Site icon Vistara News

IPL 2024 Points Table: ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಚೆನ್ನೈ; ಉಳಿದ ತಂಡದ ಸ್ಥಿತಿ ಹೇಗಿದೆ?

IPL 2024 Points Table

ಚೆನ್ನೈ: ಸತತ ಹ್ಯಾಟ್ರಿಕ್​​ ಗೆಲುವಿನೊಂದಿಗೆ ಮುನ್ನುಗುತ್ತಿದ್ದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡದ ಈ ಅಜೇಯ ಓಟಕ್ಕೆ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಬ್ರೇಕ್​ ಹಾಕಿದೆ. ಚೆನ್ನೈ ಈ ಗೆಲುವಿನ ಮೂಲಕ 6 ಅಂಕ ಗಳಿಸಿ ಅಂಕಪಟ್ಟಿಯಲ್ಲಿ(IPL 2024 Points Table) 4ನೇ ಸ್ಥಾನಕ್ಕೇರಿದೆ. ಕೆಕೆಆರ್​ ಹಿಂದಿನಂತೆ 2ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಕೆಕೆಆರ್ ಗೆಲುವು ಸಾಧಿಸುತ್ತಿದ್ದರೆ ಅಗ್ರಸ್ಥಾನಕ್ಕೇರಬಹುದಿತ್ತು. ಆದರೆ ಸೋಲಿನಿಂದ ಇದು ಸಾಧ್ಯವಾಗಲಿಲ್ಲ. ಲಕ್ನೋ ಸೂಪರ್​ ಜೈಂಟ್ಸ್​ ತಂಡ ಮೂರನೇ ಸ್ಥಾನದಲ್ಲೇ ಉಳಿದಿದೆ.

​ಇಂದಿನ ಪಂದ್ಯ


ಇಂದು ನಡೆಯುವ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ಬಲಿಷ್ಠ ಸನ್​ರೈಸರ್ಸ್ ಹೈದರಾಬಾದ್​ ತಂಡಗಳು ಸೆಣಸಾಟ ನಡೆಸಲಿದೆ. ಹೈದರಾಬಾದ್​ ಗೆದ್ದರೆ ಅಂಕಪಟ್ಟಿಯಲ್ಲಿ ಚೆನ್ನೈ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನ ಪಡೆಯಬಹುದು. ಏಕೆಂದರೆ ಹೈದರಾಬಾದ್​ ತಂಡದ ರನ್​ರೇಟ್​ ಉತ್ತಮವಾಗಿದೆ. ಪಂಜಾಬ್​ ಗೆದ್ದರೆ ಹೈದರಾಬಾದ್​ ಒಂದು ಸ್ಥಾನ ಕುಸಿತ ಕಾಣಲಿದೆ.

ನೂತನ ಅಂಕಪಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​4408 (+1.120)
ಕೆಕೆಆರ್​​4316 (+1.528)
ಲಕ್ನೋ ಸೂಪರ್​ ಜೈಂಟ್ಸ್​4316 (+0.775)
ಚೆನ್ನೈ ಸೂಪರ್​ ಕಿಂಗ್ಸ್​​5324(+0.666)
ಹೈದರಾಬಾದ್​​4224 (+0.409)
ಪಂಜಾಬ್​4224 (-0.220)
ಗುಜರಾತ್​​​5234 (-0.797)
ಮುಂಬೈ4132 (-0.704)
ಆರ್​ಸಿಬಿ5142 (-0.843)
ಡೆಲ್ಲಿ ಕ್ಯಾಪಿಟಲ್ಸ್​5142 (-1.370)

ಪಂದ್ಯ ಗೆದ್ದ ಚೆನ್ನೈ


ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಚೆನ್ನೈ ಬಳಗ ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ ನಷ್ಟಕ್ಕೆ 141 ರನ್ ಬಾರಿಸಿ ಗೆಲುವು ಸಾಧಿಸಿತು. ಋತುರಾಜ್ ಗಾಯಕ್ವಾಡ್​ (67 ರನ್​) ಸಮಯೋಚಿತ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ದಾಳಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಇದನ್ನೂ ಓದಿ IPL 2024 : ಗೆಲುವಿನ ಹಳಿಗೆ ಮರಳಿದ ಚೆನ್ನೈ, ಕೆಕೆಆರ್​ಗೆ ಮೊದಲ ಸೋಲು

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಹೊರಟ ಚೆನ್ನೈ ತಂಡದ ಪರ ರಚಿನ್ ರವೀಂದ್ರ ಮತ್ತೊಂದು ಬಾರಿ ವೈಫಲ್ಯ ಎದುರಿಸಿದರು. ಅವರು 15 ರನ್ ಬಾರಿಸಿ ಔಟಾದರು. ಈ ವೇಳೆ ತಂಡದ ಮೊತ್ತ 27 ಆಗಿತ್ತು. ಬಳಿಕ ಜತೆಯಾದ ಡ್ಯಾರಿಲ್​ ಮಿಚೆಲ್​ (25) ಋತುರಾಜ್​ಗೆ ಉತ್ತಮ ಸಾಥ್​ ಕೊಟ್ಟರು. ಈ ಜೋಡಿ ತಂಡದ ಮೊತ್ತವನ್ನು 97ರ ತನಕ ಕೊಂಡೊಯ್ದರು. ಹೀಗಾಗಿ ಚೆನ್ನೈಗೆ ಗೆಲುವಿನ ವಿಶ್ವಾಸ ಮೂಡಿತು. ಆದರೆ, ನರೈನ್ ಎಸೆತಕ್ಕೆ ಬೌಲ್ಡ್​ ಅದ ಮಿಚೆಲ್​ ನಿರಾಸೆಯಿಂದ ಹೊರನಡೆದರು. ಆ ಬಳಿಕ ಕ್ರೀಸ್​ಗೆ ಬಂದ ಚೆನ್ನೈ ತಂಡದ ಆಪದ್ಭಾಂದವ ಶಿವಂ ದುಬೆ ಮುನ್ನಡೆ ಕಲ್ಪಿಸಿ ಕೊಟ್ಟರು. ಋತುರಾಜ್​ ಕೊನೇ ತನಕ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟರು.

Exit mobile version