Site icon Vistara News

IPL 2024 Points Table: ಆರ್​ಸಿಬಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಿದ ಕೆಕೆಆರ್​

IPL 2024 Points Table

ಬೆಂಗಳೂರು: ಶುಕ್ರವಾರ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಕೆಕೆಆರ್​(Kolkata Knight Riders) ವಿರುದ್ಧ ಹೀನಾಯ ಸೋಲು ಕಂಡಿದೆ. ಇದು ಈ ಆವೃತ್ತಿಯ ಟೂರ್ನಿಯಲ್ಲಿ ತವರಿನ ತಂಡಕ್ಕೆ ಎದುರಾದ ಮೊದಲ ಸೋಲು. ಇದಕ್ಕೂ ಮುನ್ನ ಆಡಿದ 9 ಪಂದ್ಯಗಳಲ್ಲಿಯೂ ತವರಿನ ತಂಡವೇ ಗೆದ್ದು ಬೀಗಿತ್ತು. ಸದ್ಯ ಅಂಕಪಟ್ಟಿಯಲ್ಲಿ(IPL 2024 Points Table) ಯಾವ ತಂಡ ಯಾವ ಸ್ಥಾನದಲ್ಲಿದೆ ಎನ್ನುವ ಮಾಹಿತಿ ಇಂತಿದೆ.

ಕೆಕೆಆರ್​ ಗೆಲುವಿನಿಂದ ರಾಜಸ್ಥಾನ್​ ರಾಯಲ್ಸ್​ ಒಂದು ಸ್ಥಾನ ಕುಸಿತ ಕಂಡಿದೆ. ಕೆಕೆಆರ್​ 2ನೇ ಸ್ಥಾನಕ್ಕೇರಿದರೆ, ರಾಜಸ್ಥಾನ್​ 2ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಆರ್​ಸಿಬಿ ಸೋಲು ಕಂಡರೂ ಕೂಡ ಈ ಹಿಂದಿನ ಆರನೇ ಸ್ಥಾನದಲ್ಲೇ ಮುಂದುವರಿದಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
​ ಚೆನ್ನೈ ಸೂಪರ್​ ಕಿಂಗ್ಸ್​2204 (+1.979)
ಕೋಲ್ಕೊತಾ ನೈಟ್‌ ರೈಡರ್ಸ್2204 (+1.047)
ರಾಜಸ್ಥಾನ್​ ರಾಯಲ್ಸ್​​2204 (+0.800)
ಸನ್​ರೈಸರ್ಸ್​ ಹೈದರಾಬಾದ್2102(+0.675)
ಪಂಜಾಬ್‌ ಕಿಂಗ್ಸ್3122‌ (+0.025)
ಆರ್‌ಸಿಬಿ2112 (-0.711)
ಗುಜರಾತ್‌ ಟೈಟಾನ್ಸ್2112 (-1.425)
ಡೆಲ್ಲಿ ಕ್ಯಾಪಿಟಲ್ಸ್2020 (–0.528)
ಮುಂಬೈ ಇಂಡಿಯನ್ಸ್2020 (-1000)
ಲಕ್ನೋ ಸೂಪರ್​ ಜೈಂಟ್ಸ್​1010 (-1.000)

ಇಂದಿನ ಪಂದ್ಯ

ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ಸೆಣಸಾಟ ನಡೆಸಲಿದೆ. ಈ ಲಕ್ನೋಗೆ ಇದು ಮೊದಲ ತವರಿನ ಪಂದ್ಯದವಾಗಿದೆ. ಪಂಜಾಬ್​ ಈಗಾಗಲೇ ಆಡಿದ 2 ಪಂದ್ಯಗಳ ಪೈಕಿ ಒಂದನ್ನು ಗೆದ್ದು ಮತ್ತೊಂದರಲ್ಲಿ ಸೋಲು ಕಂಡಿದೆ. ಲಕ್ನೋ ಒಂದೇ ಪಂದ್ಯ ಆಡಿ ಇದರಲ್ಲಿ ಸೋಲು ಕಂಡಿದೆ. ಇದೀಗ ಗೆಲುವಿನ ಶುಭಾರಂಭಕ್ಕಾಗಿ ಇಂದು ಶಕ್ತಿ ಮೀರಿ ಪ್ರಯತ್ನಿಸುವ ಇರಾದೆಯಲ್ಲಿದೆ.

ಇದನ್ನೂ ಓದಿ IPL 2024: ಹಾರ್ದಿಕ್​ ಪಾಂಡ್ಯ ಮೇಲೆ ಬೌಲಿಂಗ್​ ಕೋಚ್​ ಮುನಿಸು; ವಿಡಿಯೊ ವೈರಲ್​​

7 ವಿಕೆಟ್​ ಸೋಲು


ದುರ್ಬಲ ಬೌಲಿಂಗ್ ಹಾಗೂ ನಿಯಂತ್ರಣವಿಲ್ಲ ಬ್ಯಾಟಿಂಗ್ ಹಾಗೂ ಕಳಪೆ ಫೀಲ್ಡಿಂಗ್​ಗೆ ಬೆಲೆ ತೆತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಕೋಲ್ಕೊತಾ ನೈಟ್​ ರೈಡರ್ಸ್​ (Kolkata Knight Riders) ವಿರುದ್ಧದ ಐಪಿಎಲ್​ (IPL 2024) ಪಂದ್ಯದಲ್ಲಿ 7 ವಿಕೆಟ್​ಗಳ ಹೀನಾಯ ಸೋಲಿಗೆ ತುತ್ತಾಯಿತು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಅಂತೆಯೇ ಬ್ಯಾಟಿಂಗ್​ಗೆ ನೆರವು ನೀಡುವ ಪಿಚ್​ನಲ್ಲಿ ಕುಂಟುತ್ತಾ ರನ್ ಪೇರಿಸಿ ನಿಗದಿತ 20 ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ಗೆ 182 ರನ್ ಬಾರಿಸಿತು. ಇದಕ್ಕೆ ಪ್ರತಿಯಾಗಿ ಆಡಿದ ನೈಟ್​ರೈಡರ್ಸ್​ ಬಳಗ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ. ಇನ್ನೂ 19 ಎಸೆತಗಳ ಬಾಕಿ ಇರುವಂತೆಯೇ 3 ವಿಕೆಟ್​ಗೆ 186 ರನ್ ಬಾರಿಸಿ ಗೆಲುವು ಸಾಧಿಸಿತು.

Exit mobile version