Site icon Vistara News

IPL 2024 Points Table: ರಾಜಸ್ಥಾನ್​ಗೆ ಮೊದಲ ಸೋಲು; ಅಂಕಪಟ್ಟಿಯಲ್ಲಿ ಪ್ರಮುಖ ಬದಲಾವಣೆ

IPL 2024 Points Table

ಜೈಪುರ: ಸತತ ನಾಲ್ಕು ಗೆಲುವಿನೊಂದಿಗೆ ಅಜೇಯ ಓಟ ಮುಂದುವರಿಸಿದ್ದ ರಾಜಸ್ಥಾನ್​ ರಾಯಲ್ಸ್​ನ(Rajasthan Royals) ಈ ಓಟಕ್ಕೆ ಗುಜರಾತ್​ ಟೈಟಾನ್ಸ್​ ತಂಡ ಬ್ರೇಕ್​ ಹಾಕುವಲ್ಲಿ ಯಶಸ್ಸು ಸಾಧಿಸಿದೆ. ಗುಜರಾತ್(Gujarat Titans)​ ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ(IPL 2024 Points Table) ಒಂದು ಸ್ಥಾನಗಳ ಪ್ರಗತಿ ಸಾಧಿಸಿದೆ. ಪಂಬಾಬ್​ ಕಿಂಗ್ಸ್​ ಒಂದು ಸ್ಥಾನ ಕುಸಿತ ಕಂಡಿದೆ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​5418 (+0.871)
ಕೆಕೆಆರ್​​4316 (+1.528)
ಲಕ್ನೋ ಸೂಪರ್​ ಜೈಂಟ್ಸ್​4316 (+0.775)
ಚೆನ್ನೈ ಸೂಪರ್​ ಕಿಂಗ್ಸ್​​5324(+0.666)
ಹೈದರಾಬಾದ್​​5326 (+0.344)
ಗುಜರಾತ್​6336 (-0.637)
ಪಂಜಾಬ್​​​​5234 (-0.196)
ಮುಂಬೈ4132 (-0.704)
ಆರ್​ಸಿಬಿ5142 (-0.843)
ಡೆಲ್ಲಿ ಕ್ಯಾಪಿಟಲ್ಸ್​5142 (-1.370)

ರೋಚಕ ಗೆಲುವು


ಜೈಪುರದ ಮಾನ್​ಸಿಂಗ್​ ಸ್ಟೇಡಿಯಂನಲ್ಲಿ ಬುಧವಾರ ನಡೆದ ರೋಚಕ ಐಪಿಎಲ್(IPL 2024)​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ರಾಜಸ್ಥಾನ್​ ರಾಯಲ್ಸ್​, ನಾಯಕ ಸಂಜು ಸ್ಯಾಮ್ಸನ್(68)​ ಮತ್ತು ರಿಯಾನ್​ ಪರಾಗ್(74)​ ಅವರ ವಿಸ್ಫೋಟಕ ಬ್ಯಾಟಿಂಗ್​ ಹಾಗೂ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 196 ರನ್​ ಬಾರಿಸಿತು. ಜವಾಬಿತ್ತ ಗುಜರಾತ್​ ತಂಡ ದಿಟ್ಟ ಬ್ಯಾಟಿಂಗ್​ ಹೋರಾಟ ನಡೆಸಿ ಭರ್ತಿ 20 ಓವರ್​ ಆಡಿ 7 ವಿಕೆಟ್​ ನಷ್ಟಕ್ಕೆ 199 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಇದನ್ನೂ ಓದಿ IPL 2024 : ಶೇನ್​ ವಾರ್ನ್​ ದಾಖಲೆ ಮುರಿದ ಯಜ್ವೇಂದ್ರ ಚಹಲ್​

ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಗುಜರಾತ್​ ತಂಡಕ್ಕೆ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್​ ಗಿಲ್​ ಬಿರುಸಿನ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸಿದರು. ಗಿಲ್​ ಮತ್ತು ಸಾಯಿ ಮೊದಲ ವಿಕೆಟ್​ಗೆ 64 ರನ್​ ಒಟ್ಟುಗೂಡಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಗಿಲ್​ 2 ಸಿಕ್ಸರ್​ ಮತ್ತು 6 ಬೌಂಡರಿ ನೆರವಿನಿಂದ 72 ರನ್​ ಬಾರಿಸಿದರು. ಇವರ ಜತೆಗಾರ ಸಾಯಿ ಸುರ್ದಶನ್​ 35 ರನ್​ ಗಳಿಸಿದರು. ಇನ್ನೇನು ಗುಜರಾತ್​ ಸೋಲುತ್ತದೆ ಎನ್ನುವಷ್ಟರಲ್ಲಿ ಅಂತಿಮ ಹಂತದಲ್ಲಿ ರಾಹುಲ್​ ತೆವಾಟಿಯ ಮತ್ತು ರಶೀದ್​ ಖಾನ್​ ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 12 ಎಸೆತಗಳಲ್ಲಿ ಗೆಲುವಿಗೆ 35 ರನ್​ ಗಳಿಸುವ ಸವಾಲನ್ನು ಮೆಟ್ಟಿ ನಿಂತರು. ತೆವಾಟಿಯ 11 ಎಸೆತಗಳಿಂದ 22 ರನ್​​ ಬಾರಿಸಿದರೆ, ರಶೀದ್​ ಖಾನ್​ 11 ಎಸೆತಗಳಲ್ಲಿ ಅಜೇಯ 24 ರನ್​ ಚಚ್ಚಿದರು. 

Exit mobile version