Site icon Vistara News

IPL 2024 Points Table: ರಾಜಸ್ಥಾನವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​

IPL 2024 Points Table

ವಿಶಾಖಪಟ್ಟಣಂ: ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧ ಬುಧವಾರ ನಡೆದ ಬೃಹತ್​ ಮೊತ್ತದ ಐಪಿಎಲ್(IPL 2024)​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡ 106 ರನ್​ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಅಗ್ರಸ್ಥಾನ ಪಡೆದುಕೊಂಡಿತು. ಇದಕ್ಕೂ ಮುನ್ನ ಅಗ್ರಸ್ಥಾನಿಯಾಗಿದ್ದ ರಾಜಸ್ಥಾನ್​ ರಾಯಲ್ಸ್​ ತಂಡ ಒಂದು ಸ್ಥಾನ ಕುಸಿತ ಕಂಡು ದ್ವಿತೀಯ ಸ್ಥಾನಿಯಾಗಿದೆ. ಉಭಯ ತಂಡಗಳು ಕೂಡ ಆಡಿದ ಮೂಉ ಪಂದ್ಯಗಳನ್ನು ಗೆದ್ದು ತಲಾ 6 ಅಂಕ ಪಡೆದಿವೆ. ಆದರೆ, ರನ್​ರೇಟ್​ ಧಾರಣೆಯಲ್ಲಿ ಕೆಕೆಆರ್​ ಮುಂದಿರುವ ಕಾರಣ ಮೊದಲ ಸ್ಥಾನ ಪಡೆದಿದೆ. ಹಾಲಿ ಚಾಂಪಿಯನ್​ ಚೆನ್ನೈ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ನೂತನ ಅಂಕಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕ
ಕೋಲ್ಕೊತಾ ನೈಟ್‌ ರೈಡರ್ಸ್​3306 (+2.518)
ರಾಜಸ್ಥಾನ್​ ರಾಯಲ್ಸ್​3306 (+1.249)
​ಚೆನ್ನೈ ಸೂಪರ್​ ಕಿಂಗ್ಸ್​3214 (+0.976)
ಲಕ್ನೋ ಸೂಪರ್​ ಜೈಂಟ್ಸ್​3214(+0.483)
ಗುಜರಾತ್​ ಟೈಟಾನ್ಸ್​3212‌ (-0.738)
ಸನ್​ರೈಸರ್ಸ್​ ಹೈದರಾಬಾದ್​3112 (+0.204)
ಪಂಜಾಬ್​ ಕಿಂಗ್ಸ್​3122 (-0.337)
ಆರ್​ಸಿಬಿ4132 (-0.876)
ಡೆಲ್ಲಿ ಕ್ಯಾಪಿಟಲ್ಸ್​4132 (-1.347)
ಮುಂಬೈ ಇಂಡಿಯನ್ಸ್​3030 (-1.423)

ಕೆಕೆಆರ್​ಗೆ ಹ್ಯಾಟ್ರಿಕ್​ ಗೆಲುವು


ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಕೆಕೆಆರ್​ ಫುಲ್​ ಜೋಶ್​ನಲ್ಲಿ ಬ್ಯಾಟಿಂಗ್​ ನಡೆಸಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​​ಗೆ ಬರೋಬ್ಬರಿ 272 ರನ್​ ಬಾರಿಸಿತು. ಈ ಬೃಹತ್​ ಮೊತ್ತವನ್ನು ಕಂಡು ಕಂಗಾಲಾದ ಡೆಲ್ಲಿ ಕ್ಯಾಪಿಟಲ್ಸ್​ 17.2 ಓವರ್​ಗಳಲ್ಲಿ 166 ರನ್​ ಬಾರಿಸಿ ಸರ್ವಪತನ ಕಂಡಿತು. ಕೋಲ್ಕತ್ತಾ ತಂಡ 106ರನ್​ ಗೆಲುವು ಸಾಧಿಸಿತು. ಕೆಕೆಆರ್​ ಪರ ವೈಭವ್ ಅರೋರಾ ಮತ್ತು ವರುಣ್​ ಚರ್ಕವರ್ತಿ ಘಾತಕ ಬೌಲಿಂಗ್​ ನಡೆಸಿ ತಲಾ 3 ವಿಕೆಟ್​ ಕಿತ್ತರು. 24.75 ಕೋಟಿ ವೀರ ಮಿಚೆಲ್​ ಸ್ಟಾರ್ಕ್​ ಅವರು ಈ ಪಂದ್ಯದಲ್ಲಿ ಗಮನಾರ್ಹ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ 2 ವಿಕೆಟ್​ ಪಡೆದರು.

