ಬೆಂಗಳೂರು: ಆರ್ಸಿಬಿ(RCB) ತಂಡದ ಸತತ ಸೋಲಿಗೆ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಅವರ ಕುಡಿತದ ಚಟವೇ ಪ್ರಮುಖ ಕಾರಣ ಎಂಬ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಈ ಬಾರಿಯ ಐಪಿಎಲ್(IPL 2024) ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಾಣುತ್ತಿದ್ದಾರೆ. ಇದಕ್ಕೆ ಕಾರಣ ಅವರು ಪ್ರತಿ ದಿನ ಕಂಠ ಪೂರ್ತಿ ಕುಡಿಯುತ್ತಿರುವುದು ಎಂದು ಹೇಳಲಾಗಿದೆ.
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನದ ಮೂಲಕ ಏಕಾಂಗಿಯಾಗಿ 200 ರನ್ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಅಲ್ಲದೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಹೀಗಾಗಿ ಅವರ ಮೇಲೆ ಈ ಬಾರಿ ಆರ್ಸಿಬಿ ಹೆಚ್ಚಿನ ನಿರೀಕ್ಷೆ ಇರಿಸಿತ್ತು. ಆದರೆ ಅವರು ಆಡಿದ 5 ಪಂದ್ಯಗಳಲ್ಲಿ 2 ಶೂನ್ಯ ಸೇರಿ ಒಟ್ಟು 32 ರನ್ ಮಾತ್ರ ಬಾರಿಸಿದ್ದಾರೆ. ಅವರ ಈ ವೈಫಲಕ್ಕೆ ಅತಿಯಾದ ಕುಡಿ ಎಂದು ಮೂಲಗಳಿಂದ ತಿಳಿದುಬಂದಿದೆ.
Glenn Maxwell pic.twitter.com/xKvXSTUDHi
— RVCJ Media (@RVCJ_FB) April 6, 2024
ಪ್ರತಿ ದಿನ ಮ್ಯಾಕ್ಸ್‌ವೆಲ್ ಕುಡಿಯುತ್ತಿದ್ದು ಇದರಿಂದ ಅವರಿಗೆ ಆಟದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಪಂದ್ಯದ ಮುನ್ನ ದಿನವೂ ಕೂಡ ಅವರು ಪಾನಮತ್ತರಾಗಿರುತ್ತಾರೆ ಎಂದು ಕೆಲ ಮೂಲಗಳು ತಿಳಿಸಿವೆ. ಇದೇ ವರ್ಷಾರಂಭದಲ್ಲಿ ಮ್ಯಾಕ್ಸ್‌ವೆಲ್(Glenn Maxwell) ಅವರು ಕಂಠ ಪೂರ್ತಿ ಕುಡಿದು ಅಸ್ವಸ್ಥರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜನವರಿಯಲ್ಲಿ ಅಡಿಲೇಡ್ನಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಏರ್ಪಡಿಸಿದ್ದ ಮದ್ಯಪಾನ ಪಾರ್ಟಿಯಲ್ಲಿ ಅತಿಯಾಗಿ ಕುಡಿದ ಮ್ಯಾಕ್ಸ್‌ವೆಲ್ ಅನಾರೋಗ್ಯಕ್ಕೀಡಾದ್ದರು. ತಕ್ಷಣ ಅವರನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹಿಂದೊಮ್ಮೆ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಮ್ಯಾಕ್ಸ್‌ವೆಲ್ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಇದರಿಂದ ಬಿಗ್ ಬ್ಯಾಶ್ ಕೂಟದಿಂದ ಮ್ಯಾಕ್ಸ್‌ವೆಲ್ ಹೊರಬಿದ್ದಿದ್ದರು.
ಇದನ್ನೂ ಓದಿ IPL 2025 Mega Auction: ಮೆಗಾ ಹರಾಜಿನಲ್ಲಿ 8 ಆಟಗಾರರ ರಿಟೇನ್ಗೆ ಪಟ್ಟು ಹಿಡಿದ ಫ್ರಾಂಚೈಸಿಗಳು
Glenn Maxwell plays 1 good season in 5 years be it for Punjab or RCB 🤡 pic.twitter.com/OJfccgNDhA
— Dinda Academy (@academy_dinda) April 6, 2024
2022ರ ಮಾರ್ಚ್ 18ರಂದು ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದರು. ಅಲ್ಲದೆ ಭಾರತೀಯ ಸಂಪ್ರದಾಯದಂತೆ ಸೀಮಂತ ಕೂಡ ಮಾಡಿ ಎಲ್ಲರ ಗಮನಸೆಳೆದಿದ್ದರು. ಈ ಜೋಡಿಗೆ ಮುದ್ದಾದ ಒಂದು ಗಂಡು ಮಗುವಿದೆ. ಮಗುವಿನ ಹೆಸರು ಲೋಗನ್ ಮಾವೆರಿಕ್(Logan Maverick).
ಮುಂಬೈ ವಿರುದ್ಧ ಕಣಕ್ಕೆ
ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs MI) ತಂಡ ಗುರುವಾರದ ಐಪಿಎಲ್(IPL 2024) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಆಡುವ ಬಳಗದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. 25 ವರ್ಷದ ಸ್ಟಾರ್ ಆಲ್ರೌಂಡರ್ ವಿಲ್ ಜ್ಯಾಕ್ಸ್ ಚೊಚ್ಚಲ ಐಪಿಎಲ್ ಆಡುವ ನಿರೀಕ್ಷೆಯಲ್ಲಿದ್ದಾರೆ. ಇವರಿಗಾಗಿ ಕ್ಯಾಮರೂನ್ ಗ್ರೀನ್ ಜಾಗ ಬಿಡಬೇಕಾದೀತು. ಮ್ಯಾಕ್ಸ್ ವೆಲ್ ಕೂಡ ಅವಕಾಶ ಪಡೆಯುವುದು ಅನುಮಾನ ಎನ್ನಲಾಗಿದೆ. ಇವರ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ನ ಲಾಕಿ ಫರ್ಗ್ಯುಸನ್ ಕಣಕ್ಕಿಳಿಯಬಹುದು.