Site icon Vistara News

IPL 2024: ಮಯಾಂಕ್ ಬೆಂಕಿ ಎಸೆತಕ್ಕೆ ಚಿಲ್ಲಿಯಾದ ‘ಗ್ರೀನ್’​; ವಿಡಿಯೊ ವೈರಲ್​

Mayank Yadav

ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡದ ಯುವ ವೇಗಿ ಮಯಾಂಕ್ ಯಾದವ್(Mayank Yadav) ಮತ್ತೊಮ್ಮೆ ಐಪಿಎಲ್​ನಲ್ಲಿ(IPL 2024) ಸಂಚಲನ ಸೃಷ್ಟಿಸಿದ್ದಾರೆ. ಕಳೆದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 155.8 kmph ವೇಗದಲ್ಲಿ ಚೆಂಡೆಸೆದಿದ್ದ ಅವರು ಇದೀಗ ತಮ್ಮದೇ ದಾಖಲೆಯನ್ನು ತಿದ್ದಿ ಬರೆದಿದ್ದಾರೆ. ಮಂಗಳವಾರ ಆರ್​ಸಿಬಿ(RCB) ವಿರುದ್ಧದ ಪಂದ್ಯದಲ್ಲಿ 156.7 kmph kmph ವೇಗದಲ್ಲಿ ಬೌಲಿಂಗ್​ ನಡೆಸಿ ಗಮನಸೆಳೆದಿದ್ದಾರೆ.

ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಬೌಲಿಂಗ್​ ದಾಳಿ ನಡೆಸುತ್ತಿರುವ ಮಯಾಂಕ್​ ಭವಿಷ್ಯದ ಟೀಮ್​ ಇಂಡಿಯಾದ ವೇಗಿ ಎಂದು ಗುರುತಿಸಲ್ಪಟ್ಟಿದ್ದಾರೆ. ಇದೇ ಲಯವನ್ನು ಟೂರ್ನಿಯುದ್ದಕ್ಕೂ ತೋರ್ಪಡಿಸಿದ್ದೇ ಆದಲ್ಲಿ ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು ಅಚ್ಚರಿಯಿಲ್ಲ.

ಇದನ್ನೂ ಓದಿ IPL 2024 : ಇಶಾನ್​ ಕಿಶನ್​​ ಸೇರಿದಂತೆ ಆಟಗಾರರಿಗೆ ಶಿಕ್ಷೆ ವಿಧಿಸಿದ ಮುಂಬಯಿ ಇಂಡಿಯನ್ಸ್​ , ವಿಡಿಯೊ ಇದೆ

ಕ್ಲೀಯರ್​ ಲೆಂತ್​ ಆ್ಯಂಡ್​ ಲೈನ್​ನಲ್ಲಿ ಬೌಲಿಂಗ್​ ನಡೆಸುವ ಈ ವೇಗಿ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 4 ಓವರ್​ ಎಸೆದು ಕೇವಲ 14 ರನ್​ ನೀಡಿ 3 ವಿಕೆಟ್​ ಕಿತ್ತು ಮಿಂಚಿದರು. ಇವರ ಎಸೆತಗಳಿಗೆ ಆರ್​ಸಿಬಿ ಬ್ಯಾಟರ್​ಗಳು ಒಂದೊಂದು ರನ್​ ಗಳಿಸಲು ಕೂಡ ಪರದಾಟ ನಡೆಸಿದರು. ಕ್ಯಾಮರೂನ್​ ಗ್ರೀನ್​ ಅವರನ್ನು ಕ್ಲೀನ್​ ಬೌಲ್ಡ್​ ಮಾಡಿದ ಎಸೆತ 156.7 kmph kmph ವೇಗದಲ್ಲಿ ದಾಖಲಾಯಿತು.

ಆಸ್ಟ್ರೇಲಿಯಾದ ಮಾಜಿ ವೇಗಿ ಶಾನ್‌ ಟೈಟ್‌(Shaun Tait) ಅವರು ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಎಸೆತ ಎಸೆದ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರು 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ವೇಳೆ 157.71 Kmph ವೇಗದಲ್ಲಿ ಚೆಂಡೆಸೆದಿದ್ದರು. ಒಟ್ಟು 21 ಐಪಿಎಲ್​ ಪಂದ್ಯ ಆಡಿರುವ ಇವರು 23 ವಿಕೆಟ್​ ಪಡೆದಿದ್ದಾರೆ.​

ಆರ್​ಸಿಬಿಗೆ ಸೋಲು


ಬೇಜವಾಬ್ದಾರಿ ಆಟವನ್ನೇ ಧ್ಯೇಯವನ್ನಾಗಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್​ 2024ನೇ (IPL 2024) ಆವೃತ್ತಿಯ 15ನೇ ಪಂದ್ಯದಲ್ಲಿ ಕನ್ನಡಿಗ ಕೆ. ಎಲ್​ ರಾಹುಲ್ (KL Rahul) ನೇತೃತ್ವದ ಲಕ್ನೊ ಸೂಪರ್ ಜೈಂಟ್ಸ್ ತಂಡದ ವಿರುದ್ಧ 28 ರನ್​ಗಳ ಹೀನಾಯ ಸೋಲು ಕಂಡಿತು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಫೀಲ್ಡಿಂಗ್ ಅಯ್ಕೆ ಮಾಡಿಕೊಂಡಿತು. ಅಂತೆಯೆ ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 181 ರನ್ ಬಾರಿಸಿತು. ಬೆಂಗಳೂರು ಸ್ಟೇಡಿಯಮ್​ನಲ್ಲಿ ಗೆಲ್ಲಬಹುದಾಗಿದ್ದ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿ 19.4 ಓವರ್​ಗಳಲ್ಲಿ 153 ರನ್​ಗೆ ಆಲ್​ಔಟ್ ಆಗಿ ಶರಣಾಯಿತು.

Exit mobile version