾಯಕ ಆಯ್ಕೆ ಕೂಡ ನಡೆದಿರುವುದನ್ನು ಗಮನಿಸುವಾಗ ರಾಹುಲ್​ ಅಲಭ್ಯರಾಗುವುದು ಖಚಿತ ಎನ್ನುವಂತಿದೆ.

ಒಂದೊಮ್ಮೆ ರಾಹುಲ್​ ಮೊದಲ ಹಂತದ ಪಂದ್ಯಗಳಿಗೆ ಅಲಭ್ಯರಾದರೆ ಆಗ, ಪೂರನ್​ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಾರಿಯ ಟೂರ್ನಿಗಾಗಿ ಲಕ್ನೋ ತಂಡ ಅಂಡರ್​-19 ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ತೋರಿದ ಯುವ ಆಟಗಾರರನ್ನು ಮತ್ತು ಗಾಬಾದಲ್ಲಿ ಆಸ್ಟ್ರೇಲಿಯಾದ ಸೊಕ್ಕಡಗಿಸಿದ ವಿಂಡೀಸ್​ನ ಘಾತಕ ವೇಗಿ ಶಮರ್​ ಜೋಸೆಫ್​ ಕೂಡ ತಂಡ ಸೇರಿದ್ದಾರೆ. ಹೀಗಾಗಿ ತಂಡ ಬಲಿಷ್ಠವಾಗಿ ಗೋಚರಿಸಿದೆ.

ಇದನ್ನೂ ಓದಿ IPL 2024 : ಐಪಿಎಲ್​ ಟಿಕೆಟ್​ ಖರೀದಿ ಹೇಗೆ ಮತ್ತು ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ

ಲಕ್ನೋ ತಂಡ


ಕೆ.ಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್(ಉಪ ನಾಯಕ), ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ದೇವದತ್ತ್​ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುದ್ಧವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್​ ಜೋಸೆಫ್​, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ.ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ. ಸಿದ್ಧಾರ್ಥ್, ಆ್ಯಶ್ಟನ್​ ಟರ್ನರ್, ಡೇವಿಡ್ ವಿಲ್ಲಿ, ಮೊಹಮ್ಮದ್ ಅರ್ಷದ್ ಖಾನ್.

2024ರ ಐಪಿಎಲ್‌ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಅನೌನ್ಸ್‌ ಆಗಿದೆ. ಮೊದಲ 17 ದಿನದ ವೇಳಾಪಟ್ಟಿಯನ್ನು ಬಿಸಿಸಿಐ ಕಳೆದ ವಾರ ಪ್ರಕಟಿಸಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೆಣಸಾಟ ನಡೆಸಲಿದೆ. ಲಕ್ನೋ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್​ 24ರಂದು ರಾಜಸ್ಥಾನ್​ ವಿರುದ್ಧ ಆಡಲಿದೆ.

Exit mobile version