Site icon Vistara News

IPL 2024 Points Table: ಡೆಲ್ಲಿ ಕ್ಯಾಪಿಟಲ್ಸ್​ ಸೋಲಿನ ಬಳಿಕ ಹೀಗಿದೆ ಅಂಕಪಟ್ಟಿ

IPL 2024 Points Table

ಕೋಲ್ಕತ್ತಾ: ಸೋಮವಾರ ರಾತ್ರಿ ನಡೆದ ಐಪಿಎಲ್​(IPL 2024) ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡ ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ವಿರುದ್ಧ ಭರ್ಜರಿ 7 ವಿಕೆಟ್​ ಅಂತರದ ಗೆಲುವು ಸಾಧಿಸಿತು. ಡೆಲ್ಲಿ ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ(IPL 2024 Points Table) ಹಿಂದಿನಂತೆ 6ನೇ ಸ್ಥಾನದಲ್ಲೇ ಮುಂದುವರಿದಿದೆ. ಕೆಕೆಆರ್​ 2ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಸೋಲಿನಿಂದ ಪಂತ್​ ಪಡೆಯ ಪ್ಲೇ ಆಫ್​ ಪಯಣ ಕೂಡ ದುರ್ಗಮಗೊಂಡಿದೆ. ಇನ್ನುಳಿದ 3 ಪಂದ್ಯಗಳನ್ನು ಕೂಡ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಡೆಲ್ಲಿ ಪ್ಲೇ ಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ. ಸದ್ಯ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿರುವ ಕೆಕೆಆರ್​ಗೆ ಇನ್ನೂ 5 ಪಂದ್ಯಗಳು ಬಾಕಿ ಉಳಿದಿವೆ. ಈ ಪೈಕಿ ಕನಿಷ್ಠ 2 ಪಂದ್ಯ ಗೆದ್ದರೂ ಪ್ಲೇ ಆಫ್​ ಟಿಕೆಟ್​ ಖಚಿತಗೊಳ್ಳಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​96312 (+1.096)
ಚೆನ್ನೈ​​95410 (+0.810)
ಹೈದರಾಬಾದ್​95410 (+0.075)
ಲಕ್ನೋ95410 (+0.059)
ಡೆಲ್ಲಿ115610 (-0.442)
ಗುಜರಾತ್​10468 (-1.113)
ಪಂಜಾಬ್9368 (-0.187)
ಮುಂಬೈ9366 (-0.261)
ಆರ್​ಸಿಬಿ10376 (-0.415)

ಇಲ್ಲಿನ ಐತಿಹಾಸಿಕ ಕ್ರಿಕೆಟ್​ ಸ್ಟೇಡಿಯಂ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಸೋಮವಾರದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ​ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) 16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಇಂದಿನ ಪಂದ್ಯ


ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(LSG vs MI)​ ಮತ್ತು ಸತತವಾಗಿ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್​ ಸೆಣಸಾಟ ನಡೆಸಲಿದೆ. ಸದ್ಯ ಮುಂಬೈ ಅಂಕಪಟ್ಟಿಯಲ್ಲಿ 9ನೇ ಸ್ಥಾನಿಯಾಗಿರುವ ಮುಂಬೈಗೆ ಪ್ಲೇ ಆಫ್​ ಆಸೆ ಜೀವಂತವಿರಿಸಬೇಕಿದ್ದರೆ ಇದು ಮಸ್ಟ್​ ವಿನ್​ ಗೇಮ್​ ಆಗಿದೆ. ಲಕ್ನೋಗೂ ಕೂಡ ಮಹತ್ವದ ಪಂದ್ಯವಾಗಿದೆ.

ಇದನ್ನೂ ಓದಿ IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

ಮುಂಬೈ ತಂಡದಲ್ಲಿ ನಾಯಕತ್ವ ಬದಲಾವಣೆ ಬಳಿಕ ಯಾರು ಕೂಡ ಸಂಘಟಿತ ಪ್ರದರ್ಶನ ತೋರುತಿಲ್ಲ. ಇಶಾನ್​ ಕಿಶನ್​, ಸೂರ್ಯಕುಮಾರ್​ ಯಾದವ್​, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ ಅವರಂತಹ ಘಟಾನುಘಟಿ ಆಟಗಾರರಿದ್ದರೂ ಕೂಡ ತಂಡಕ್ಕಾಗಿ ಆಡುತ್ತಿಲ್ಲ. ಸೋತರೂ ಗೆದ್ದರೂ ಕೂಡ ಜೋಶ್​ ಕಾಣುತ್ತಿಲ್ಲ. ನೂತನ ನಾಯಕ ಹಾರ್ದಿಕ್​ ಪಾಂಡ್ಯ ಕೂಡ ಗಂಭೀರವಾಗಿ ಆಡುತ್ತಿಲ್ಲ. ಅವರ ವರ್ತನೆಗಳೇ ವಿಚಿತ್ರವಾಗಿ ಗೋಚರಿಸಿದೆ.

Exit mobile version