Site icon Vistara News

IPL 2024: ಸನ್​ರೈಸರ್ಸ್ ತಂಡಕ್ಕೆ ಪ್ಯಾಟ್​ ಕಮಿನ್ಸ್ ನೂತನ ನಾಯಕ

Pat Cummins

ಹೈದರಾಬಾದ್​: ನಿರೀಕ್ಷೆಯಂತೆ ಸನ್​ರೈಸರ್ಸ್ ಹೈದರಾಬಾದ್​(SunRisers Hyderabad) ಫ್ರಾಂಚೈಸಿ ಈ ಬಾರಿಯ ಐಪಿಎಲ್(IPL 2024)​ ಟೂರ್ನಿಗಾಗಿ ತಂಡಕ್ಕೆ ನೂತನ ನಾಯಕನನ್ನು ನೇಮಕ ಮಾಡಿದೆ. ವಿಶ್ವಕಪ್​ ವಿಜೇತ, ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್(Pat Cummins)​ ಅವರಿಗೆ ನಾಯಕತ್ವ ನೀಡಿದೆ. ಈ ಹಿಂದೆ ನಾಯಕನಾಗಿದ್ದ ಐಡೆನ್​ ಮಾರ್ಕ್ರಮ್​ ಅವರನ್ನು ಕೆಳಗಿಳಿಸಲಾಗಿದೆ.

ಕೆಲವು ದಿನಗಳಿಂದಲೇ ಪ್ಯಾಟ್​ ಕಮಿನ್ಸ್​ ಅವರನ್ನು ಹೈದರಾಬಾದ್ ತಂಡಕ್ಕೆ ನಾಯಕನನ್ನಾಗಿ ಮಾಡಲಾಗುವುದು ಎಂದು ವರದಿಯಾಗಿತ್ತು. ಆದರೆ, ಅಧಿಕೃತ ಮುದ್ರೆಯೊಂದು ಬೀಳಲು ಬಾಕಿ ಇತ್ತು. ಇದೀಗ ಅಧಿಕೃತಗೊಂಡಿದೆ. 17ನೇ ಆವೃತ್ತಿಯಲ್ಲಿ ಅವರು ಸನ್​ರೈಸರ್ಸ್​ ತಂಡವನ್ನು ಮುನ್ನಡೆಸಲಿದ್ದಾರೆ.

ಐಡೆನ್​ ಮಾರ್ಕ್ರಮ್​ ಅವರು ಸೌತ್​ ಆಫ್ರಿಕಾ ಲೀಗ್​ನಲ್ಲಿ ಚೊಚ್ಚಲ ಆವೃತ್ತಿಯಲ್ಲಿಯೇ ತಂಡಕ್ಕೆ ಕಪ್​ ಗೆದ್ದುಕೊಟ್ಟಿದ್ದರು. ಹೀಗಾಗಿ ಅವರುನ್ನು ಕಳೆದ ಬಾರಿ ಹೈದರಾಬಾದ್​ ತಂಡಕ್ಕೆ ನಾಯಕನನ್ನಾಗಿ ಮಾಡಲಾಗಿತ್ತು. ಆದರೆ, ಅವರ ಸಾರಥ್ಯದಲ್ಲಿ ತಂಡ ಅತ್ಯಂತ ಹೀನಾಯ ಪ್ರದರ್ಶನ ತೋರಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.

ತಂಡಕ್ಕೆ ಸೂಕ್ತ ನಾಯಕನ ಅಗತ್ಯದಿಂದಲೇ ಈ ಬಾರಿಯ ಹರಾಜಿನಲ್ಲಿ ಹೈದರಾಬಾದ್ ಜಿದ್ದಿಗೆ ಬಿದ್ದು ಪ್ಯಾಟ್​ ಕಮಿನ್ಸ್​ ಅವರನ್ನು 20.5 ಕೋಟಿಗೆ ಅವರನ್ನು ಖರೀದಿಸಿತ್ತು. ಕಮಿನ್ಸ್​ ಏಕದಿನ ಮತ್ತು ಟೆಸ್ಟ್​ ವಿಶ್ವಕಪ್​ ಗೆದ್ದ ಯಶಸ್ವಿ ನಾಯಕನಾಗಿದ್ದಾರೆ. ಇದೀಗ ಅವರ ನಾಯಕತ್ವದಲ್ಲಿ ಸನ್​ರೈಸರ್ಸ್​ ಕೂಡ ಈ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸೀತೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ IPL 2024 : ಸಿಎಸ್​ಕೆ ತಂಡಕ್ಕೆ ಆಘಾತ; ಆರಂಭಿಕ ಬ್ಯಾಟರ್​ ಟೂರ್ನಿಗೆ ಅಲಭ್ಯ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೆಣಸಾಟ ನಡೆಸಲಿದೆ. ಹೈದರಾಬಾದ್​ ತಂಡ ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೇಡರ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಮಾರ್ಚ್​ 23ರಂದು ಈಡನ್​ ಗಾರ್ಡನ್​ನಲ್ಲಿ ನಡೆಯಲಿದೆ.

ಹೈದರಾಬಾದ್ ತಂಡ


ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಅನ್ಮೋಲ್ಪ್ರೀತ್ ಸಿಂಗ್, ಉಪೇಂದ್ರ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ವಾಷಿಂಗ್ಟನ್ ಸುಂದರ್, ಸನ್ವಿರ್ ಸಿಂಗ್, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಮಯಾಂಕ್ ಮಾರ್ಕಂಡೆ, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮ್ಮಿನ್ಸ್, ಜಯದೇವ್ ಉನದ್ಕತ್ ಮತ್ತು ಜಾತವೇಧ್ ಸುಬ್ರಹ್ಮಣ್ಯನ್.

Exit mobile version