Site icon Vistara News

IPL 2024 : ಕೊಹ್ಲಿ- ಗಂಭೀರ್ ಮುಖಾಮುಖಿಯಲ್ಲಿ ವಿಜಯ ಯಾರಿಗೆ?

RCB team

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಋತುವಿನ ಆರಂಭಿಕ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋಲನ್ನು ಅನುಭವಿಸಿದ ಆರ್​ಸಿಬಿ. ಪಂಜಾಬ್ ಕಿಂಗ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಖಾತೆ ತೆರೆದಿದೆ.. ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ 77 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆ ಸಿದ್ದರು. ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿ ಉತ್ತಮ ಫಿನಿಶರ್ ಎನಿಸಿಕೊಂಡಿದ್ದರು. ಈ ಪಂದ್ಯವನ್ನು ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ಕೆಕೆಆರ್ ತಂಡದ ನೂತನ ಕೋಚ್​ ಗೌತಮ್ ಗಂಭೀರ್ ನಡುವಿನ ಪ್ರತಿಷ್ಠೆಯ ಹಣಾಹಣಿ ಎಂದು ಹೇಳಲಾಗಿದೆ. ಪಂದ್ಯ ಬ್ಯಾಟಿಂಗ್ ಸ್ವರ್ಗವಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಋತುವಿನ ಆರಂಭಿಕ ಪಂದ್ಯದಲ್ಲಿ ಅಲ್ಪ ಗೆಲುವು ಸಾಧಿಸಿದ ಕೆಕೆಆರ್, ಮೆಗಾ ಈವೆಂಟ್​ನ ಆರಂಭದಲ್ಲಿಯೇ ತಮ್ಮ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ವೆಸ್ಟ್ ಇಂಡೀಸ್​ನ ಆಲ್ರೌಂಡರ್ ಆಂಡ್ರೆ ರಸೆಲ್ 64 ರನ್ ಗಳಿಸುವ ಮೂಲಕ ವಿಶ್ವದ ಅತ್ಯಂತ ಅಪಾಯಕಾರಿ ಟಿ 20 ಬ್ಯಾಟರ್ ತಾವೆಂಬುದನ್ನು ತೋರಿಸಿಕೊಟ್ಟರು. ಯುವ ಆಟಗಾರ ಹರ್ಷಿತ್ ರಾಣಾ ಬೌಲಿಂಗ್​ನಲ್ಲಿ ಮಿಂಚಿ 4 ರನ್​ಗಳ ವಿರೋಚಿತ ಜಯಕ್ಕೆ ಕಾರಣರಾಗಿದ್ದರು.

ಕೊಹ್ಲಿಯ ಫಾರ್ಮ್​ ಮುಂದುವರಿಕೆ

ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ವಿರಾಟ್ ಕೊಹ್ಲಿ ಮುಂಬರುವ ಪಂದ್ಯದಲ್ಲಿ ಮತ್ತೆ ಪಂದ್ಯದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್​​ಸಿಬಿಯನ್ನು ಈ ಋತುವಿನ ಮತ್ತೊಂದು ಗೆಲುವಿನತ್ತ ಮುನ್ನಡೆಸುವ ಗುರಿಯನ್ನು ಅವರು ಹೊಂದಿದ್ದಾರೆ.

ಅತ್ತ ಸುನಿಲ್ ನರೈನ್ ಅವರ ಸ್ಪಿನ್ ಬೌಲಿಂಗ್ ಕೆಕೆಅರ್​ಗೆ ನಿರ್ಣಾಯಕವಾಗಿದೆ. ಮುಂಬರುವ ಮುಖಾಮುಖಿಯಲ್ಲಿ ಅವರು ಅತ್ಯುತ್ತಮ ಬೌಲರ್ ಆಗಬಹುದು. ಕಳೆದ ಪಂದ್ಯದಲ್ಲಿ ಅವರ ಬೌಲಿಂಗ್ ಎಕಾನಮಿ ಉತ್ತಮವಾಗಿತ್ತು. ಅದೂ ಅಲ್ಲದೆ, ಆರ್​ಸಿಬಿ ವಿರುದ್ಧ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ವರದಿ


ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್​ಗೆ ಹೆಸರುವಾಸಿಯಾಗಿದೆ. ಇದು ಸಾಮಾನ್ಯವಾಗಿ ಹೆಚ್ಚಿನ ಸ್ಕೋರಿಂಗ್​​ ಹಣಾಹಣಿಗಳನ್ನು ಕಂಡಿದೆ. ಸಣ್ಣ ಬೌಂಡರಿಗಳು ಮತ್ತು ಮಿಂಚಿನ ವೇಗದ ಔಟ್​ಫೀಲ್ಡ್​​ ಕಾರಣದಿಂದಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಎಷ್ಟೇ ದೊಡ್ಡ ಗುರಿ ಪೇರಿಸಿದರೂ ನಿರಾಳವಾಗಿಲ್ಲ. ಇದು ಕಠಿಣ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಪಂದ್ಯದಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು 200 ಕ್ಕೂ ಹೆಚ್ಚು ರನ್ ಗಳಿಸುವ ಗುರಿ ಹೊಂದಿರಬೇಕು. ‘

ಇದನ್ನೂ ಓದಿ : IPL 2024 Points Table: ಮುಂಬೈ ವಿರುದ್ಧ ಹೈದರಾಬಾದ್‌ ಗೆದ್ದ ಬಳಿಕ ಅಂಕಪಟ್ಟಿ ಹೇಗಿದೆ?

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್ ಕೀಪರ್), ಮಯಾಂಕ್ ದಾಗರ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್): ಶ್ರೇಯಸ್ ಅಯ್ಯರ್ (ನಾಯಕ), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆ್ಯಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಇತ್ತಂಡಗಳ ಮುಖಾಮುಖಿ

ಆಡಿದ ಪಂದ್ಯಗಳು: 32
ಆರ್​ಸಿಬಿ- 14 ಗೆಲುವು
ಕೆಕೆಆರ್- 18 ಗೆಲುವು
ಫಲಿತಾಂಶ ಇಲ್ಲ- 0
ಮೊದಲ ಪಂದ್ಯ- 18/04/2008
ಕೊನೆಯ ಬಾರಿ ಆಡಿದ್ದು- 26/04/2023

ಪಂದ್ಯದ ವಿವರ

ಐಪಿಎಲ್ 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿ
ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ದಿನಾಂಕ ಮತ್ತು ಸಮಯ: ಶುಕ್ರವಾರ, ಮಾರ್ಚ್ 29, ಸಂಜೆ 7:30 (ಭಾರತೀಯ ಕಾಲಮಾನ)
ಲೈವ್ ಬ್ರಾಡ್ಕಾಸ್ಟ್ ಮತ್ತು ಸ್ಟ್ರೀಮಿಂಗ್ ವಿವರಗಳು: ಸ್ಟಾರ್ ಸ್ಪೋರ್ಟ್ಸ್ ಚಾನೆಲ್​​ಗಳು, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್

Exit mobile version