Site icon Vistara News

IPL 2024: ನೆಚ್ಚಿನ ವಾಂಖೆಡೆ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯವನ್ನಾಡಲು ಸಜ್ಜಾದ ಧೋನಿ

IPL 2024

ಮುಂಬಯಿ: ಇಂದು ನಡೆಯುವ ಐಪಿಎಲ್​ನ(IPL 2024) ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(MI vs CSK)​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಲಿದೆ. ಈ ಪಂದ್ಯ ಧೋನಿಗೆ ಸ್ಮರಣೀಯ ಪಂದ್ಯವಾಗಲಿದೆ ಎಂದು ತಿಳಿದುಬಂದಿದೆ. ಭಾರತಕ್ಕೆ 2011ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭರ್ಜರಿ ಸಿಕ್ಸರ್​ ಸಿಡಿಸುವ ಮೂಲಕ ಗೆಲುವು ತಂದುಕೊಟ್ಟ ವಾಂಖೆಡೆ ಕ್ರೀಡಾಂಗಣದಲ್ಲಿ ಧೋನಿ(MS Dhoni) ಬಹುತೇಕ ಕೊನೇ ಪಂದ್ಯ ಆಡಲಿದ್ದಾರೆ.

ವಿದಾಯದ ಐಪಿಎಲ್​ ಟೂರ್ನಿಯನ್ನಾಡುತ್ತಿರುವ ಧೋನಿಗೆ ಇನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯಗಳಿಲ್ಲ. ಹೀಗಾಗಿ 42 ವರ್ಷದ ಧೋನಿಗೆ ವಾಂಖಡೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವೇ ಅವರ ಪಾಲಿಗೆ ಇಲ್ಲಿ ಕೊನೇ ಪಂದ್ಯವಾಗಲಿದೆ. ಧೋನಿ ಪಾಲಿಗೆ ವಾಂಖಡೆ ಸ್ಟೇಡಿಯಂ ಎನ್ನುವುದು ಮರೆಯಲಾಗದ ಮೈದಾನವಾಗಿದೆ. ಏಕೆಂದರೆ ಧೋನಿ 2005ರ ನವೆಂಬರ್​ನಲ್ಲಿ ಭಾರತ ಪರ ಇಲ್ಲಿ ಚೊಚ್ಚಲ ಪಂದ್ಯವಾನ್ನಾಡಿದ್ದರು. ಬಳಿಕ 2011ರಲ್ಲಿ ಸಿಕ್ಸರ್​ ಮೂಲಕ ಭಾರತದ ವಿಶ್ವಕಪ್​ ಗೆಲುವು ಸಾರಿದ್ದರು.

ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ವಾಂಖೆಡೆ ಸ್ಟೇಡಿಯಂನಲ್ಲಿ ಬಾರಿಸಿದ ಗೆಲುವಿನ ಸಿಕ್ಸರ್​ನ​ ಸವಿ ನೆನಪಿಗಾಗಿ ಮುಂಬೈ ಕ್ರಿಕೆಟ್​ ಅಸೋಸಿಯೇಶನ್​ ಇದೇ ಎಪ್ರೀಲ್​ನಲ್ಲಿ ಈ ಸಿಕ್ಸರ್​ ಬಡಿದ ಸೀಟ್​ಗೆ ಧೋನಿ ಅವರ ಹೆಸರನ್ನು ಇಟ್ಟಿತ್ತು. ಈ ಸೀಟ್‌ಗಳು ಒಂದು ರೀತಿ ಸೋಪಾ ರೀತಿಯಲ್ಲಿ ಇದ್ದು ಹಾಸ್ಪಿಟಾಲಿಟಿ ವ್ಯವಸ್ಥೆಯನ್ನು ಕೂಡ ಹೊಂದಿದೆ. ​

ಇದನ್ನೂ ಓದಿ IPL 2024: ಕ್ರಿಕೆಟ್​ ಅಭಿಮಾನಿಗಳಿಗೆ ಇಂದು ಭರ್ಜರಿ ರಸದೌತಣ; ಒಂದೇ ದಿನ 2 ಪಂದ್ಯ

ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 275 ರನ್​ಗಳು ಬೇಕಾಗಿದ್ದವು. ಅಂತೆಯೇ ಆರಂಭಿಕ ಬ್ಯಾಟರ್​ ಗೌತಮ್​ ಗಂಭೀರ್​ 97 ರನ್​ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಸೆಹ್ವಾಗ್​ ಸೊನ್ನೆಗೆ ಔಟಾಗಿದ್ದರೆ ಸಚಿನ್​​ ಕೊಡಗೆ 18 ರನ್​. ಆದರೆ, ಕೊನೇ ಹಂತದಲ್ಲಿ ಕ್ರೀಸ್​ಗೆ ತಳವೂರಿ ಆಡಿದ್ದ ನಾಯಕ ಧೋನಿ ಅಜೇಯ 91 ರನ್​ ಬಾರಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಅಂತೆಯೇ ಇನಿಂಗ್ಸ್​ನ ಕೊನೇ ಓವರ್​ನಲ್ಲಿ ಲಂಕಾ ಬೌಲರ್​ ನುವಾನ್​ ಕುಲಶೇಖರ ಅವರ ಎಸೆತಕ್ಕೆ ಸಿಕ್ಸರ್​ ಬಾರಿಸಿದ್ದರು. ಅದು ಭಾರತದ ವಿಜಯ ರನ್​ ಆಗಿತ್ತು. 

​ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರನ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಬ್ಯಾಟಿಂಗ್​ಗೆ ಬಂದೊಡನೆಯೇ ಸಂಪೂರ್ಣ ಸ್ಟೇಡಿಯಂ ಧೋನಿ ಹೆಸರಿನಿಂದ ಝೇಂಕಾರಿಸುತ್ತದೆ.

Exit mobile version