Site icon Vistara News

IPL 2024 POINTS TABLE: ಕೆಕೆಆರ್​ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

IPL 2024 POINTS TABLE

ಮುಂಬಯಿ: ಶುಕ್ರವಾರ ರಾತ್ರಿ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians)​ ತಂಡ ತವರಿನಲ್ಲೇ ಕೆಕೆಆರ್(Kolkata Knight Riders)​ ವಿರುದ್ಧ 24 ರನ್​​ ಅಂತರದ ಸೋಲು ಕಂಡಿತು. ಈ ಸೋಲಿನಿಂದ ಮುಂಬೈಯ ಪ್ಲೇ ಆಫ್​ ಆಸೆ ಬಹುತೇಕ ಕಮರಿ ಹೋಗಿದೆ. ಅಂಕಪಟ್ಟಿಯಲ್ಲಿ(IPL 2024 POINTS TABLE) 9ನೇ ಸ್ಥಾನದಲ್ಲಿರುವ ಹಾರ್ದಿಕ್​ ಪಡೆಗೆ ಇನ್ನು ಮೂರು ಪಂದ್ಯಗಳು ಮಾತ್ರ ಬಾಕಿ ಉಳಿದಿದೆ. ಈ ಪಂದ್ಯ ಗೆದ್ದರೂ ಕೂಡ ಯಾವುದೇ ಲಾಭವಿಲ್ಲ.

ಕೆಕೆಆರ್​ ಗೆಲುವು ಸಾಧಿಸಿ 14 ಅಂಕದೊಂದಿಗೆ ಪ್ಲೇ ಆಫ್​ ಸನಿಹಕ್ಕೆ ಬಂದು ನಿಂತಿದೆ. ಸದ್ಯ 2ನೇ ಸ್ಥಾನದಲ್ಲಿರುವ ಕೆಕೆಆರ್​ಗೆ ಇನ್ನು 4 ಪಂದ್ಯಗಳು ಬಾಕಿ ಉಳಿದಿವೆ. ಈ ಪೈಕಿ ಕನಿಷ್ಠ 1 ಪಂದ್ಯ ಗೆದ್ದರೂ ಪ್ಲೇ ಆಫ್​ ಪ್ರವೇಶಿಸಬಹುದು. ಇಂದು ನಡೆಯುವ ಆರ್​ಸಿಬಿ ಮತ್ತು ಗುಜರಾತ್​ ಟೈಟಾನ್ಸ್​ ಮುಖಾಮುಖಿಯಾಗಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಪ್ಲೇ ಆಫ್​ ಪ್ರವೇಶದ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​107314 (+1.098)
ಲಕ್ನೋ​​106412 (+0.094)
ಹೈದರಾಬಾದ್​106512 (+0.072)
ಚೆನ್ನೈ​105510 (+0.627)
ಡೆಲ್ಲಿ115610 (-0.442)
ಪಂಜಾಬ್​10488 (-0.062)
ಗುಜರಾತ್​10468 (-1.113)
ಮುಂಬೈ11386 (-0.356)
ಆರ್​ಸಿಬಿ10376 (-0.415)

ತವರಿನಲ್ಲೇ ಸೋಲಿನ ಮುಖಭಂಗ

ವಾಖೆಂಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ 19.5 ಓವರ್​ಗಳಲ್ಲಿ 169 ರನ್​ಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ 18.5 ಓವರ್​​ 145 ರನ್​ಗಳಿಗೆ ಶರಣಾಗಿ ಸೋಲೊಪ್ಪಿಕೊಂಡಿತು. ಕೆಕೆಅರ್​ ಪರ ಬ್ಯಾಟಿಂಗ್​ನಲ್ಲಿ ವೆಂಕಟೇಶ್​ ಅಯ್ಯರ್​ (70) ಅರ್ಧ ಶತಕ ಬಾರಿಸಿ ಮಿಂಚಿದರೆ ಬೌಲಿಂಗ್​ನಲ್ಲಿ ಮಿಚೆಲ್ ಸ್ಟಾರ್ಕ್​ 4 ವಿಕೆಟ್ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ IPL 2024 : ಮುಂಬೈ ವಿರುದ್ಧ ಕೆಕೆಆರ್​ಗೆ 24 ರನ್​ ಗೆಲುವು; ಪಾಂಡ್ಯಾ ಬಳಗಕ್ಕೆ ಮತ್ತೊಂದು ಆಘಾತ

ಬ್ಯಾಟಿಂಗ್​ ಪೂರಕವಾಗಿದ್ದ ಟ್ರ್ಯಾಕ್​ನಲ್ಲಿ ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಕೆಕೆಆರ್​ 57 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಈ ವೇಳೆ ವೆಂಕಟೇಶ್ ಅಯ್ಯರ್ ಹಾಗೂ ಹಾಲಿ ಆವೃತ್ತಿಯಲ್ಲಿ ಮೊದಲ ಅವಕಾಶ ಪಡೆದ ಮನೀಶ್ ಪಾಂಡೆ 42 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರಿಬ್ಬರ ನೆರವಿನಿಂದ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ಕೆಕೆಆರ್​ಗೆ ಸಾಧ್ಯವಾಯಿತು. ಅಂಗ್​ಕ್ರಿಶ್​ ರಘುವಂಶಿ 13 ರನ್ ಬಾರಿಸಿ ಕೆಕೆಆರ್​ ಪರ ಎರಡಂಕಿ ಮೊತ್ತ ದಾಟಿದ ಎರಡನೇ ಆಟಗಾರ ಎನಿಸಿಕೊಂಡರು. ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

Exit mobile version