ಬೆಂಗಳೂರು: ಮಂಗಳವಾರ ನಡೆದ ಅತ್ಯಂತ ರೋಚಕ(IPL 2024) ಹಾಗೂ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ಮತ್ತು ಪಂಜಾಬ್ ಕಿಂಗ್ಸ್(Punjab Kings) ನಡುವಣ ಪಂದ್ಯದಲ್ಲಿ ಕೊನೆಗೂ ಹೈದರಾಬಾದ್ ತಂಡದ 2 ರನ್ ಅಂತರದಿಂದ ಗೆದ್ದು ನಿಟ್ಟುಸಿರು ಬಿಟ್ಟಿತ್ತು. ಹೈದರಾಬಾದ್ ಗೆಲುವಿನಿಂದ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭಸಿವಿಲ್ಲ. ಈ ಹಿಂದೆ ಇದ್ದ ಸ್ಥಾನದಲ್ಲೇ ಎಲ್ಲ ತಂಡಗಳು ಮುಂದುವರಿದೆ. ಆದರೆ ಹೈದರಾಬಾದ್ ಅಂಕ ಮಾತ್ರ ಬದಲಾವಣೆಯಾಗಿದೆ. ಸೋಲು ಕಂಡ ಪಂಜಾಬ್ ತಂಡದ ರನ್ ರೇಟ್ ಕುಸಿತ ಕಂಡಿದೆ.
ನೂತನ ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 4 | 4 | 0 | 8 (+1.120) |
ಕೆಕೆಆರ್ | 4 | 3 | 1 | 6 (+1.528) |
ಲಕ್ನೋ ಸೂಪರ್ ಜೈಂಟ್ಸ್ | 4 | 3 | 1 | 6 (+0.775) |
ಚೆನ್ನೈ ಸೂಪರ್ ಕಿಂಗ್ಸ್ | 5 | 3 | 2 | 4(+0.666) |
ಹೈದರಾಬಾದ್ | 5 | 3 | 2 | 6 (+0.344) |
ಪಂಜಾಬ್ | 5 | 2 | 3 | 4 (-0.196) |
ಗುಜರಾತ್ | 5 | 2 | 3 | 4 (-0.797) |
ಮುಂಬೈ | 4 | 1 | 3 | 2 (-0.704) |
ಆರ್ಸಿಬಿ | 5 | 1 | 4 | 2 (-0.843) |
ಡೆಲ್ಲಿ ಕ್ಯಾಪಿಟಲ್ಸ್ | 5 | 1 | 4 | 2 (-1.370) |
2 ರನ್ ಅಂತರದ ಗೆಲುವು
ನಿನ್ನೆ(ಮಂಗಳವಾರ) ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 6 ವಿಕೆಟ್ ನಷ್ಟಕ್ಕೆ 180 ರನ್ ಬಾರಿಸಿ ಕೇವಲ 2 ರನ್ಗಳಿಂದ ಸೋಲೊಪ್ಪಿಕೊಂಡಿತು. ಮತ್ತೊಂದು ವಿರೋಚಿತ ಹೋರಾಟ ಸಂಘಟಿಸಿದ ಶಶಾಂಕ್ ಸಿಂಗ್ (46) ಅವರ ಪ್ರಯತ್ನ ವ್ಯರ್ಥಗೊಂಡಿತು.
ಇದನ್ನೂ ಓದಿ IPL 2024 : ಸನ್ರೈಸರ್ಸ್ ಬಳಗಕ್ಕೆ ವಿಜಯ, ಪಂಜಾಬ್ ತಂಡಕ್ಕೆ ಸೋಲು
ಇಂದಿನ ಪಂದ್ಯ
ಆಡಿದ 4 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಕೂಡ ಅಜೇಯ ತಂಡ ಎನಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್(RR vs GT) ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಪಂದ್ಯವನ್ನಾಡಲು ಸಜ್ಜಾಗಿದೆ. ಬುಧವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(Gujarat Titans) ತಂಡದ ಸವಾಲು ಎದುರಿಸಲಿದೆ. ಈ ಪಂದ್ಯಕ್ಕೆ ಸವಾಯಿ ಮಾನ್ ಸಿಂಗ್ ಸ್ಟೇಡಿಯಂ ಅಣಿಯಾಗಿದೆ.
Aaj hum aur aap, SMS mein padosiyon ke saath. 💗😍 pic.twitter.com/u50CUen5Ub
— Rajasthan Royals (@rajasthanroyals) April 10, 2024
ಮುಖಾಮುಖಿ
ಇತ್ತಂಡಗಳ ಮುಖಾಮುಖಿ ನೋಡುವುದಾದರೆ ಈವರೆಗೆ 5 ಪಂದ್ಯಗಳನ್ನಾಡಿವೆ. ಈ ಪೈಕಿ ಗುಜರಾತ್ ಗರಿಷ್ಠ 4 ಪಂದ್ಯ ಗೆದ್ದು ಬೀಗಿದೆ. ರಾಜಸ್ಥಾನ್ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಗುಜರಾತ್ ಮುಂದಿದ್ದರೂ ಕೂಡ ಅಂದಿನ ತಂಡಕ್ಕೂ ಈಗ ಇರುವ ತಂಡಕ್ಕೂ ಭಾರೀ ವ್ಯತ್ಯಾಸವಿದೆ. ಈಗ ರಾಜಸ್ಥಾನ್ ಬಲಿಷ್ಠವಾಗಿದೆ.
ಉಭಯ ತಂಡಗಳು
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಹಾಲ್.
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಶರತ್ ಬಿಆರ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ದರ್ಶನ್ ನಲ್ಕಂಡೆ, ಮೋಹಿತ್ ಶರ್ಮಾ.