ಇದನ್ನೂ ಓದಿ IPL 2024: ಆರ್​ಸಿಬಿ ದಾಖಲೆ ಮುರಿದು ಐಪಿಎಲ್​ನ 2ನೇ ಗರಿಷ್ಠ ರನ್​ ರೆಕಾರ್ಡ್ ಮಾಡಿದ ಕೆಕೆಆರ್​

ಕೆಕೆಆರ್​ ಪರ ಆರಂಭದಿಂದಲೇ ಜಿದ್ದಿಗೆ ಜಿದ್ದವರಂತೆ ಬ್ಯಾಟಿಂಗ್​ ನಡೆಸಿದ ಸುನೀಲ್​ ನರೈನ್​ ಮತ್ತು ಆಂಗ್‌ಕ್ರಿಶ್ ರಘುವಂಶಿ ಅರ್ಧಶತಕ ಬಾರಿಸಿ ಮಿಂಚಿದರು. ಉಭಯ ಆಟಗಾರರ ಸೇರಿಕೊಂಡು ದ್ವಿತೀಯ ವಿಕೆಟ್​ಗೆ ಅತ್ಯಮೂಲ್ಯ 104 ರನ್​ಗಳ ಜತೆಯಾಟ ನಡೆಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. 100ನೇ ಐಪಿಎಲ್​ ಪಂದ್ಯವನ್ನಾಡಿದ ಖಲೀಲ್​ ಅಹ್ಮದ್​ 43 ರನ್​ ಹೊಡೆಸಿಕೊಂಡು 1 ವಿಕೆಟ್​ ಕಿತ್ತರು.

ಸುನೀಲ್​ ನರೈನ್​ ಅವರು 10 ರನ್​ ಗಳಿಸುವ ಮುನ್ನವೇ ಟಿಪ್​ ಕ್ಯಾಚ್​ ಆಗಿ ವಿಕೆಟ್​ ಕಳೆದುಕೊಳ್ಳಬೇಕಿತ್ತು. ಆದರೆ ಪಂತ್​ ಅವರು ತಡವರಿಸಿ ರಿವ್ಯೂ ಪಡೆದು ಜೀವದಾನ ನೀಡಿದರು. ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಅವರು ಡೆಲ್ಲಿ ಬೌಲಿಂಗ್​ ದಾಳಿಯನ್ನು ಚಿಂದಿ ಮಾಡಿದರು. ತಲಾ 7 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ 39 ಎಸೆತಗಳಿಂದ 85 ರನ್​ ಚಚ್ಚಿದರು. 18 ವರ್ಷದ ಆಂಗ್‌ಕ್ರಿಶ್ ರಘುವಂಶಿ ಕೇವಲ 27 ಎಸೆತಗಳಿಂದ 54 ರನ್​ ಗಳಿಸಿ ಚೊಚ್ಚಲ ಐಪಿಎಲ್​ ಅರ್ಧಶತಕ ಬಾರಿಸಿದರು.

ಡೆಲ್ಲಿಗೆ ಆಸರೆಯಾದದ್ದು ನಾಯಕ ರಿಷಭ್​ ಪಂತ್ ಮತ್ತು ಟ್ರಿಸ್ಟಾನ್ ಸ್ಟಬ್ಸ್. ಉಭಯ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ಕೆಲ ಕಾಲ ಹೊಡಿ-ಬಡಿ ಆಟವಾಡಿ ಅರ್ಧಶತಕ ಬಾರಿಸಿ ತಂಡ ಗೆಲುವಿವಾಗಿ ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಉಳಿದ ಆಟಗಾರರಿಂದ ಇದೇ ಪ್ರದರ್ಶನ ಕಂಡು ಬಾರದೆ ತಂಡ ಸೋಲು ಕಂಡಿತು. ಕಾರು ಅಪಘಾತದಿಂದ 14 ತಿಂಗಳು ಕ್ರಿಕೆಟ್​ನಿಂದ ದೂರ ಉಳಿದಿದ್ದ ಪಂತ್​ ಅವರು ತಮ್ಮ ಹಳೇಯ ಶೈಲಿಯ ಬ್ಯಾಟಿಂಗ್​ ಪ್ರದರ್ಶನ​ ಮತ್ತೊಮ್ಮೆ ತೋರಿಸಿಕೊಟ್ಟರು. ಅಂತಿಮವಾಗಿ 5 ಸಿಕ್ಸರ್​ ಮತ್ತು 4 ಬೌಂಡರಿ ನೆರವಿನಿಂದ 55 ರನ್​ ಗಳಿಸಿದರು.

Exit mobile version