Site icon Vistara News

IPL 2024 Points Table: ರಾಜಸ್ಥಾನ್​ಗೆ ಸತತ 2ನೇ ಗೆಲುವು; ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

Avesh Khan bowled a nerveless last over going for just four runs

ಜೈಪುರ: ಪ್ರಸಕ್ತ ಸಾಗುತ್ತಿರುವ ಐಪಿಎಲ್​ (IPL 2024) ಟೂರ್ನಿಯಲ್ಲಿ 9 ಪಂದ್ಯಗಳು ಮುಕ್ತಾಯಕಂಡಿದೆ. ಅಚ್ಚರಿ ಎಂದರೆ ಈ 9 ಪಂದ್ಯಗಳಲ್ಲಿಯೂ ತವರಿನ ತಂಡವೇ ಗೆಲುವು ಸಾಧಿಸಿದ್ದು. ಗುರುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​(Rajasthan Royals) ಸತತ 2 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಮತ್ತೆ ಹಿಡಿತ ಸಾಧಿಸಿದೆ. ಡೆಲ್ಲಿ(Delhi Capitals) ಸತತ 2 ಸೋಲು ಕಂಡರೂ ಕೂಡ 8ನೇ ಸ್ಥಾನದಲ್ಲಿದೆ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
​ ಚೆನ್ನೈ ಸೂಪರ್​ ಕಿಂಗ್ಸ್​2204 (+1.979)
ರಾಜಸ್ಥಾನ್​ ರಾಯಲ್ಸ್2204 (+0.800)
ಸನ್​ರೈಸರ್ಸ್​ ಹೈದರಾಬಾದ್​2112 (+0.675)
ಕೋಲ್ಕೊತಾ ನೈಟ್‌ ರೈಡರ್ಸ್1102(+200)
ಪಂಜಾಬ್‌ ಕಿಂಗ್ಸ್2112‌ (+0.025)
ಆರ್‌ಸಿಬಿ2112 (-0.180)
ಗುಜರಾತ್‌ ಟೈಟಾನ್ಸ್2112 (-1.425)
ಡೆಲ್ಲಿ ಕ್ಯಾಪಿಟಲ್ಸ್2020 (–0.528)
ಮುಂಬೈ ಇಂಡಿಯನ್ಸ್2020 (-1000)
ಲಕ್ನೋ ಸೂಪರ್​ ಜೈಂಟ್ಸ್​1010 (-1.000)

ಇಂದು ನಡೆಯುವ ಆರ್​ಸಿಬಿ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಪಂದ್ಯದಲ್ಲಿ ಕೆಕೆಆರ್​ ಗೆದ್ದರೆ 2ನೇ ಸ್ಥಾನಕ್ಕೇರುವ ಅವಕಾಶವಿದೆ. ಆರ್​ಸಿಬಿ ಗೆದ್ದರೆ ಮೂರನೇ ಸ್ಥಾನಕ್ಕೇರಲಿದೆ. ಉಭಯ ತಂಡಗಳ ನಡುವಣ ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ IPL 2024: ಇಂದು ಆರ್‌ಸಿಬಿ- ಕೆಕೆಆರ್‌ ಪಂದ್ಯ; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

ಡೆಲ್ಲಿಗೆ ಮತ್ತೆ ಸೋಲು

ರಿಯಾನ್ ಪರಾಗ್​ (84 ರನ್​, 45 ಎಸೆತ, 7 ಫೋರ್, 6 ಸಿಕ್ಸರ್​) ಅವರ ಸ್ಫೋಟಕ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ಬೌಲಿಂಗ್ ದಾಳಿಯ ಮೂಲಕ ಮಿಂಚಿದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capital) ವಿರುದ್ಧ 12 ರನ್​ಗಳ ಗೆಲುವು ಸಾಧಿಸಿತು.

ಸವಾಯ್​ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 185 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 175 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಹಂತದಲ್ಲಿ ಡೆಲ್ಲಿ ತಂಡದ ಟ್ರಿಸ್ಟಾನ್​ ಸ್ಟಬ್ಸ್ 23 ಎಸೆತಕ್ಕೆ 44 ರನ್ ಬಾರಿಸಿದರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

Exit mobile version