Site icon Vistara News

IPL 2024 Points Table: ಡೆಲ್ಲಿಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಆರ್​ಸಿಬಿ

IPL 2024 Points Table

ಲಕ್ನೋ: ಸತತ ಸೋಲಿನಿಂದ ಕಂಗೆಟ್ಟಿದ್ದ ರಿಷಭ್​ ಪಂತ್​ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡ ಕೊನೆಗೂ ಗೆಲುವಿನ ಹಳಿ ಏರಿದೆ. ಶುಕ್ರವಾರದ ಪಂದ್ಯದಲ್ಲಿ(IPL 2024) ಲಕ್ನೋ ಸೂಪರ್​ಜೈಂಟ್ಸ್(Lucknow Super Giants)​ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಒಂದು ಸ್ಥಾನ ಮೇಲೇರಿದೆ. ಡೆಲ್ಲಿ ಗೆಲುವಿನಿಂದಾಗಿ ಆರ್​ಸಿಬಿ ಕೊನೆಯ ಸ್ಥಾನ ಪಡೆಯುವಂತಾಗಿದೆ. ಮೂರನೇ ಸ್ಥಾನಿಯಾಗಿದ್ದ ಲಕ್ನೋ ಸೋಲಿನಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ನಾಲ್ಕನೇ ಸ್ಥಾನದಲ್ಲಿದ್ದ ಚೆನ್ನೈ ಮೂರನೇ ಸ್ಥಾನಕ್ಕೇರಿದೆ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​5418 (+0.871)
ಕೆಕೆಆರ್​​4316 (+1.528)
ಚೆನ್ನೈ ಸೂಪರ್​ ಕಿಂಗ್ಸ್​​5326 (+0.666)
ಲಕ್ನೋ ಸೂಪರ್​ಜೈಂಟ್ಸ್​5326(+0.436)
ಹೈದರಾಬಾದ್​​5326 (+0.344)
ಗುಜರಾತ್​6336 (-0.637)
ಮುಂಬಯಿ​​​​5234 (-0.073)
ಪಂಜಾಬ್5234 (-0.196)
ಡೆಲ್ಲಿ ಕ್ಯಾಪಿಟಲ್ಸ್​6244 (-0.975)
ಆರ್​ಸಿಬಿ6152 (-1.124)

ಡೆಲ್ಲಿಗೆ 6 ವಿಕೆಟ್​ ಜಯ


ಇಲ್ಲಿನ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 167 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ಗೆ 170 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ತಂಡಕ್ಕೆ ಸೋಲುಣಿಸಿ ಗೆಲುವಿನ ಹಳಿಗೆ ಮರಳಿತು. ರಿಷಭ್ ಪಂತ್ ಕೂಡ ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಅವರು 24 ಎಸೆತಕ್ಕೆ 41 ರನ್ ಬಾರಿಸಿದರು.

ಇದನ್ನೂ ಓದಿ IPL 2024 : ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ತಂಡಕ್ಕೆ 6 ವಿಕೆಟ್​ ವಿಜಯ

ಇಂದಿನ ಪಂದ್ಯ


ಟೂರ್ನಿಯಲ್ಲಿ ಸತತ ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ರಾಜಸ್ಥಾನ್​ ರಾಯಲ್ಸ್​ಗೆ(PBKS vs RR) ಕಳೆದ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಬ್ರೇಕ್​ ಹಾಕಿತ್ತು. ಇದೀಗ ಮತ್ತೆ ಗೆಲುವಿನ ಹಳಿ ಏರಲು ಸಜ್ಜಾಗಿರುವ ಸಂಜು ಪಡೆ​ ಶನಿವಾರದ ಐಪಿಎಲ್​ ಮುಖಾಮುಖಿಯಲ್ಲಿ ಪಂಜಾಬ್​ ಕಿಂಗ್ಸ್(Punjab Kings)​ ತಂಡದ ಸವಾಲು ಎದುರಿಸಲಿದೆ. ಪಂದ್ಯ ಪಂಜಾಬ್‌ ತವರು ಅಂಗಳದಲ್ಲಿ ನಡೆಯುತ್ತಿರುವ ಕಾರಣಕ್ಕಾಗಿ ಶಿಖರ್​ ಪಡೆಗೆ ಗೆಲುವಿನ ಸಾಧ್ಯತೆ ತುಸು ಹೆಚ್ಚು ಎನ್ನಲಡ್ಡಿಯಿಲ್ಲ.

Exit mobile version